ನಾಳೆಯಿಂದ ಶ್ರೀ ಯಲಗೂರೇಶನ ಕಾರ್ತಿಕೋತ್ಸವ

| Published : Mar 01 2024, 02:22 AM IST

ಸಾರಾಂಶ

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಸುಪ್ರಸಿದ್ಧ ಯಲಗೂರ ಕ್ಷೇತ್ರದ ಶ್ರೀ ಯಲಗೂರೇಶನ ಕಾರ್ತಿಕೋತ್ಸವ ಮಾ.2 ಹಾಗೂ 3ರಂದು ಜರುಗಲಿದೆ.

ಬಾಗಲಕೋಟೆ: ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಸುಪ್ರಸಿದ್ಧ ಯಲಗೂರ ಕ್ಷೇತ್ರದ ಶ್ರೀ ಯಲಗೂರೇಶನ ಕಾರ್ತಿಕೋತ್ಸವ ಮಾ.2 ಹಾಗೂ 3ರಂದು ಜರುಗಲಿದೆ.ಆ ದಿನ ಬೆಳಗ್ಗೆ ಪಂಚಾಮೃತ ಅಭಿಷೇಕ ಪವಮಾನ ಹೋಮ, ಮಹಾಪೂಜೆ, ಮುಂಜಾನೆ 10ಕ್ಕೆ ದಿಂಡಿನ ಸ್ಪರ್ಧೆ, ತೀರ್ಥ ಪ್ರಸಾದ, ಹರಿದಾಸರ ಕೀರ್ತನೆ ಹಾಗೂ ಸಂಗೀತ ಕಾರ್ಯಕ್ರಮಗಳು ನಡೆಯುತ್ತಿದ್ದು, ರಾತ್ರಿ ಕಾರ್ತಿಕೋತ್ಸವ ನಡೆಯಲಿದೆ.ಪ್ರತಿದ್ಧ ಕಲಾವಿದರಿಂದ ಗಾಯನ, ದಾಸವಾಣಿ, ದಾಸ ಸಾಹಿತ್ಯ ವಾಚನ, ಉಪನ್ಯಾಸ, ನೃತ್ಯ, ಭರತನಾಟ್ಯ ಕಾರ್ಯಕ್ರಮಗಳು ಜರುಗಲಿವೆ. ಮುಂಜಾನೆ ಪಲ್ಲಕ್ಕಿ ಸೇವೆ, ಕಾಕಡಾರತಿ, ದೀಪೋತ್ಸವ, ಕಾರ್ತಿಕ ಇಳಿಸುವುದು ಮುಂತಾದ ಕಾರ್ಯಕ್ರಮ ಜರುಗಲಿವೆ. ಸಂಜೆ 4ಕ್ಕೆ ಪ್ರಸಾದ ವಿತರಣೆ, ಸಂಜೆ ರಥೋತ್ಸವ ಹಾಗೂ ರಾತ್ರಿ 8ಕ್ಕೆ ಹೊಂಡಪೂಜೆ, ಪಲ್ಲಕ್ಕಿ ಸೇವೆ ನಡೆಯಲಿದೆ. ಮಾ.4ರಂದು ಉಸ್ತಾದ್ ಶಫಿಕ್ ಖಾನ್ ಇವರಿಂದ ಸಿತಾರ್, ಪಂ.ವಿಜಯ ಕುಮಾರ ಪಾಟೀಲ್, ಪಂ.ರವೀಂದ್ರ ಸೋರಗಾಂವಿ, ಪಂ.ಮೈಸೂರು ರಾಮಚಂದ್ರಚಾರ ಹಾಗೂ ವಿದೂಷಿ ಸಂಗೀತಾ ಕಟ್ಟಿ ಕುಲಕರ್ಣಿ ಇವರಿಂದ ಗಾಯನ ನಡೆಯಲಿದೆ.

ಮಾ.2ರಂದು ದಿಂಡಿನ ಸ್ಪರ್ಧೆ. 3ರಂದು ರಾತ್ರಿ 10-30ಕ್ಕೆ ಹಳ್ಳಿಹುಡುಗಿ ಮಸರ ಗಡಗಿ ನಾಟಕ ಪ್ರದರ್ಶನ, 4ರಂದು ಸಂಜೆ 4ಕ್ಕೆ ಜಂಗೀ ಕುಸ್ತಿಗಳು ಜರುಗುವವು, ಅದೇ ದಿನ ರಾತ್ರಿ 10-30ಕ್ಕೆ ಅಪ್ಪ ಚಿಂತ್ಯಾಗ ಮಗಳು ಸಂತ್ಯಾಗ ನಾಟಕ ಪ್ರದರ್ಶನ ನಡೆಯಲಿದೆ. 9ರಂದು ಟಗರಿನ ಕಾಳಗ ನಡೆಯಲಿದೆ, 2ರಂದು ಮುಂಜಾನೆ 11-30 ರಿಂದ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.