ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ಸಿದ್ದೇಶ್ವರ ಶ್ರೀಗಳು ಸಾಹಿತ್ಯ ಹಾಗೂ ಬುದ್ದಿ ಜೀವಿಗಳೊಂದಿಗೆ ಸಂಬಂಧ ಹೊಂದಿದ್ದರು. ಅವರ ಅಗಲಿಕೆಯಿಂದ ನಾವುಗಳು ಇನ್ನೂ ಚೇತರಿಸಿಕೊಂಡಿಲ್ಲ. ಆಧ್ಯಾತ್ಮಿಕ ಚಿಂತನೆಗಳು ಜೀವನದ ಮೌಲ್ಯಗಳನ್ನು ಹೆಚ್ಚಿಸುತ್ತವೆ. ಸಾಹಿತ್ಯ ಸಂಸ್ಕೃತಿ ಸಂಗೀತ ಇವುಗಳನ್ನು ಉಳಿಸಿ ಬೆಳಸುವ ಜವಾಬ್ದಾರಿ ಕನ್ನಡ ಸಾಹಿತ್ಯ ಪರಿಷತ್‌ಗೆ ಇದೆ ಎಂದು ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಸಿದ್ದೇಶ್ವರ ಶ್ರೀಗಳು ಸಾಹಿತ್ಯ ಹಾಗೂ ಬುದ್ದಿ ಜೀವಿಗಳೊಂದಿಗೆ ಸಂಬಂಧ ಹೊಂದಿದ್ದರು. ಅವರ ಅಗಲಿಕೆಯಿಂದ ನಾವುಗಳು ಇನ್ನೂ ಚೇತರಿಸಿಕೊಂಡಿಲ್ಲ. ಆಧ್ಯಾತ್ಮಿಕ ಚಿಂತನೆಗಳು ಜೀವನದ ಮೌಲ್ಯಗಳನ್ನು ಹೆಚ್ಚಿಸುತ್ತವೆ. ಸಾಹಿತ್ಯ ಸಂಸ್ಕೃತಿ ಸಂಗೀತ ಇವುಗಳನ್ನು ಉಳಿಸಿ ಬೆಳಸುವ ಜವಾಬ್ದಾರಿ ಕನ್ನಡ ಸಾಹಿತ್ಯ ಪರಿಷತ್‌ಗೆ ಇದೆ ಎಂದು ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಹೇಳಿದರು.ನಗರದ ಕನ್ನಡ ಸಾಹಿತ್ಯ ಸಭಾಂಗಣದಲ್ಲಿ ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಚನ ಸಾಹಿತ್ಯ ಜಾನಪದ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯಕ್ಕೆ ವಿಜಯಪುರ ಜಿಲ್ಲೆ ಹೆಸರು ಪಡೆದಿದ್ದು ಹೆಮ್ಮೆಯ ವಿಷಯ. ಈ ನಿಟ್ಟಿನಲ್ಲಿ ಪ್ರಮುಖರಾಗಿ ಕಾರ್ಯನಿರ್ವಹಿಸಿದವರು ಡಾ.ಫ.ಗು.ಹಳಕಟ್ಟಿಯವರು ಎಂದರು.
