ಸಾರಾಂಶ
ಮಹಾರಾಷ್ಟ್ರದ ಅತ್ಯಂತ ಜನಪ್ರಿಯ ಆಚರಣೆಗಳಲ್ಲಿ ಒಂದಾದ ಕಾರ್ತಿಕ ಏಕಾದಶಿ ಉತ್ಸವದಲ್ಲಿ ಪಾಲ್ಗೊಳ್ಳುವ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲು ವಿಶೇಷ ರೈಲ್ವೆ ಸೇವೆ ಆರಂಭಿಸಲಾಗಿದೆ.
ಹುಬ್ಬಳ್ಳಿ:
ಮಹಾರಾಷ್ಟ್ರದ ಅತ್ಯಂತ ಜನಪ್ರಿಯ ಆಚರಣೆಗಳಲ್ಲಿ ಒಂದಾದ ಕಾರ್ತಿಕ ಏಕಾದಶಿ ಉತ್ಸವದಲ್ಲಿ ಪಾಲ್ಗೊಳ್ಳುವ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ಪಂಢರಪುರ ನಿಲ್ದಾಣಗಳ ನಡುವೆ ಆರು ಟ್ರಿಪ್‌ಗಳಿಗೆ ಕಾಯ್ದಿರಿಸದ ವಿಶೇಷ ರೈಲುಗಳನ್ನು ನೈಋತ್ಯ ರೈಲ್ವೆ ಓಡಿಸಲು ಮುಂದಾಗಿದೆ.ರೈಲು ಸಂಖ್ಯೆ 07313/07314 ಎಸ್ಎಸ್ಎಸ್ ಹುಬ್ಬಳ್ಳಿ-ಪಂಢರಪುರ- ಎಸ್ಎಸ್ಎಸ್ ಹುಬ್ಬಳ್ಳಿ ಕಾಯ್ದಿರಿಸದ ವಿಶೇಷ ರೈಲು (6 ಟ್ರಿಪ್). ರೈಲು ಸಂಖ್ಯೆ 07313 ಎಸ್ಎಸ್ಎಸ್ ಹುಬ್ಬಳ್ಳಿ-ಪಂಢರಪುರ ಕಾಯ್ದಿರಿಸದ ವಿಶೇಷ ರೈಲು ನ. 9 ರಿಂದ 15ರ ವರೆಗೆ (ನ. 13 ಹೊರತುಪಡಿಸಿ) ಪ್ರತಿದಿನ ಸಂಜೆ 7.45ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹೊರಟು ಮರುದಿನ ಬೆಳಗ್ಗೆ 4.30 ಕ್ಕೆ ಪಂಢರಪುರ ತಲುಪಲಿದೆ.
ವಾಪಸ್ ರೈಲು ಸಂಖ್ಯೆ 07314 ಪಂಢರಪುರ-ಎಸ್ಎಸ್ಎಸ್ ಹುಬ್ಬಳ್ಳಿ ಕಾಯ್ದಿರಿಸದ ವಿಶೇಷ ರೈಲು ನ. 10ರಿಂದ 16ರ ವರೆಗೆ (ನ. 14 ಹೊರತುಪಡಿಸಿ) ಪ್ರತಿದಿನ ಬೆಳಗ್ಗೆ 6 ಗಂಟೆಗೆ ಪಂಢರಪುರದಿಂದ ಹೊರಟು ಅದೇ ದಿನ ಸಂಜೆ 4.30ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ.ಎರಡೂ ಮಾರ್ಗಗಳಲ್ಲಿ, ಈ ರೈಲು ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ, ದೇಸೂರು, ಬೆಳಗಾವಿ, ಪಚ್ಚಾಪುರ, ಗೋಕಾಕ ರೋಡ್, ಘಟಪ್ರಭಾ, ಚಿಕ್ಕೋಡಿ ರೋಡ್, ರಾಯಬಾಗ, ಚಿಂಚಲಿ, ಕುಡಚಿ, ಉಗಾರ ಖುರ್ದ, ಶೇಡಬಾಳ, ವಿಜಯನಗರ, ಮೀರಜ್, ಸುಲ್ಗರೆ, ಕವಠೆ-ಮಹಾಂಕಾಲ್, ಧಲಗಾಂವ್, ಜತ್ ರೋಡ್ ಮತ್ತು ಸಂಗೋಳ ನಿಲ್ದಾಣಗಳಲ್ಲಿ ನಿಲ್ಲಲಿದೆ.
ಈ ರೈಲಿನಲ್ಲಿ 10 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು ಎರಡು ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಬ್ರೇಕ್ ವ್ಯಾನ್ ಗಳು ಸೇರಿದಂತೆ ಒಟ್ಟು 12 ಬೋಗಿಗಳು ಇರಲಿವೆ. ಈ ರೈಲುಗಳ ಪ್ರತಿ ನಿಲ್ದಾಣದ ಆಗಮನ, ನಿರ್ಗಮನ ಸಮಯಕ್ಕಾಗಿ, ಪ್ರಯಾಣಿಕರು ಅಧಿಕೃತ ರೈಲ್ವೆ ವೆಬ್ಸೈಟ್ www.enquiry.indianrail.gov.in ಗೆ ಭೇಟಿ ನೀಡುವ ಮೂಲಕ, NTES ಅಪ್ಲಿಕೇಶನ್ ಬಳಸಿ ಅಥವಾ 139 ಸಹಾಯವಾಣಿ ನಂಬರಗೆ ಡಯಲ್ ಮಾಡುವ ಮೂಲಕ ಮಾಹಿತಿ ಪಡೆದುಕೊಳ್ಳಬಹುದು ಎಂದು ನೈಋತ್ಯ ರೈಲ್ವೆಯ ಪ್ರಕಟಣೆ ತಿಳಿಸಿದೆ.