ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸದುರ್ಗ
ಸಾಹಿತ್ಯದಿಂದ ಈ ನೆಲ, ಜಲದ ಸಾಂಸ್ಕೃತಿಕ ಬದುಕು ಕಟ್ಟುವ ಸಂರಕ್ಷಣೆ ಕೆಲಸವು ವಿದ್ಯಾಥಿ೯ ದಿಸೆಯಿಂದಲೇ ಆಗಬೇಕು ಎಂದು ಹೆಜ್ಜೆ ಸಾಲು ಸಾಂಸ್ಕ್ರತಿಕ ವೇದಿಕೆ ಅಧ್ಯಕ್ಷ ಗೋ. ತಿಪ್ಪೇಶ್ ತಿಳಿಸಿದರು.ತಾಲೂಕಿನ ಶ್ರೀರಾಂಪುರದ ಹೋಬಳಿ ನಾಯಿಗೆರೆ ಬಳಿ ಇರುವ ಇಂದಿರಾ ಗಾಂಧಿ ವಸತಿಯುತ ಶಾಲೆಯಲ್ಲಿ ಆಯೋಜಿಸಿದ್ದ ಬಿಳಿಗೆರೆ ಕೃಷ್ಣಮೂತಿ೯ ಅವರ ಛೂಮಂತ್ರಯ್ಯನ ಕಥೆಗಳು ಕುರಿತು ವಿದ್ಯಾಥಿ೯ಗಳೊಂದಿಗೆ ನಡೆಸಿದ ಚಿಂತನ - ಮಂಥನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನೆಲಮೂಲದ ಕವಿ ಬಿಳಿಗೆರೆ ಕೃಷ್ಣಮೂತಿ೯ ಅವರ ಛೂಮಂತ್ರಯ್ಯನ ಕಥೆಗಳು ಎಂಬ ಲೇಖನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿರುವುದು ಹೆಮ್ಮೆಯ ವಿಷಯ. ಪ್ರತಿ ಶಾಲಾ ಕಾಲೇಜುಗಳಲ್ಲಿ ನಾಡಿನ ಕವಿ ,ಕಾವ್ಯ ,ಕಥೆಗಳನ್ನು ವಿದ್ಯಾಥಿ೯ಗಳಿಗೆ ಪರಿಚಯಿಸುವ ಕೆಲಸವನ್ನು ಹೆಜ್ಜೆ ಸಾಲು ಸಾಂಸ್ಕ್ರತಿಕ ವೇದಿಕೆ ಮಾಡುತ್ತಿದೆ ಎಂದರು.ಕಾಯ೯ಕ್ರಮವನ್ನು ಉದ್ಘಾಟಸಿದ ಹಿರಿಯ ಸಾಹಿತಿ ನಿವೃತ್ತ ಪ್ರಾಚಾರ್ಯ ಪಿ.ಎಲ್. ಲೋಕೇಶ್ ಮಾತನಾಡಿ, ತಾಲೂಕಿನಲ್ಲಿ ಸಾಹಿತ್ಯ ಕವಿ ಕಾವ್ಯ ,ಕಥತೆಗಳ ಕುರಿತು, ಚಿಂತನ - ಮಂಥನ ಕಾಯ೯ಕ್ರಮಗಳು ಬಹಳಷ್ಟು ಕಡಿಮೆ ಆಗುತ್ತಿದ್ದು ಹೆಜ್ಜೆ ಸಾಲು ಸಾಂಸ್ಕ್ರತಿಕ ವೇದಿಕೆ ಕಾಯ೯ಕ್ರಮ ನಿಜಕ್ಕೂ ಶ್ಲಾಘನೀಯ ಎಂದು ಶ್ಲಾಘಿಸಿದರು.
