ಸಾರಾಂಶ
ಕನ್ನಡನಾಡು ನುಡಿಯ ಹಬ್ಬವಾದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಈ ಬಾರಿ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವುದು ನಮ್ಮೆಲ್ಲರಿಗೂ ಹರ್ಷ ತಂದಿದೆ .
ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಹಾರ ಕೊಡುವ ಮೂಲಕ ಆಹಾರದಲ್ಲಿರುವ ತಾರತಮ್ಯವನ್ನು ಕೊನೆಗಾಣಿಸಬೇಕು ಎಂದು ಕರ್ನಾಟಕ ರಕ್ಷಣ ವೇದಿಕೆ ಶಿವರಾಮೇಗೌಡರ ಬಣದ ಮುಖಂಡರು ಆಗ್ರಹಿಸಿದ್ದಾರೆ. ಈ ಕುರಿತು ಅಪರ ಜಿಲ್ಲಾಧಿಕಾರಿಗಳು, ಸಮ್ಮೇಳನ ಆಹಾರ ಸಮಿತಿ ಅಧ್ಯಕ್ಷರಾದ ಶಾಸಕ ರಮೇಶ ಬಂಡಿಸಿದ್ದೇಗೌಡರ ಕಚೇರಿಗೆ ಮನವಿ ಸಲ್ಲಿಸಿರುವ ಮುಖಂಡರು, ಕನ್ನಡನಾಡು ನುಡಿಯ ಹಬ್ಬವಾದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಈ ಬಾರಿ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವುದು ನಮ್ಮೆಲ್ಲರಿಗೂ ಹರ್ಷ ತಂದಿದೆ ಎಂದು ತಿಳಿಸಿದ್ದಾರೆ. ಸಂವಿಧಾನದ ಆರ್ಟಿಕಲ್ 51ಎ(ಎಚ್ ) ಆಧಾರದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಮಾಂಸಹಾರ ಮತ್ತು ಸಸ್ಯಹಾರ ಎರಡು ಬಗೆಯ ಆಹಾರವನ್ನು ಈ ಸಮ್ಮೇಳನದಲ್ಲಿ ಕೊಟ್ಟು ಮಾಂಸಾಹಾರದ ಬಗ್ಗೆ ಇರುವ ತಾರತಮ್ಯ ತೊಡೆದು ಹಾಕಬೇಕು ಎಂದು ಮನವಿ ಮಾಡಿದರು. ಮನವಿ ಸಲ್ಲಿಸುವ ವೇಳೆ ಕರವೇ ಮುಖಂಡರಾದ ಎಚ್.ಡಿ.ಜಯರಾಂ, ಶಿವರಾಮೇಗೌಡ, ಮನು ಸೇರಿದಂತೆ ಮುಖಂಡರು ಇದ್ದರು.