ಕೆಪಿಎಸ್‌ಸಿ ಪಶುವೈದ್ಯಕೀಯ ಪರೀಕ್ಷೆ ಹಗರಣ ಸದ್ದು ಮಾಡುತ್ತಿರುವ ಬೆನ್ನಲ್ಲೇ ಇದೀಗ ಕೆಪಿಎಸ್‌ಸಿ ಕೆಎಎಸ್ ಪರೀಕ್ಷೆಯ ಹಗರಣವೂ ಸುದ್ದಿಗೆ ಗ್ರಾಸವಾಗಿದೆ. ಕೆಎಎಸ್ ಪರೀಕ್ಷೆ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ನಾಲ್ಕು ದಿನಗಳ ಹಿಂದಷ್ಟೆ ದಾಳಿ ಮಾಡಿರುವ ಕಲಬುರಗಿಯ ಓಜಾ ಬಡಾವಣೆಯಲ್ಲಿರುವ ಅಭ್ಯರ್ಥಿ ಮಮತಾ ಮನೆಯಲ್ಲಿ ಕೆಎಎಸ್ ಪರೀಕ್ಷೆಯ ಅಕ್ರಮದ ದಾಖಲೆಗಳನ್ನು ಪತ್ತೆ ಹಚ್ಚಿರುವುದು ಬೆಳಕಿಗೆ ಬಂದಿದೆ.
ಕನ್ನಡಪ್ರಭ ವಾರ್ತೆ ಕಲಬುರಗಿಕೆಪಿಎಸ್‌ಸಿ ಪಶುವೈದ್ಯಕೀಯ ಪರೀಕ್ಷೆ ಹಗರಣ ಸದ್ದು ಮಾಡುತ್ತಿರುವ ಬೆನ್ನಲ್ಲೇ ಇದೀಗ ಕೆಪಿಎಸ್‌ಸಿ ಕೆಎಎಸ್ ಪರೀಕ್ಷೆಯ ಹಗರಣವೂ ಸುದ್ದಿಗೆ ಗ್ರಾಸವಾಗಿದೆ. ಕೆಎಎಸ್ ಪರೀಕ್ಷೆ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ನಾಲ್ಕು ದಿನಗಳ ಹಿಂದಷ್ಟೆ ದಾಳಿ ಮಾಡಿರುವ ಕಲಬುರಗಿಯ ಓಜಾ ಬಡಾವಣೆಯಲ್ಲಿರುವ ಅಭ್ಯರ್ಥಿ ಮಮತಾ ಮನೆಯಲ್ಲಿ ಕೆಎಎಸ್ ಪರೀಕ್ಷೆಯ ಅಕ್ರಮದ ದಾಖಲೆಗಳನ್ನು ಪತ್ತೆ ಹಚ್ಚಿರುವುದು ಬೆಳಕಿಗೆ ಬಂದಿದೆ.ಇದೀಗ ಸಿಐಡಿ ಅಧಿಕಾರಿಗಳ ತಂಡ ಕೆಎಎಸ್ ಪರೀಕ್ಷೆ ಅಕ್ರಮದ ಪ್ರಕರಣದಲ್ಲಿ ಕಲಬುರಗಿಯಲ್ಲಿರುವ ಅಭ್ಯರ್ಥಿ ಮಮತಾ ಮನೆಯಲ್ಲಿ ದಾಖಲೆಗಳು ಪತ್ತೆಯಾಗಿದ್ದು, ಸಿಐಡಿ ಈ ದಾಖಲೆಗಳ ಕುರಿತಂತೆ ತನಿಖೆ ಚುರುಕುಗೊಳಿಸಲು ಮುಂದಾಗಿದೆ.ಮೂಲಗಳ ಪ್ರಕಾರ ಕಲಬುರಗಿಯ ಅಭ್ಯರ್ಥಿ ಮಮತಾ ಅವರು ಕೆಎಎಸ್ ಪರೀಕ್ಷೆ ಬರೆದಿದ್ದು, ಅದಾಗಲೇ ಸಂದರ್ಶನ ನೀಡಿ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಕೆಪಿಎಸ್ಸಿ ಸದಸ್ಯೆ ಶಾಂತಾ ಹೊಸಮನಿ ಕಡೆಯ ಅಭ್ಯರ್ಥಿಯಾಗಿರುವ ಮಮತಾ ಮನೆಯಲ್ಲಿ ಹಾಗೂ ಲ್ಯಾಪ್‌ಟಾಪ್ನಲ್ಲಿ ದಾಖಲೆಗಳು ದೊರಕಿವೆ ಎಂದು ತಿಳಿದುಬಂದಿದೆ.ಮಮತಾ ಮನೆಯಲ್ಲಿ ಲ್ಯಾಪ್‌ಟಾಪ್, ದಾಖಲೆಗಳನ್ನು ವಶಕ್ಕೆ ಪಡೆದಿರುವ ಸಿಐಡಿ ಇದೀಗ ವಶಪಡಿಸಿಕೊಂಡಿರುವ ಲ್ಯಾಪ್‌ಟಾಪ್ ರಿಟ್ರಿವ್ ಮಾಡಲು ಮುಂದಾಗಿದ್ದಾರೆ. ದಾಳಿ ಕಾಲಕ್ಕೆ ಮಮಮತಾ ವಾಸವಾಗಿದ್ದ ಕಲಬುರಗಿ ಮನೆಯಲ್ಲಿ ಕೆಎಎಸ್ ಅಕ್ರಮಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳು ಪತ್ತೆಯಾಗಿರುವುದು ತಿಳಿದುಬಂದಿದೆ. ಕಲಬುರಗಿಯ ನಿವಾಸದ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಅಭ್ಯರ್ಥಿ ಮಮತಾ ಬೆಂಗಳೂರಿನಲ್ಲಿದ್ದರು. ಪ್ರಸ್ತುತ ಪರೀಕ್ಷೆ ಅಕ್ರಮ ಸಂಬಂಧ ಮಮತಾಳನ್ನು ಬೆಂಗಳೂರಿನಲ್ಲಿ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
