ಪಟ್ಟಣದ ಗುಡ್ಡದ ಮೇಲಿರುವ ಶ್ರೀ ತುಳುಜಾಭವಾನಿ ಅಮ್ಮನವರ ದೇವಾಲಯದಲ್ಲಿ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಭಾನುವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು. ಭಕ್ತರು ದೀಪ ಬೆಳಗಿಸುವ ಮೂಲಕ ಕಾರ್ತಿಕೋತ್ಸವದಲ್ಲಿ ಪಾಲ್ಗೊಂಡರು.

ಹೊಸದುರ್ಗ: ಪಟ್ಟಣದ ಗುಡ್ಡದ ಮೇಲಿರುವ ಶ್ರೀ ತುಳುಜಾಭವಾನಿ ಅಮ್ಮನವರ ದೇವಾಲಯದಲ್ಲಿ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಭಾನುವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು. ಭಕ್ತರು ದೀಪ ಬೆಳಗಿಸುವ ಮೂಲಕ ಕಾರ್ತಿಕೋತ್ಸವದಲ್ಲಿ ಪಾಲ್ಗೊಂಡರು.

ಕಾರ್ತಿಕ ದೀಪೋತ್ಸವ ಕಾರ್ಯಕ್ರಮದ ಆಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು. ತುಳುಜಾಭವಾನಿ ಅಮ್ಮನವರಿಗೆ ಕುಂಕುಮಾರ್ಚನೆ, ಅಷ್ಟೋತ್ತರ, ಮಹಾಮಂಗಳಾರತಿ ಸೇವೆಗಳು ನೆರವೆರಿದವು. ಭಕ್ತರು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿದರು.

ದಿಪೋತ್ಸವದ ಆಂಗವಾಗಿ ದೇವಾಲಯದ ಆವರಣದಲ್ಲಿ ನೂತನವಾಗಿ ಧ್ವಜ ಸ್ಥಂಬ ಹಾಗೂ ತ್ರಿಶೂಲ ಶಕ್ತಿಪೀಠವನ್ನು ಸ್ಥಾಪಿಸಿ ಪೂಜೆ ಸಲ್ಲಿಸಲಾಯಿತು. ಮಹಿಳೆಯರು ತುಳಜಾ ಭವಾನಿ ಅಮ್ಮನವರಿಗೆ ವಿಶೇಷವಾಗಿ ಅರತಿ ಬೆಳಗಿ ಪೂಜೆ ಸಲ್ಲಿಸಿದರು. ಪೂಜೆಯ ವೇಳೆ ಪಾಲ್ಗೊಂಡ ಎಲ್ಲರೂ ದೇವಾಲಯ ನಿರ್ಮಾಣಕ್ಕೆ ಸಂಕಲ್ಪ ಮಾಡಿದರು.

ಅಖಿಲ ಬಾರತ ಭಾವಸಾರ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಉಮೇಶ್ ಗುಜ್ಜಾರ್ ದೀಪ ಬೆಳಗಿಸುವ ಮೂಲಕ ದಿಪೋತ್ಸವಕ್ಕೆ ಚಾಲನೆ ನೀಡಿದರು.

ಭಾವಸಾರ ಕ್ಷತ್ರಿಯ ಸಮಾಜ, ಶ್ರೀ ತುಳುಜಾಭವಾನಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಂಡು ದೇವಿಗೆ ದೀಪ ಬೆಳಗಿ ಸಂಭ್ರಮಿಸಿದರು.

ಶ್ರೀ ತುಳುಜಾ ಭವಾನಿ ಸೇವಾ ಟ್ರಸ್ಟ್ ಅಧ್ಯಕ್ಷ ಉಮೇಶ ಗುಜ್ಜಾರ್ ಮಾತನಾಡಿ ಭಾವಸಾರ ಕ್ಷತ್ರೀಯ ಸಮಾಜದ ಕುಲದೇವತೆಯಾದ ಶ್ರೀ ತುಳುಜಾಭವಾನಿ ದೇವಿಯ ದೇವಾಲಯ ನಿರ್ಮಾಣಕ್ಕೆ ಯೋಜಿಸಲಾಗಿದ್ದು. ಬೈರಪ್ಪನ ಬೆಟ್ಟಕ್ಕೆ ಹೊಂದಿಕೊಂಡಿರುವ ಗುಡ್ಡದ ಮೇಲೆ ದೇವಾಲಯ ನಿರ್ಮಾಣಕ್ಕೆ ಜಾಗ ಗುರುತಿಸಿ ಕಟ್ಟಡ ನಿರ್ಮಾಣ ಕಾಮಗಾರಿ ಅರಂಭಿಸಲಾಗಿದೆ ಎಂದರು.

ಕಳೆದ ಎಂಟು ವರ್ಷಗಳ ಹಿಂದೆ ದೇವಾಲಯ ನಿರ್ಮಾಣಕ್ಕೆ ಭೂಮಿ ಪೂಜೆ ಸಲ್ಲಿಸಿ ಕೆಲಸ ಅರಂಭಿಸಲಾಗಿದೆ. ಗರ್ಭಗುಡಿ ನಿರ್ಮಾಣದ ನಂತರ ಮುಂದಿನ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ದೇವಾಲಯ ನಿರ್ಮಾಣಗೊಳ್ಳುತ್ತಿರುವ ಸ್ಥಳವನ್ನು ಸರ್ಕಾರ ತುಳುಜಾಭವಾನಿ ಸೇವಾ ಸಮಿತಿಗೆ ನೀಡುವ ಜತೆಗೆ ದೇವಾಲಯ ನಿರ್ಮಾಣಕ್ಕೆ ಅಗತ್ಯ ಅನುಧಾನ ಒದಗಿಸಬೇಕು. ಆರ್ಥಿಕವಾಗಿ ಹಿಂದುಳಿದಿರುವ ಭಾವಸಾರ ಕ್ಷತ್ರೀಯ ಸಮಾಜಕ್ಕೆ ಸರ್ಕಾರ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಬೇಕು. ಈ ಕುರಿತು ಶಾಸಕರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಭಾವಸಾರ ಸಮಾಜದ ಮುಖಂಡರಾದ ಮೋಹನ್ ಗುಜ್ಜಾರ್, ಐಶ್ವರ್ಯ ಗುಜ್ಜಾರ್, ಗಂಗಾಧರ್, ಬಾಬುರಾವ್, ಗಣೇಶ್ ಮಾಳತ್ಕರ್, ಸುದೀಂದ್ರ, ರಾಮಚಂದ್ರ, ಆರುಣ್, ಜಿಂಗಾಡೆ ಮತ್ತಿತರರು ಇದ್ದರು.