ಛೂಮಂತ್ರಯ್ಯನ ಕಥೆಗಳು ಕುರಿತು ಹುಳಿಯಾರಿನ ಸಾಹಿತಿ, ಚಿಂತಕ, ಪತ್ರಕತ೯ ಕಿರಣ್ ಕುಮಾರ್ ಮಾತನಾಡಿ, ಬಿಳಿಗೆರೆ ಕೃಷ್ಣಮೂತಿ೯ ಅವರ ಛೂಮಂತ್ರಯ್ಯನ ಕಥೆಗಳು ಬಹಳ ಅಪರೂಪದ ಕಥೆಗಳು. ನಾವು ಆಧುನಿಕ ಜಗತ್ತಿಗೆ ತೆರೆದು ಕೊಂಡಿದ್ದು ನಮ್ಮ ಸಾವಯವ ಕೃಷಿ ಬದುಕು ಸಾಹಿತ್ಯ, ಸಂಸ್ಕೃತಿ, ಬಗ್ಗೆ ಹೆಚ್ಚು ಗಮನ ಕೊಡುತ್ತಿಲ್ಲ. ಮೊಬೈಲ್ ಬಿಟ್ಟು ಬೇರೇನಿಲ್ಲ ನಮಗೆ ಎಂದು ಭ್ರಮಿಸಿದ್ದೇವೆಲೆಂದು ಬೇಸರ ವ್ಯಕ್ತಪಡಿಸಿದರು.ಛೂಮಂತ್ರಯ್ಯನ ಕಥೆಗಳ ಕೃತಿ ರಚನೆಕಾರ ಬಿಳಿಗೆರೆ ಕೃಷ್ಣಮೂತಿ೯ ಮಾತನಾಡಿ, ನಮ್ಮ ನೆಲದ ಸಾವಯವ ಕೃಷಿಯ ಬದುಕು ಮರೆತರೆ ನಾವು ವಿನಾಶದ ಅಂಚಿಗೆ ಹೋಗುತ್ತೇವೆ. ವೈಜ್ಞಾನಿಕತೆಯ ಜೊತೆ ಜೊತೆಗೆ ನಮ್ಮ ಕೃಷಿಯ ಕಡೆ ಮತ್ತೆ ಬರಬೇಕಾಗಿದೆ. ಅದು ವಿದ್ಯಾಥಿ೯ ದಿಸೆಯಿಂದಲೆ ಬರಬೇಕು. ಅದಕ್ಕೆ ನಾವು ಹೆಚ್ಚು, ಹೆಚ್ಚು ಸಾಹಿತ್ಯವನ್ನು ಓದಬೇಕು ಸಲಹೆ ನೀಡಿದರು.
ಪಠ್ಯದ ಜೊತೆಗೆ ಮಕ್ಕಳು ಹಾಡು, ಒಗಟು, ಕಥೆಗಳನ್ನು ಅಭ್ಯಾಸ ಮಾಡಬೇಕು. ಹೆಜ್ಜೆ ಸಾಲು ಸಾಂಸ್ಕೃತಿಕ ವೇದಿಕೆ ಇಂತಹ ಒಂದು ಉತ್ತಮ ಕಾಯ೯ಕ್ರಮ ಮಾಡುತ್ತಿರುವುದು ಶ್ಲಾಘನೀಯ ಎಂದರು.ಕಾಯ೯ಕ್ರಮದ ಅಧ್ಯಕ್ಷತೆ ಇಂದಿರಾ ಗಾಂಧಿ ವಸತಿ ಶಾಲೆ ಪ್ರಾಚಾಯ೯ ಮಂಜುನಾಥ್ ವಹಿಸಿದ್ದರು. ವೇದಿಕೆಯಲ್ಲಿ ಹೊಸದುಗ೯ದ ಖ್ಯಾತ ಕವಿ ನಿಸಾರ್ ಅಹಮದ್, ಕವಿಯಿತ್ರಿ ಎಂ.ಆರ್., ನಳಿನ , ಸಾಹಿತಿ ನಾಗತೀಹಳ್ಳಿ ಮಂಜುನಾಥ್, ನಿ.ಶಿ. ರಾಜಪ್ಪ, ಕಲಾವಿದ ಪೀಲಾಪುರ ಆರ್. ಕಂಠೇಶ್ ಭರತ್, ಶಾಲಾ ವಿದ್ಯಾಥಿ೯ಗಳು, ಶಿಕ್ಷಕರು, ಉಪಸ್ಥಿತರಿದ್ದರು.
ಇದೇ ಸಂದಭ೯ದಲ್ಲಿ ನಾಡಿನ ಮುತ್ಸದ್ಧಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ರವರ ನಿಧನಕ್ಕೆ ಅವರ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ಸೂಚಿಸಲಾಯಿತು.