ಮಂಗಳೂರು: ಕರ್ಣಾಟಕ ಬ್ಯಾಂಕ್ ತನ್ನ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಯನ್ನು ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಪೋರ್ಟಲ್‌ನೊಂದಿಗೆ ಯಶಸ್ವಿಯಾಗಿ ಸಂಯೋಜಿಸಿರುವುದಾಗಿ ಪ್ರಕಟಿಸಿದೆ. ಈ ವ್ಯವಸ್ಥೆ ಸೋಮವಾರದಿಂದಲೇ ಜಾರಿಗೆ ಬಂದಿದೆ. ಇಪಿಎಫ್ ಸದಸ್ಯರು ಹಾಗೂ ಸಂಸ್ಥೆಗಳು ಇದೀಗ ಕರ್ನಾಟಕ ಬ್ಯಾಂಕ್‌ನ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಸುಲಭವಾಗಿ ಮತ್ತು ಸಂಪೂರ್ಣ ಡಿಜಿಟಲ್ ವಿಧಾನದಲ್ಲಿ ಇಪಿಎಫ್ ಪಾವತಿಗಳನ್ನು ಮಾಡಬಹುದಾಗಿದೆ.

ಈ ಹೊಸ ಸೌಲಭ್ಯದ ಮೂಲಕ EPFO ಪೋರ್ಟಲ್‌ನಲ್ಲಿ ಕರ್ಣಾಟಕ ಬ್ಯಾಂಕ್‌ನ ಇಂಟರ್ನೆಟ್ ಬ್ಯಾಂಕಿಂಗ್ ಆಯ್ಕೆಯನ್ನು ಬಳಸಿಕೊಂಡು ಸುರಕ್ಷಿತ, ವೇಗವಾದ ಹಾಗೂ ಬಳಕೆದಾರ ಸ್ನೇಹಿಯಾಗಿ ಪಾವತಿಗಳನ್ನು ನಡೆಸಬಹುದು. ಇದರಿಂದ ಪಾವತಿ ಪ್ರಕ್ರಿಯೆ ವೇಗಗೊಳ್ಳುವುದರ ಜೊತೆಗೆ, ತಕ್ಷಣದ ದೃಢೀಕರಣ ಮತ್ತು ರಿಯಲ್-ಟೈಮ್ ಪರಿಶೀಲನೆ ಸಾಧ್ಯವಾಗಲಿದೆ. ಜೊತೆಗೆ, ಮಾನವ ಹಸ್ತಕ್ಷೇಪ ಹಾಗೂ ಕಾರ್ಯಾಚರಣೆಯ ವಿಳಂಬವೂ ಕಡಿಮೆಯಾಗಲಿದೆ.

ಈ ಕುರಿತು ಮಾತನಾಡಿದ ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಎಸ್. ಭಟ್ ಅವರು, ''''''''''''''''EPFO ಪಾವತಿ ಪೋರ್ಟಲ್‌ನೊಂದಿಗೆ ಕರ್ಣಾಟಕ ಬ್ಯಾಂಕ್‌ನ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯ ನಮ್ಮ ಡಿಜಿಟಲ್ ಪರಿವರ್ತನಾ ಪಯಣದಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಇದರ ಮೂಲಕ ಉದ್ಯೋಗದಾತರು ಮತ್ತು ಸಂಸ್ಥೆಗಳು ತಮ್ಮ ಇಪಿಎಫ್ ಪಾವತಿಗಳನ್ನು ಸುಲಭವಾಗಿ, ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಸಬಹುದು. ಗ್ರಾಹಕರ ಅನುಕೂಲತೆ ಹಾಗೂ ಉತ್ತಮ ಡಿಜಿಟಲ್ ಬ್ಯಾಂಕಿಂಗ್ ಅನುಭವ ಒದಗಿಸಲು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ನಮ್ಮ ಬದ್ಧತೆ ಮುಂದುವರಿಯಲಿದೆ ಎಂದು ಹೇಳಿದರು.