ಸಾರಾಂಶ
ಬೆಂಗಳೂರು : ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಸಹಯೋಗ ಬಲವರ್ಧನೆಗಾಗಿ ಜಾಗತಿಕ ಸಹಕಾರ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಇಲಾಖೆಯು ಯುನೈಟೆಡ್ ಸ್ಟೇಟ್ಸ್‌ನ ನ್ಯೂಜೆರ್ಸಿ ರಾಜ್ಯ ಇಲಾಖೆಯೊಂದಿಗೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ನಡೆದ ಟೈ ಗ್ಲೋಬಲ್ ಶೃಂಗಸಭೆಯಲ್ಲಿ ಐಟಿ ಇಲಾಖೆಯ ಕಾರ್ಯದರ್ಶಿ ಡಾ.ಎಕ್ರೂಪ್ ಕೌರ್ ಮತ್ತು ನ್ಯೂಜೆರ್ಸಿಯ ಲೆಫ್ಟಿನೆಂಟ್ ಗವರ್ನರ್ ತಹೇಷಾ ಎಲ್.ವೇ ಅವರು ಎಲ್‌ಒಐಗೆ (ಲೆಟರ್ ಆಫ್ ಇಂಟೆಂಟ್) ಸಹಿ ಮಾಡಿದರು.
ಅವಳಿ ನಗರ (ಟ್ವಿನ್ ಸಿಟಿ ) ಸಹಯೋಗದಡಿ ಬೆಂಗಳೂರು ಮತ್ತು ನ್ಯೂ ಬ್ರನ್ಸ್‌ವಿಕ್ ನಡುವೆ ನಿಗದಿತ ವಲಯಗಳಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಸ್ಟಾರ್ಟ್‌ಅಪ್ ಇಕೋಸಿಸ್ಟಮ್ ಬೆಳೆಸಲು ಕಾರ್ಯಕ್ರಮ ಅಭಿವೃದ್ಧಿಪಡಿಸುವುದು. ತಾಂತ್ರಿಕ ಸಹಯೋಗದ ಭಾಗವಾಗಿ ಜೀವವಿಜ್ಞಾನ, ಆಳವಾದ ತಂತ್ರಜ್ಞಾನ (ಸೈಬರ್ ಸೆಕ್ಯುರಿಟಿ, ಎಐ) ಮತ್ತು ಎಲೆಕ್ಟ್ರಾನಿಕ್ಸ್‌ನಂತಹ ವಲಯಗಳಲ್ಲಿ ಸಹಕಾರ ಮುಂದುವರಿಸುವ ಬಗ್ಗೆ ಒಪ್ಪಂದವಾಗಿದೆ.
ನ್ಯೂಜೆರ್ಸಿಯೊಂದಿಗಿನ ಈ ಪಾಲುದಾರಿಕೆಯು ಜಾಗತಿಕ ಮಟ್ಟದ ತಂತ್ರಜ್ಞಾನ ಮತ್ತು ನಾವೀನ್ಯತೆಯ ಕ್ಷೇತ್ರದಲ್ಲಿ ಕರ್ನಾಟಕದ ಸ್ಥಾನವನ್ನು ಮುಂಚೂಣಿಗೆ ಕರೆದೊಯ್ಯಲು ನೆರವಾಗುತ್ತದೆ. ವಿಶೇಷವಾಗಿ ತಂತ್ರಜ್ಞಾನ, ಸ್ಟಾರ್ಟ್‌ಅಪ್, ಎಐ ಮತ್ತು ಎಲೆಕ್ಟ್ರಾನಿಕ್ಸ್‌ನಂತಹ ಪ್ರಮುಖ ಕ್ಷೇತ್ರಗಳಲ್ಲಿ ಈ ಸಹಯೋಗ ಮಹತ್ವದ ಪಾತ್ರ ವಹಿಸಲಿದೆ. ಈ ಸಹಯೋಗವು ಕರ್ನಾಟಕದ ಗ್ಲೋಬಲ್ ಇನ್ನೋವೇಶನ್ ಅಲೈಯನ್ಸ್ (ಜಿಐಎ) ಜೊತೆಗೆ ಸಂಯೋಜಿಸಲಿದೆ.
;Resize=(128,128))
;Resize=(128,128))
;Resize=(128,128))
;Resize=(128,128))