ಸಾರಾಂಶ
ಯಲಬುರ್ಗಾ: ಮನುಷ್ಯನ ಮನಸ್ಸಿನಲ್ಲಿ ಅಡಗಿದ ಅಂಧಕಾರ ಅಡಗಿಸಿ ಪ್ರಜ್ವಲಿಸುವ ಬೆಳಕು ನೀಡುವುದೇ ಕಾರ್ತಿಕೋತ್ಸವದ ಮೂಲ ಉದ್ದೇಶ ಎಂದು ಮೈಲಾರಲಿಂಗೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ನೀಲನಗೌಡ ತಳುಗೇರಿ ಹೇಳಿದರು.ಪಟ್ಟಣದ ಒಂದನೇ ವಾರ್ಡಿನಲ್ಲಿರುವ ಶ್ರೀಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಕಾರ್ತಿಕೋತ್ಸವ ಸಮಾರಂಭದಲ್ಲಿ ದೀಪ ಹಚ್ಚುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಅವರು ಪ್ರತಿಯೊಬ್ಬ ಮನುಷ್ಯನ ನಿತ್ಯ ಜೀವನದಲ್ಲಿನ ಕತ್ತಲೆ ಕಳೆದು ಬೆಳಕನ್ನು ಚೆಲ್ಲುವ ಮೂಲಕ ಹೊಸ ಚೈತನ್ಯ ನೀಡುವುದಕ್ಕೆ ಕಾರ್ತಿಕ ಮಾಸದ ದೀಪೋತ್ಸವ ಸಾಕ್ಷಿಯಾಗಲಿದೆ ಎಂದರು.ಅಜ್ಞಾನ, ಅಶಾಂತಿ, ಅನ್ಯಾಯ, ಅರಿಷಡ್ ವರ್ಗಗಳೆಂಬ ಅನಿಷ್ಟ ಕತ್ತಲೆಯನ್ನು ಜ್ಞಾನದ ಬೆಳಕಿನಿಂದ ಹೋಗಲಾಡಿಸಿ ಅಲ್ಲಿ ಶಾಂತಿ, ನ್ಯಾಯ, ಸುಖ, ನೆಮ್ಮದಿ, ಸಮಾನತೆ ಬೆಳಗಿಸುವುದರ ಸಂಕೇತವಾಗಿ ದೀಪ ಹಚ್ಚುವ ಕಾರ್ತಿಕೋತ್ಸವ ಆಚರಿಸುವ ಸಾಂಪ್ರಾದಾಯವನ್ನು ಪ್ರತಿಯೊಬ್ಬರು ಉಳಿಸಿ, ಬೆಳೆಸಿಕೊಂಡು ಹೋಗಬೇಕಾಗಿದೆ ಎಂದು ಹೇಳಿದರು.ಪಪಂ ಮಾಜಿ ಅಧ್ಯಕ್ಷ ಸುರೇಶಗೌಡ ಶಿವನಗೌಡ್ರ ಮಾತನಾಡಿ, ಶ್ರೀಮೈಲಾರಲಿಂಗೇಶ್ವರ ದೇವರು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ. ಭಕ್ತಿಯಿಂದ ಮನಸಿಗೆ ನೆಮ್ಮದಿ ಲಭಿಸುತ್ತದೆ. ಧಾರ್ಮಿಕ ಕಾರ್ಯಗಳಿಂದ ಪುಣ್ಯಪ್ರಾಪ್ತಿಯಾಗುತ್ತದೆ ಎಂದರು.ದೇವಸ್ಥಾನ ಸಮಿತಿ ಉಪಾಧ್ಯಕ್ಷ ಸುರೇಶ ಜಮಾದರ ಮಾತನಾಡಿದರು.ಗೊರವಯ್ಯರಿಂದ ಹೆಜ್ಜೆ ಕುಣಿತ, ದೀಪ ಹಚ್ಚುವಿಕೆ, ಅನ್ನಸಂರ್ತಪಣೆ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.ಈ ಸಂದರ್ಭದಲ್ಲಿ ಯುವ ಮುಖಂಡ ಹನುಮಗೌಡ ಸಾಲಭಾವಿ ಲಿಂಗನಬಂಡಿ, ದೇವಪ್ಪ ಹಲಗೇರಿ, ನಾಗರಾಜ ಕುಕನೂರು, ಉಮೇಶ ಭೋಮೋಜಿ, ಮಹಾಂತೇಶ ಉಂಗ್ರಾಣಿ, ಕಳಕೇಶ ಅರಕೇರಿ, ಮಲ್ಲಪ್ಪ ಭೂಮೋಜಿ, ಜಗದೀಶ ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))