ಸಾರಾಂಶ
ತಾಳಿಕೋಟೆ: ಪಟ್ಟಣದ ಪುರಾತನ ಮಠವಾದ ಚರಂತಿಮಠದಲ್ಲಿ ಕಾರ್ತಕ ಮಾಸದ ನಿಮಿತ್ತ ನಡೆದ ಬರಲಾದ ವಿವಿಧ ಪೂಜಾ ಪುನಸ್ಕಾರಗಳನ್ನು ಸೋಮವಾರ ಮುಕ್ತಾಯಗೊಂಡವು. ಶ್ರೀ ಚರಮೂರ್ತಿ ಶಾಂತವೀರ ಮಹಾಸ್ವಾಮಿಗಳ ಮಹಾ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ ಕಾರ್ಯಕ್ರಮಗಳು ಜರುಗಿದವು. ಸಂಜೆ ಮಹಿಳೆಯರಿಂದ ವಿಶೇಷ ಪೂಜಾ ಕಾರ್ಯಕ್ರಮ ಜರುಗಿದವು.
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಪಟ್ಟಣದ ಪುರಾತನ ಮಠವಾದ ಚರಂತಿಮಠದಲ್ಲಿ ಕಾರ್ತಕ ಮಾಸದ ನಿಮಿತ್ತ ನಡೆದ ಬರಲಾದ ವಿವಿಧ ಪೂಜಾ ಪುನಸ್ಕಾರಗಳನ್ನು ಸೋಮವಾರ ಮುಕ್ತಾಯಗೊಂಡವು.ಶ್ರೀಮಠದ ಪೀಠಾಧಿಪತಿ ಶ್ರೀ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ವಿವಿಧ ಪೂಜಾ ಕಾರ್ಯಕ್ರಮ ನಡೆಸಿದರಲ್ಲದೆ, ಸಮಾಜದಲ್ಲಿ ಧಾರ್ಮಿಕ ಭಾವನೆ ಮೂಡಬೇಕು. ನಮ್ಮ ಸಂಪ್ರದಾಯದಂತೆ ಲಿಂಗಪೂಜೆ ಆಚಾರ-ವಿಚಾರಗಳು ಪ್ರತಿಯೊಬ್ಬರಲ್ಲಿಯೂ ಬರಬೇಕು. ಗುರುಲಿಂಗ ಜಂಗಮ ಆಚರಣೆ ಜೀವನದಲ್ಲಿ ಪಾಲಿಸಬೇಕು ಎಂದು ಹೇಳಿದ ಅವರು, ಹಿಂದಿನ ಶ್ರೀಗಳಾದ ಶಾಂತವೀರ ಶ್ರೀಗಳು ಸಾಮಾಜಿಕ ಕಳಕಳಿ ಉಳ್ಳವರಾಗಿದ್ದರು. ನಾವೆಲ್ಲರೂ ಅವರು ತೋರಿದ ಮಾರ್ಗದಲ್ಲಿ ಸಾಗೋಣ ಸುಂದರ ಬದುಕಿನಡೆಗೆ ಸಾಗೋಣವೆಂದರು.
ಶ್ರೀ ಚರಮೂರ್ತಿ ಶಾಂತವೀರ ಮಹಾಸ್ವಾಮಿಗಳ ಮಹಾ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ ಕಾರ್ಯಕ್ರಮಗಳು ಜರುಗಿದವು. ಸಂಜೆ ಮಹಿಳೆಯರಿಂದ ವಿಶೇಷ ಪೂಜಾ ಕಾರ್ಯಕ್ರಮ ಜರುಗಿದವು.