ರನ್ನರ್ಸ್‌ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟ ಕರ್ನಾಟಕ

| Published : May 01 2025, 12:48 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ: ಗೋವಾದ ಪಣಜಿಯ ಕಂಪಾಲ ಮೈದಾನದಲ್ಲಿ ನಡೆದ ರಾಷ್ಟ್ರೀಯ ಟೆನ್ನಿಸ್‌ ಬಾಲ್‌ ಪುರುಷರ ಟೆನ್ನಿಸ್‌ಬಾ್‌ ಕ್ರಿಕೆಟ್‌ ಚಾಂಪಿಯನಶಿಪ್‌ನಲ್ಲಿ ಅತಿಥೇಯ ಗೋವಾ ತಂಡದ ವಿರುದ್ಧ ಅಂತಿಮ ಪಂದ್ಯದಲ್ಲಿ 26 ಓಟಗಳಿಂದ ಸೋಲು ಪಂದ್ಯಾವಳಿಯ ಫೇವರೇಟ್‌ ಆಗಿದ್ದ ಕರ್ನಾಟಕ ರಾಜ್ಯ ತಂಡ ರನ್ನರ್ಸ್‌ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಗೋವಾ ತಂಡ ನಿಗದಿತ 8 ಓವರ್‌ನಲ್ಲಿ ಭರ್ಜರಿ 115 ಓಟ ಗಳಿಸಿ 6 ಹುದ್ದರಿಗಳನ್ನು ಕಳೆದುಕೊಂಡಿತು. ನಂತರ 116 ಓಟಗಳ ಗುರಿಯೊಂದಿಗೆ ಬ್ಯಾಟಿಂಗ್‌ಗೆ ಇಳಿದ ಕರ್ನಾಟಕ ತಂಡ, ಉತ್ತಮ ಆರಂಭದ ಹೊರತಾಗಿ ಮಧ್ಯಮ ಹಾಗೂ ಕೆಳ ಕ್ರಮಾಂಕದ ಆಟಗಾರರ ವೈಫಲ್ಯದಿಂದ ಗುರಿ ತಲುಪಲು ವಿಫಲವಾಯಿತು.

ನಾಯಕ ಮುರಳಿ ಹಾಗೂ ಸತತ 4 ಸಿಕ್ಸರ್‌ ಬಾರಿಸಿ ಗೆಲುವಿನ ಆಸೆ ಚಿಗುರಿಸಿದ ಫಹಾದ ಹುಸೇನ್‌ ಅವರ ಹೋರಾಟ ಫಲ ಕೊಡಲಿಲ್ಲ. ಕೊನೆಗೆ ನಿಗದಿತ 8 ಓವರ್‌ನಲ್ಲಿ 8 ಹುದ್ದರಿಗಳನ್ನು 89 ಓಟಗಳಿಸಿ ಸೋಲೊಪ್ಪಿಕೊಂಡಿತು. ಪಂದ್ಯಾವಳಿಯುದ್ದಕ್ಕೂ ಅಮೋಘ ಆಲರಉ್ಡ್‌ ಆಟದಿಂದ ಸರಣಿ ಪುರುಷ ಪ್ರಶಸ್ತಿ ಪಡೆದರು.ರನ್ನರ್ಸ್‌ ಅಪ್ ಸ್ಥಾನ ಪಡೆದ ಕರ್ನಾಟಕ ರಾಜ್ಯ ಟೆನ್ನಿಸ್‌ ಬಾಲ್‌ ಕ್ರಿಕೆಟ್‌ ತಂಡದ ನಾಯಕ ಮುರಳಿ, ಮುಖ್ಯ ತರಬೇತುದಾರ ಡಾ.ಅಶೋಕಕುಮಾರ ಜಾಧವ, ರಾಜ್ಯ ಸಂಸ್ಥೆಯ ಅಧ್ಯಕ್ಷೆ ಶಹೀದಾ ಬೇಗಂ ಹಕೀಮ ಇದ್ದರು.