ಕೆಎಂಸಿಯಲ್ಲಿ ಕರ್ನಾಟಕದ ಮೊದಲ ಸಿಂಕೋಪ್- ಪೇಸ್‌ಮೇಕರ್ ಕ್ಲಿನಿಕ್‌ ಆರಂಭ

| Published : Apr 19 2024, 01:00 AM IST

ಕೆಎಂಸಿಯಲ್ಲಿ ಕರ್ನಾಟಕದ ಮೊದಲ ಸಿಂಕೋಪ್- ಪೇಸ್‌ಮೇಕರ್ ಕ್ಲಿನಿಕ್‌ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಸಿಂಕೋಪ್ ಅಂದರೆ ಇದು ಮೂರ್ಛೆ ಅಥವಾ ಮೆದುಳು ಮತ್ತು ಹೃದಯ ಸಂಬಂಧಿತ ಕಾಯಿಲೆಯಾಗಿದೆ. ಇದು ಮೆದುಳಿಗೆ ರಕ್ತದ ಹರಿವು ಕಡಿಮೆಯಾಗುವುದರಿಂದ ಉಂಟಾಗುವ ಪ್ರಜ್ಞೆಯ ನಷ್ಟವಾಗಿದೆ. ಇದರ ವಿಶೇಷ ಆರೈಕೆಯ ಅಗತ್ಯವನ್ನು ಗುರುತಿಸಿ, ಮಣಿಪಾಲದಲ್ಲಿ ಸಿಂಕೋಪ್ ಕ್ಲಿನಿಕ್‌ ಸ್ಥಾಪಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಣಿಪಾಲ

ಉತ್ತಮ ಆರೋಗ್ಯ ಸೇವೆಗಳನ್ನು ನೀಡುವ ಗುರಿಯನ್ನು ಹೊಂದಿರುವ ಮಣಿಪಾಲ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹೃದ್ರೋಗ ವಿಭಾಗವು ವಿಶೇಷ ಚಿಕಿತ್ಸೆ ನೀಡಲು ಸಿಂಕೋಪ್ ಮತ್ತು ಪೇಸ್‌ಮೇಕರ್ ಕ್ಲಿನಿಕ್‌ಗಳನ್ನು ಆರಂಭಿಸಿದೆ. ಇದು ಕರ್ನಾಟಕದಲ್ಲಿ ಮೊದಲ ಮತ್ತು ದೇಶದ ಕೆಲವೇ ಕೆಲವು ವಿಶೇಷ ಸಿಂಕೋಪ್ ಕ್ಲಿನಿಕ್‌ಗಳಲ್ಲಿ ಒಂದಾಗಿದೆ.

ಸಿಂಕೋಪ್ ಅಂದರೆ ಇದು ಮೂರ್ಛೆ ಅಥವಾ ಮೆದುಳು ಮತ್ತು ಹೃದಯ ಸಂಬಂಧಿತ ಕಾಯಿಲೆಯಾಗಿದೆ. ಇದು ಮೆದುಳಿಗೆ ರಕ್ತದ ಹರಿವು ಕಡಿಮೆಯಾಗುವುದರಿಂದ ಉಂಟಾಗುವ ಪ್ರಜ್ಞೆಯ ನಷ್ಟವಾಗಿದೆ. ಇದರ ವಿಶೇಷ ಆರೈಕೆಯ ಅಗತ್ಯವನ್ನು ಗುರುತಿಸಿ, ಮಣಿಪಾಲದಲ್ಲಿ ಸಿಂಕೋಪ್ ಕ್ಲಿನಿಕ್‌ ಸ್ಥಾಪಿಸಲಾಗಿದೆ.

ಎಂಕೋಪ್ಸ್ ರೋಗಿಗಳಿಗೆ ಅತ್ಯಾಧುನಿಕ ರೋಗ ನಿರ್ಣಯ ಸೌಲಭ್ಯ, ಚಿಕಿತ್ಸೆ ನೀಡುತ್ತದೆ. ಹೃದ್ರೋಗ ತಜ್ಞರು, ನರರೋಗ ತಜ್ಞರು ಮತ್ತು ಎಲೆಕ್ಟ್ರೋಫಿಸಿಯಾಲಜಿಸ್ಟ್‌ಗಳು ಸೇರಿದಂತೆ ಬಹುತಜ್ಞರ ನೇತೃತ್ವದ ತಂಡವು ನಿಖರ ಕಾರಣಗಳನ್ನು ಪತ್ತೆ ಮಾಡಿ ಪರಿಣಾಮಕಾರಿ ಆರೈಕೆ ನೀಡುತ್ತದೆ.

ಪೇಸ್‌ಮೇಕರ್ ಕ್ಲಿನಿಕ್ ರೋಗಿಯ ಹೃದಯದ ಬಡಿತವನ್ನು ನಿಯಂತ್ರಿಸಲು ಮಧ್ಯಸ್ಥಿಕೆಯ ಸಾಧನ ಅಳವಡಿಸುವ ಚಿಕಿತ್ಸೆ ನೀಡಲಿದೆ. ಈ ವ್ಯವಸ್ಥೆಯ ಮೌಲ್ಯಮಾಪನಗಳು, ವಿಶ್ಲೇಷಣೆ ಮತ್ತು ಪ್ರೋಗ್ರಾಮಿಂಗ್ ಸೇವೆಗಳ ಮೂಲಕ ರೋಗಿಗೆ ಅತ್ಯುತ್ತಮ ಫಲಿತಾಂಶಗಳನ್ನು ಖಾತ್ರಿಪಡಿಸುತ್ತದೆ.

ಮಾಹೆ ಮಣಿಪಾಲದ ಕುಲಪತಿ ಲೆ.ಜ. (ಡಾ) ಎಂ.ಡಿ ವೆಂಕಟೇಶ್ ಅವರು ಈ ಕ್ಲಿನಿಕನ್ನು ಉದ್ಘಾಟಿಸಿದರು. ಸಹಕುಲಪತಿ ಡಾ. ಶರತ್ ಕುಮಾರ್ ರಾವ್, ಎಂಕೋಪ್ಸ್ ಡೀನ್ ಡಾ.ಜಿ.ಅರುಣ್ ಮಯ್ಯ , ಕೆೆಂಸಿ ಡೀನ್ ಪದ್ಮರಾಜ್ ಹೆಗ್ಡೆ, ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಹೃದ್ರೋಗ ವಿಭಾಗ ಮುಖ್ಯಸ್ಥ ಡಾ.ಪದ್ಮಕುಮಾರ್ ಆರ್. ತಜ್ಞವೈದ್ಯ ಡಾ. ಟಾಮ್ ದೇವಾಸಿಯಾ, ಸಹಪ್ರಾಧ್ಯಾಪಕ ಡಾ. ಮುಕುಂದ್ ಎ. ಪ್ರಭು, ಪ್ರಾದ್ಯಾಪಕ ಡಾ ಕೃಷ್ಣಾನಂದ ನಾಯಕ್ ಉಪಸ್ಥಿತರಿದ್ದರು. ಸಹ ಪ್ರಾಧ್ಯಾಪಕ ಡಾ.ಗಣೇಶ್ ವಂದಿಸಿದರು. ಡಾ.ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.