ಸಾರಾಂಶ
ಕನ್ನಡ ಸಾಹಿತ್ಯ ಪರಿಷತ್‌ಗೆ ನಮ್ಮ ಕೋಲಾರ ಜಿಲ್ಲೆಯ ಆಸ್ತಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಸರ್ ಎಂ.ವಿಶ್ವೇಶ್ವರಯ್ಯ ಹಾಗೂ ಡಿ.ವಿ.ಗುಂಡಪ್ಪ ಅವರ ಕೊಡುಗೆ ಅಪಾರವಾಗಿದ್ದು, ಕನ್ನಡ ಸಾಹಿತ್ಯಾಸ್ತಕರಿಗೆ ಪ್ರಾಥಃಸ್ಮರಣೀಯರಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಮಾಲೂರು
ವಿಶ್ವದಲ್ಲೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಏಕೈಕ ಸಾಹಿತ್ಯಪರ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು. ಕನ್ನಡಿಗರ ಆಸ್ಮಿತೆಯಾಗಿರುವ ಈ ಸಂಸ್ಥೆ ಜನಸಿ ೧೧೦ ವರ್ಷಗಳಾಗಿವೆ ಎಂದು ಕಸಾಪ ನಿಕಟಪೂರ್ವ ಗೌರವ ಕಾರ್ಯದರ್ಶಿ ಎ,ಅಶ್ವಥ ರೆಡ್ಡಿ ಹೇಳಿದರು. ಅವರು ಪಟ್ಟಣದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸ್ಥಳೀಯ ಕಸಾಪ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾಡು ನುಡಿ ನೆಲ ಜಲ ಗಡಿ ಮತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದೆ ಎಂದರು.ಸಾಹಿತ್ಯ ಪರ ಕಾರ್ಯಕ್ರಮಗಳು
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ತಾಲೂಕು ಅಧ್ಯಕ್ಷ ಎಂ.ವಿ,ಹನುಮಂತಯ್ಯ, ಕನ್ನಡ ಸಾಹಿತ್ಯ ಪರಿಷತ್‌ಗೆ ನಮ್ಮ ಜಿಲ್ಲೆಯ ಆಸ್ತಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಸರ್ ಎಂ.ವಿಶ್ವೇಶ್ವರಯ್ಯ ಹಾಗೂ ಡಿ.ವಿ.ಗುಂಡಪ್ಪ ಅವರ ಕೊಡುಗೆ ಅಪಾರವಾಗಿದ್ದು, ಕನ್ನಡ ಸಾಹಿತ್ಯಾಸ್ತಕರಿಗೆ ಪ್ರಾಥಃಸ್ಮರಣೀಯರಾಗಿದ್ದಾರೆ. ಕಸಪಾದ ಮಾಲೂರು ಘಟಕವು ತಾಲೂಕಿನಲ್ಲಿ ಹಲಾವರು ಸಾಹಿತ್ಯ ಪರ ಕಾರ್ಯಕ್ರಮಗಳನ್ನು ಆಯೋಜಿಸಿ ಸ್ಥಳೀಯ ಸಾಹಿತ್ಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲಾಗಿದೆ ಎಂದು ವಿವರಿಸಿದ ಅವರು, ಈಗ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ಸಿದ್ದತೆ ನಡೆಸಲಾಗಿದೆ ಎಂದರು.ಗೌರವಾಧ್ಯಕ್ಷ ಮಾಸ್ತಿ ಕೃಷ್ಣಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಕವಿಯತ್ರಿ ವನಿತಾ ಉಪಾನ್ಯಾಸ ನೀಡಿದರು. ಸಾಹಿತಿ ಜಯಮಂಗಲ ಚಂದ್ರಶೇಖರ್, ವೀರಭದ್ರಚಾರಿ, ಡಾ.ನಾ.ಮುನಿರಾಜು, ಗುಲ್ಛಾರ್, ಚುಟುಕು ಸಾಹಿತ್ಯ ಪರಿಷತ್ತ ನ ಅಧ್ಯಕ್ಷ ನಾರಿಗಾನಹಳ್ಳಿ ಶ್ರೀನಿವಾಸ್ ಮಾತನಾಡಿದರು.
ಸಾಧಕರಿಗೆ ಸನ್ಮಾನ:ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರು,ವಕೀಲರಾದ ಮುನಿಕೃಷ್ಣಪ್ಪ ಅವರನ್ನು ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಸನ್ಮಾನಿಸಲಾಯಿತು. ಕವಿಗಳಾದ ವಿಕ್ರಂ ಶ್ರೀನಿವಾಸ್,ಗಂಗಪ್ಪ ತಳವಾರ್, ಮಾ.ಚಿ.ನಾಗರಾಜ್, ರೋಣೋರು ವೆಂಕಟೇಶ್, ಟಿ.ಎಂ.ವೆಂಕಟೇಶ್, ಶ್ರೀ ನಿಧಿ ಶ್ರೀನಿವಾಸ್, ದಯಾನಂದ್, ಜಗನ್ನಾಥ್, ನವೀನ್, ಡಾ.ನಂಜಪ್ಪ ಸರ್ವೇಶ್ , ಪಿ.ಎಂ.ಕೃಷ್ಣಪ್ಪ. ಸಿ.ಆರ್.ನಟರಾಜ್. ಕಲಾವಿದ ನಂಜುಂಡಪ್ಪ,ಮಂಜುನಾಥ ಇದ್ದರು.