- ಚನ್ನಗಿರಿಯಲ್ಲಿ ಕ.ಸಾ.ಪ. 112ನೇ ಸಂಸ್ಥಾಪಕ ದಿನಾಚರಣೆಯಲ್ಲಿ ಚನ್ನಬಸಪ್ಪ

- - -

ಚನ್ನಗಿರಿ: ಕನ್ನಡ ಸಾಹಿತ್ಯ ಪರಿಷತ್ ಪ್ರಗತಿಪರವಾಗಿ, ದಲಿತ, ಕೃಷಿಪರ ಹಾಗೂ ಮಹಿಳಾ ಚಿಂತನಾ ಗೋಷ್ಠಿಗಳಿಂದ ಹಿಡಿದು ಸರ್ವಕಾಲಕ್ಕೂ ಮಹತ್ವಪೂರ್ಣ ಎನ್ನಿಸಿಕೊಳ್ಳುವಂತಹ ಸಾಹಿತ್ಯದ ಚಟುವಟಿಕೆಗಳನ್ನು ಮಾಡುತ್ತಾ ಕನ್ನಡ ಸಾಹಿತ್ಯ ಬೆಳೆಸುವಲ್ಲಿ ಪರಿಷತ್ ಯಶಸ್ವಿಯಾಗುತ್ತಿದೆ ಎಂದು ತಾಲೂಕು ತಾಲೂಕು ಕ.ಸಾ.ಪ. ಮಾಜಿ ಅಧ್ಯಕ್ಷ ಸಾಂಸ್ಕೃತಿಕ ಚಿಂತಕ ಎಂ.ಯು.ಚನ್ನಬಸಪ್ಪ ಹೇಳಿದರು.

ಮಂಗಳವಾರ ಪಟ್ಟಣದ ನಿವೃತ್ತ ನೌಕರರ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ 112ನೇ ಸಂಸ್ಥಾಪನಾ ದಿನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಸಾಹಿತ್ಯ, ನಾಡು, ನುಡಿ, ರಕ್ಷಣೆಗಾಗಿ ಕನ್ನಡ ಸಾಹಿತ್ಯವನ್ನು ಬೆಳೆಸುವ ನಿಟ್ಟಿನಲ್ಲಿ ಸಾಹಿತ್ಯ ಸಮ್ಮೇಳನಗಳನ್ನು, ದತ್ತಿ ಕಾರ್ಯಕ್ರಮಗಳು, ಕವಿಗೋಷ್ಠಿಗಳು, ವಿಚಾರ ಸಂಕಿರಣಗಳಂತಹ ಕಾರ್ಯಕ್ರಮ ಮಾಡುತ್ತ ಕನ್ನಡ ಸಾಹಿತ್ಯ ಬೆಳೆಸುವ ಸೇವೆ ಮಾಡುತ್ತಿದೆ ಎಂದರು.

ತಾಲೂಕು ಕ.ಸಾ.ಪ. ಅಧ್ಯಕ್ಷ ಎಲ್.ಜಿ. ಮಧುಕುಮಾರ್ ಮಾತನಾಡಿ 112ನೇ ವರ್ಷಗಳ ಹಿಂದೆಯೇ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಗೊಂಡು ಇದನ್ನು ಸ್ಥಾಪನೆ ಮಾಡಲು ಶ್ರಮಿಸಿದಂತಹ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್, ಸರ್ ಎಂ.ವಿಶ್ವೇಶ್ವರಯ್ಯ ಹಾಗೂ ಮಿರ್ಜಾ ಇಸ್ಮಾಯಿಲ್ ಅವರ ಸೇವೆಗಳ ಬಗ್ಗೆ ಸ್ಮರಿಸಿದರು.


ನಿವೃತ್ತ ನೌಕರರ ಸಂಘದ ಅಧ್ಯಕ್ಷ ಜಿ.ಎಂ. ಉಜ್ಜಿನಪ್ಪ, ಕಸಬಾ ಹೋಬಳಿ ಘಟಕ ಅಧ್ಯಕ್ಷ ಜಿ.ಚಿನ್ನಸ್ವಾಮಿ ಮಾತನಾಡಿದರು. ಹೊದಿಗೆರೆ ಪ್ರಭಾಕರ್, ಕ.ಸಾ.ಪ. ಪ್ರಮುಖರಾದ ಬಿ.ಸಿ.ಸಿದ್ದಪ್ಪ, ಓಂಕಾರಮೂರ್ತಿ, ಮಲ್ಲಿಕಾರ್ಜುನ್, ಮಣ್ಣಮ್ಮ ಕಾಲೇಜಿನ ಪ್ರಾಚಾರ್ಯ ರವಿಕುಮಾರ್, ಇಸ್ಮಾಯಿಲ್, ರುದ್ರಪ್ಪ, ರವಿಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.

- - -

-5ಕೆಸಿಎನ್‌ಜಿ1: ಸಮಾರಂಭವನ್ನು ತಾಲೂಕು ಕ.ಸಾ.ಪ. ಮಾಜಿ ಅಧ್ಯಕ್ಷ ಚನ್ನಬಸಪ್ಪ ಉದ್ಘಾಟಿಸಿದರು.