ಸಾರಾಂಶ
ಜನವರಿ 30 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಷನ್ ರಜತ ಮಹೋತ್ಸವಕ್ಕೆ ಕರ್ನಾಟಕ ಟೈಲರ್ಸ್ ಅಸೋಸಿಯೇ|ಷನ್ ತರೀಕೆರೆ ವಿಧಾನ ಸಭಾ ಕ್ಷೇತ್ರ ಸಮಿತಿಯಿಂದ ಶಾಸಕ ಜಿ.ಎಚ್.ಶ್ರೀನಿವಾಸ್ ಅವರನ್ನು ಆಹ್ವಾನಿಸಲಾಯಿತು.
ಕನ್ನಡಪ್ರಭ ವಾರ್ತೆ, ತರೀಕೆರೆ
ಜನವರಿ 30 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಷನ್ ರಜತ ಮಹೋತ್ಸವಕ್ಕೆ ಕರ್ನಾಟಕ ಟೈಲರ್ಸ್ ಅಸೋಸಿಯೇ|ಷನ್ ತರೀಕೆರೆ ವಿಧಾನ ಸಭಾ ಕ್ಷೇತ್ರ ಸಮಿತಿಯಿಂದ ಶಾಸಕ ಜಿ.ಎಚ್.ಶ್ರೀನಿವಾಸ್ ಅವರನ್ನು ಆಹ್ವಾನಿಸಲಾಯಿತು.ಸಂಘದ ತಾಲೂಕು ಘಟಕದ ಅಧ್ಯಕ್ಷ ಟಿ.ಜಿ.ರಮೇಶ್ ಮಾತನಾಡಿ ಟೈಲರ್ ಸಂಘದ 25ನೇ ರಜತ ಮಹೋತ್ಸವ ಸಂಭ್ರಮ ಮತ್ತು ಬೃಹತ್ ಸಮಾವೇಶವನ್ನು ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾರ್ಮಿಕ ಸಚಿವ ಸಂತೋಷ್ ಲಾಡ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ತರೀಕೆರೆ ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್. ರವಿ ಮಾತನಾಡಿ ತರೀಕೆರೆ ನಗರ, ಅಜ್ಜಂಪುರ, ಲಕ್ಕವಳ್ಳಿ, ಲಿಂಗದಹಳ್ಳಿ, ಶಿವನಿ, ಗಡೀಹಳ್ಳಿ, ಹುಣಸಘಟ್ಟ ಗಳಿಂದ 350ಕ್ಕೂ ಅಧಿಕ ಮಂದಿ ರಜತಮಹೋತ್ಸವದಲ್ಲಿ ಭಾಗವಹಿಸ ಲಿದ್ದಾರೆ ಎಂದರು.ಪದಾಧಿಕಾರಿಗಳಾದ ಕಾಶಿನಾಥ್, ಸುನಂದಮ್ಮ, ಹಸಿನಾ, ಶಾಂತಣ್ಣ, ರಾಜಪ್ಪ, ಕ್ಷೇತ್ರ ಸಮಿತಿ ಮಾಜಿ ಅಧ್ಯಕ್ಷ, ಸದಸ್ಯರು
ಭಾಗವಹಿಸಿದ್ದರು.16ಕೆಟಿಆರ್.ಕೆ.1ಃತರೀಕೆರೆಯಲ್ಲಿ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇ|ಷನ್ ತರೀಕೆರೆ ವಿಧಾನ ಸಬಾ ಕ್ಷೇತ್ರ ಸಮಿತಿಯಿಂದ ಶಾಸಕ ಜಿ.ಎಚ್.ಶ್ರೀನಿವಾಸ್ ಅವರನ್ನು ಆಹ್ವಾನಿಸಲಾಯಿತು. ಸಂಘದ ತಾಲೂಕು ಘಟಕದ ಅಧ್ಯಕ್ಷ ಜಿ.ಟಿ.ರಮೇಶ್, ಸಂಘದ ಪದಾದಿಕಾರಿಗಳು ಇದ್ದರು.