ಸಾರಾಂಶ
- ಪ್ರಪ್ರಥಮ ಜಿಲ್ಲಾ ತತ್ವಕಾರರ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ
ಕನ್ನಡಪ್ರಭ ವಾರ್ತೆ, ತರೀಕೆರೆಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತತ್ವಪದಕ್ಕೆ ಒತ್ತು ನೀಡಿ ಅದರ ಸಮ್ಮೇಳನ ನಡೆಸುವ ಮೂಲಕ ವಿನೂತನ ಪ್ರಯೋಗ ಮಾಡಿ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ತರೀಕೆರೆ ತಾಲೂಕು ಶಾಸಕ ಜಿ.ಎಚ್. ಶ್ರೀನಿವಾಸ್ ಅವರ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅ. 12ರಂದು ಗಡಿಹಳ್ಳಿ ಗ್ರಾಮದಲ್ಲಿ ನಡೆಯಲಿರುವ ಪ್ರಪ್ರಥಮ ಜಿಲ್ಲಾ ತತ್ವಕಾರರ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದರು.ಕನ್ನಡ ಸಾಹಿತ್ಯ ಪರಿಷತ್ತು ಎಂಬುದು ಒಂದು ದೊಡ್ಡ ಆಲದ ಮರವಿದ್ದಂತೆ. ಆಲದ ಮರವು ಹಲವು ಪ್ರಾಣಿ ಪಕ್ಷಿಗಳಿಗೆ ತನ್ನ ರೆಂಬೆ ಕೊಂಬೆಗಳಲ್ಲಿ ಆಶ್ರಯ ನೀಡಿದಂತೆ ಕನ್ನಡ ಸಾಹಿತ್ಯ ಕಥೆ, ಕವನ, ಗಾಧೆ, ಒಗಟು, ಭಜನೆ ತತ್ವಪದಗಳಿಗೆ ಪ್ರೋತ್ಸಾಹ ನೀಡುತ್ತಾ ಅದರ ಬೆಳವಣಿಗೆಗೆ ಕಾರಣ ವಾಗಿದೆ ಎಂದು ಹೇಳಿದರು.
ಜಿಲ್ಲಾ ಸಾಹಿತ್ಯ ಪರಿಷತ್ತು ಜಾನಪದ ತತ್ವಪದ, ಜಾನಪದ, ಶರಣ, ವಚನ ಸಾಹಿತ್ಯ, ಮಹಿಳಾ ಸಾಹಿತ್ಯ ಸಮ್ಮೇಳನ ಮಾಡುವ ಮೂಲಕ ಗುರುತಿಸಿ ಅವರನ್ನು ಗೌರವಿಸುವ ಕಾರ್ಯ ಮಾಡುತ್ತಿದೆ. ಜಿಲ್ಲಾಧ್ಯಕ್ಷ ಮತ್ತು ಪದಾಧಿಕಾರಿಗಳಿಗೆ ಈ ವಿಚಾರವಾಗಿ ಅಭಿನಂದನೆ ಎಂದರು.ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಅ. 12ರಂದು ಗಡಿಹಳ್ಳಿ ಗ್ರಾಮದಲ್ಲಿ ಪ್ರಪ್ರಥಮ ಜಿಲ್ಲಾ ತತ್ವಕಾರರ ಸಮ್ಮೇಳನ ನಡೆಯಲಿದ್ದು ಜಿಲ್ಲೆಯಲ್ಲಿ ಸಾಹಿತ್ಯ ಪರಿಷತ್ತು ಹಲವು ಭಿನ್ನ ದೃಷ್ಟಿಕೋನಗಳಿಂದ ವಿನೂತನ ಪ್ರಯೋಗಗಳಿಗೆ ಕೈ ಹಾಕಿದೆ. ಆ ನಿಟ್ಟಿನಲ್ಲಿ ತತ್ವ ಪದಗಾರರ ಸಮ್ಮೇಳರ ಆಯೋಜಿಸಿ ಸ್ಥಳೀಯ ಪ್ರತಿಭೆ ಹನುಮಕ್ಕ ಅವರನ್ನು ಆಯ್ಕೆ ಮಾಡಿರುವುದು ವಿಶೇಷ. ಈ ಭಾಗದಲ್ಲಿ ಶ್ರಮಿಕರ ಶ್ರಮವನ್ನು ಮರೆಸಲು ತತ್ವಪದ ಹಾಗೂ ಭಜನಾ ಪದಗಳನ್ನು ಅವರ ಅನುಭವಗಳ ಮೂಲಕ ಪ್ರದರ್ಶಿಸುವಂಥದ್ದು, ಭಜನಾ ತಂಡಗಳ ಸ್ಪರ್ಧೆ ಏರ್ಪಡಿಸಿ ಬಹುಮಾನ , ಪ್ರಶಸ್ತಿ ಪತ್ರಗಳನ್ನು ವಿತರಿಸಲಾಗುವುದು ಎಂದು ಹೇಳಿದರು. ಕಡೂರು ಕಸಾಪ ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ. ತರೀಕೆರೆ ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ ತತ್ವಪದಕಾರರ ಜಿಲ್ಲಾ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರು ಜಿ ಎಲ್ ಮಂಜುನಾಥ್ ಗಡಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಮ್ಮಯ್ಯ ಜಿಲ್ಲಾ ಕಸಾಪ ಮಹಿಳಾ ಘಟಕದ ಕೋಶಾಧ್ಯಕ್ಷ ಎಂಎಸ್ ವಿಶಾಲಾಕ್ಷಮ್ಮ ಅಜ್ಜಂಪುರ ತಾ.ಕಸಾಪ ಮಹಿಳಾ ಘಟಕ ಅಧ್ಯಕ್ಷೆ ಗಾಯತ್ರಮ್ಮ ತರೀಕೆರೆ ತಾ. ಕಸಾಪ ಮಹಿಳಾ ಘಟಕ ಅಧ್ಯಕ್ಷೆ ಸುನೀತಾ ಕಿರಣ್ ಅಜ್ಜಂಪುರ ತಾ. ಕಜಾಪ ಘಟಕದ ಅಧ್ಯಕ್ಷ ವಿಜಯ ಕುಮಾರಿ, ಶಿವನಿ ಹೋಬಳಿ ಕಸಾಪ ಅಧ್ಯಕ್ಷೆ ರಂಜಿತಾ ಶ್ರೀನಿವಾಸ್ ಕಸಾಪ ಪದಾಧಿಕಾರಿ ಇಮ್ರಾನ್ ಅಹಮದ್ ಬೇಗ್, ಲೇಖಕ ತ ಮಾ ದೇವಾನಂದ, ದಾದಾಪೀರ್, ಶಿಕ್ಷಕರಾದ ಮಂಜುನಾಥ್, ಮಹೇಶ್ ಕುಪ್ಪಾಳು ಶಾಂತಮೂರ್ತಿ, ಚಿಕ್ಕನಲ್ಲೂರು ಪರಮೇಶ್ ಮತ್ತಿತರರು ಇದ್ದರು.