ಸಾರಾಂಶ
ಬಳ್ಳಾರಿ: ನಗರದ ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜಿಲ್ಲಾ ಕಸಾಪದಿಂದ ಲಿಂ.ಅಲ್ಲಂ ಕರಿಬಸಪ್ಪ ಮತ್ತು ಅಲ್ಲಂ ಸುಮಂಗಳಮ್ಮ ದತ್ತಿ, ಲಿಂ. ವಡ್ಡಿನಶೆಟ್ರ ಸಿದ್ಧಾರಾಮಯ್ಯ ಮತ್ತು ಮಹಾಂತಮ್ಮ ದತ್ತಿ, ಲಿಂ. ಸಂಗನಕಲ್ಲು ಶಾಂತಮ್ಮ ದತ್ತಿ, ಲಿಂ. ಕುಪ್ಪಗಲ್ಲು ನಾಗಪ್ಪನ ವೀರ ದತ್ತಿ ಹಾಗೂ ಲಿಂ. ಜಾನೇಕುಂಟೆ ಸಿದ್ಧ ಬಸಪ್ಪ ದತ್ತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಯಿತು.ಈ ವೇಳೆ ಮಾತನಾಡಿದ ಸತ್ಯಂ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಆಲಂಬಾಷಾ, ಶಿಕ್ಷಕರು ನೈತಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಈ ಮೂಲಕ ಉತ್ತಮ ಸಮಾಜದ ನಿರ್ಮಾಣಕ್ಕೆ ಪಣ ತೊಡಬೇಕೆಂದು ಅಭಿಪ್ರಾಯಪಟ್ಟರು.ವೀ.ವಿ. ಸಂಘದ ಮಾಜಿ ಅಧ್ಯಕ್ಷ ಅಲ್ಲಂ ಗುರು ಬಸವರಾಜ್ ದತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷೆ ಕಾತ್ಯಾಯಿನಿ ಮರಿದೇವಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ದತ್ತಿ ದಾನಿಗಳಾದ ಡಾ. ವಿ.ಎಸ್. ಪ್ರಭಯ್ಯ, ಎಎಸ್‌ಎಂ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷೆ ಕುಪ್ಪಗಲ್ಲು ಗಿರಿಜಾ, ಮುಖ್ಯ ಅತಿಥಿಗಳಾಗಿ ಜಾನಪದ ಗಾಯಕ ಯಲ್ಲನಗೌಡ ಶಂಕರಬಂಡೆ, ಅಂಗಡಿ ರಾಜಶೇಖರ, ಪ್ರಾಂಶುಪಾಲ ಡಾ. ಸತೀಶ್ ಎ ಹಿರೇಮಠ, ಸನ್ಮಾರ್ಗ ಗೆಳೆಯರ ಬಳಗದ ಕಾರ್ಯದರ್ಶಿ ಕಪ್ಪಗಲ್ಲು ಚಂದ್ರಶೇಖರ್ ಆಚಾರ್, ಎ.ಎನ್. ಸಿದ್ದೇಶ್ವರಿ, ಅಚ್ಚಪ್ಪ ನಾಗರಾಜ್, ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ವಿ. ನಾಗರೆಡ್ಡಿ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮ ಮುನ್ನ ಯಲ್ಲನಗೌಡ ಶಂಕರಬಂಡೆ ಗೀತಗಾಯನ ಮಾಡಿದರು. ಡಾ.ಬಸವರಾಜ್ ಗದಗಿನ, ಗೌರಮ್ಮ, ಜ್ಯೋತಿ, ಹೇಮಾ ಕಾರ್ಯಕ್ರಮ ನಿರ್ವಹಿಸಿದರು.