ಮಸಬಿನಾಳದ ವಿರಕ್ತಮಠದ ಸಿದ್ದರಾಮ ಸ್ವಾಮೀಜಿ ಮಾತನಾಡಿ, ಸಾಹಿತ್ಯ ಪರಿಷತ್ತು ದಿನ ನಿತ್ಯ ನಿರಂತರವಾಗಿ ಸಾಹಿತ್ಯಾತ್ಮಕ ಕಾರ್ಯಕ್ರಮಗಳನ್ನು ಮಾಡುತ್ತ ಜಿಲ್ಲೆಯ ಎಲ್ಲ ಪೂಜ್ಯರನ್ನು ಪರಿಷತ್ತಿಗೆ ಆಹ್ವಾನಿಸಿತ್ತಿರುವುದು ಹೆಮ್ಮೆಯ ವಿಷಯ. ಹಿರಿಯ ಸಾಹಿತಿ ಡಾ.ಗೊ.ರು.ಚನ್ನಬಸಪ್ಪ ಅವರನ್ನು ಪರಿಷತ್‌ನಲ್ಲಿ ಅಭಿನಂದಿಸಿರುವುದು ಹೆಮ್ಮೆ ಎಂದು ಹೇಳಿದರು.ಗೌರವಾಧ್ಯಕ್ಷೆ ಭಾರತಿ ಪಾಟೀಲ ಮಾತನಾಡಿದರು. ಅಧ್ಯಕ್ಷತೆ ಡಾ.ವಿ.ಡಿ ಐಹೊಳ್ಳಿ ವಹಿಸಿದ್ದರು. ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಎಸ್.ಎಂ.ಕಣಬೂರ, ವಿಶ್ರಾಂತ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವೈ.ಕೊಣ್ಣೂರ, ವಿಶ್ರಾಂತ ಪ್ರಾಂಶುಪಾಲ ಬಿ.ಎಂ.ಆಜೂರ, ಸಿದ್ದಣ್ಣ ಸಾತಲಗಾಂವ, ವಿಶ್ರಾಂತ ಕುಲಸಚಿವ ವಿ.ವಿ.ಮಳಗಿ, ವಕೀಲ ವ್ಹಿ.ಎಸ್.ಖ್ಯಾಡಿ, ಚಿಕ್ಕರಾಯಪ್ಪ ಗುಂಡೆದ ಹಳ್ಳಿ, ಅಭಿಷೇಕ ಚಕ್ರವರ್ತಿ, ರವಿ ಕಿತ್ತೂರ, ಬಾಬುರಾವ ಮಹಾರಾಜರು, ಶಿವಾನಂದ ಡೋಣುರ, ಸಿದ್ರಾಮಯ್ಯ ಲಕ್ಕುಂಡಿಮಠ, ವಿಜಯಲಕ್ಷ್ಮಿ ಹಳಕಟ್ಟಿ, ಶಾರದಾ ಐಹೊಳ್ಳಿ, ಕಮಲಾ ಮುರಾಳ, ಜಯಶ್ರೀ ಹಿರೇಮಠ, ಅರ್ಜುನ ಶಿರೂರ, ರಾಜಾಸಾಬ ಶಿವನಗುತ್ತಿ, ಸುಮಂಗಲಾ ಕೋಟಿ, ಶಿವಪ್ಪ ಜಂಬಗಿ, ಎನ್.ಆರ್.ಕುಲಕರ್ಣಿ, ಶಂಕ್ರೆಪ್ಪ ಬಸವಪ್ರಭು, ಎ.ಎನ್.ಸಿಂಪಿ, ರಮೇಶ ಬಸರಗಿ, ಶ್ರೀಕಾಂತ ನಾಡಗೌಡ, ಪರವೀನ್ ಶೇಖ್, ಶಿವಪುತ್ರ ಅಂಕದ, ಲತಾ ಗುಂಡಿ, ಶೋಭಾ ಬಡಿಗೇರ, ಶಾಂತಾ ವಿಭೂತಿ, ಡಾ.ಪ್ರವೀಣ ಡೋಣುರ ಮುಂತಾದವರು ಉಪಸ್ಥಿತರಿದ್ದರು. ಸುನಂದಾ ಕೋರಿ ಪ್ರಾರ್ಥಿಸಿದರು, ಶಕಿನಾ ನದಾಫ್ ಸ್ವಾಗತಿಸಿದರು. ಡಾ.ಸಂಗಮೇಶ ಮೇತ್ರಿ ಪ್ರಾಸ್ತಾವಿಕ ಮಾತನಾಡಿದರು, ಡಾ.ಆನಂದ ಕುಲಕರ್ಣಿ ವಂದಿಸಿದರು.