ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದಲ್ಲಿ ಸೋಮವಾರ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷೆ ಡಾ. ಸಂಧ್ಯಾ ಪುರೆಚ್ ಅವರೊಂದಿಗೆ ಸಂವಾದ ಏರ್ಪಡಿಸಲಾಗಿತ್ತು.ಡಾ.ಸಂಧ್ಯಾ ಪುರೆಚ್ ಅವರು ವಿಶ್ವವಿದ್ಯಾಲಯದ ನೂತನ ಅಂತರ್ಜಾಲವನ್ನು ಅನಾವರಣ ಗೊಳಿಸಿದರು.
ನಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸಂಗೀತ ನಾಟಕ ಅಕಾಡಮಿಯ ಎಲ್ಲಾ ಯೋಜನೆಗಳು, ಮತ್ತು ಸಹಾಯಧನದ ಮಾಹಿತಿ, ಯುವ ಕಲಾವಿದರಿಗೆ ಇರುವ ಶಿಷ್ಯವೇತನದ ಸಹಾಯದನದ ಮಾಹಿತಿ ನೀಡಿದರು.ಅಲ್ಲದೆ ವಯಸ್ಸಿನ ಭೇದವಿಲ್ಲದೆ ಎಲ್ಲಾ ಕಲಾವಿದರು ಅಕಾಡೆಮಿಯ ಜಾಲತಾಣದಲ್ಲಿ ತಮ್ಮ ಸ್ವವಿವರವನ್ನು ನೀಡಬೇಕು. ಇದರಿಂದ ಕಲಾವಿದರನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸಲು ಮತ್ತು ನಮ್ಮ ಸಂಸ್ಕೃತಿಯ ಉಳಿವಿಗಾಗಿ , ಮತ್ತು ನಮ್ಮ ಕಲೆಗಳ ಪ್ರಚಾರಕ್ಕಾಗಿ ಕಲಾವಿದ ಹಾಗೂ ಸರ್ಕಾರದ ಅನುದಾನಗಳನ್ನು ಸಮರ್ಪಕವಾಗಿ ನೀಡಲು ಅನುಕೂಲವಾಗುತ್ತದೆ ಎಂದರು.
ನಂತರ ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಿಸಿಆರ್ ಟಿ ಮತ್ತು ಇಂದಿರಾ ಗಾಂಧಿ ರಾಷ್ಟ್ರೀಯ ಕಲಾಕೇಂದ್ರ ನವದೆಹಲಿಯಲ್ಲಿ ಹಾಗೂ India culture.com ಸೇರಿದಂತೆ ಜಾಲತಾಣಗಳ ಕುರಿತು ಮಾಹಿತಿ ನೀಡಿದರು.ಭಾರತೀಯ ಪ್ರದರ್ಶನ ಕಲೆಗಳ ವಲಯವನ್ನು ವಿಸ್ತರಿಸುವ ಉದ್ದೇಶದ ಹಲವು ಮಹತ್ವದ ಕಾರ್ಯಕ್ರಮಗಳು ಮತ್ತು ಯೋಜನೆಗಳ ಕುರಿತು ಮಾತನಾಡಿದರು.
ನಂತರ ವಿದ್ಯಾರ್ಥಿಗಳು, ವಿದೇಶಿ ಅತಿಥಿಗಳು ಮತ್ತು ಅಧ್ಯಾಪಕರೊಂದಿಗೆ ಸಂವಾದದಲ್ಲಿ ಪಾಲ್ಗೊಂಡಿದ್ದರು.ಅಧ್ಯಕ್ಷತೆ ವಹಿಸಿದ್ದ ಸಂಗೀತ ವಿವಿ ಕುಲಪತಿ ಡಾ.ನಾಗೇಶ್ ವಿ. ಬೆಟ್ಟಕೋಟೆ ಮಾಕನಾಡಿ, ವಿಶ್ವವಿದ್ಯಾಲಯವು ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಲು ಮತ್ತು ಪ್ರೋತ್ಸಾಹಿಸಲು ಸಾಧ್ಯವಿರುವ ಎಲ್ಲಾ ಮೂಲಗಳಿಂದಲೂ ಕಲಾವಿದರನ್ನು ಮತ್ತು
ಸಂಪನ್ಮೂಲ ವ್ಯಕ್ತಿಗಳನ್ನು ಸಂಪರ್ಕಿಸಲು ನೂತನ ಅಂತರ್ಜಾಲ ಇಂದು ಉದ್ಘಾಟನೆಯಾಗಿದೆ. ಎಲ್ಲಾ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು.ವಿವಿದ ಕಲೆಗಳ ಕುರಿತು ವಿಶ್ವವಿದ್ಯಾಲಯದಲ್ಲಿ ಶಿಬಿರಗಳನ್ನು ಆಯೋಜಿಸಲು ಉತ್ಸುಕವಾಗಿದೆ ಎಂದರು.ಬೋಧಕರೊಂದಿಗೆ ಅತ್ಯಂತ ಉಪಯುಕ್ತ ಮಾಹಿತಿಗಳನ್ನು ಹಂಚಿಕೊಂಡರು. ಆತ್ಮೀಯವಾಗಿ ನಡೆದ ಕಾರ್ಯಕ್ರಮದಲ್ಲಿ ನೃತ್ಯ, ನಾಟಕ ಮತ್ತು ಸಂಗೀತ ವಿಭಾಗದ ಎಲ್ಲ ಬೋಧಕರು ಉಪಸ್ಥಿತರಿದ್ದರು.