ಚನ್ನಗಿರಿಗೆ ಆಗಮಿಸಿದ ಕಾಶೀಪೀಠ ಶ್ರೀಗಳು: ಅದ್ಧೂರಿ ಮೆರವಣಿಗೆ

| Published : Oct 20 2024, 01:54 AM IST

ಚನ್ನಗಿರಿಗೆ ಆಗಮಿಸಿದ ಕಾಶೀಪೀಠ ಶ್ರೀಗಳು: ಅದ್ಧೂರಿ ಮೆರವಣಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಗಿರಿ ಪಟ್ಟಣದ ವೀರಶೈವ ಲಿಂಗಾಯಿತ ಸಮಾಜ ಮತ್ತು ಪುರೋಹಿತ ಬಳಗ ಹಾಗೂ ಹೊದಿಗೆರೆಯ ಶ್ರೀ ದೈವ ಸಂಸ್ಕೃತಿ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಲೋಕಕಲ್ಯಾಣಕ್ಕಾಗಿ ಪಟ್ಟಣದಲ್ಲಿ ಶ್ರೀ ಜ್ಞಾನ ಸಿಂಹಾಸನದೀಶ್ವರ ವಾರಾಣಸಿ ಕಾಶೀಪೀಠದ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಶ್ರೀಗಳಿಂದ ಅ.19, 20ರಂದು ಸಂಗೀತ ಯುಕ್ತ ಇಷ್ಟಲಿಂಗ ಮಹಾಪೂಜೆ, ಜನಜಾಗೃತಿ ಧರ್ಮ ಸಮಾರಂಭ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಚನ್ನಗಿರಿ

ಪಟ್ಟಣದ ವೀರಶೈವ ಲಿಂಗಾಯಿತ ಸಮಾಜ ಮತ್ತು ಪುರೋಹಿತ ಬಳಗ ಹಾಗೂ ಹೊದಿಗೆರೆಯ ಶ್ರೀ ದೈವ ಸಂಸ್ಕೃತಿ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಲೋಕಕಲ್ಯಾಣಕ್ಕಾಗಿ ಪಟ್ಟಣದಲ್ಲಿ ಶ್ರೀ ಜ್ಞಾನ ಸಿಂಹಾಸನದೀಶ್ವರ ವಾರಾಣಸಿ ಕಾಶೀಪೀಠದ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಶ್ರೀಗಳಿಂದ ಅ.19, 20ರಂದು ಸಂಗೀತ ಯುಕ್ತ ಇಷ್ಟಲಿಂಗ ಮಹಾಪೂಜೆ, ಜನಜಾಗೃತಿ ಧರ್ಮ ಸಮಾರಂಭ ನಡೆಯಲಿದೆ.

ಧಾರ್ಮಿಕ ಕಾರ್ಯಕ್ರಮದ ಹಿನ್ನೆಲೆ ಶನಿವಾರ ಸಂಜೆ ಕಾಶೀಪೀಠದ ಶ್ರೀಗಳು ಚನ್ನಗಿರಿ ಪಟ್ಟಣದ ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಳಿ ಆಗಮಿಸಿದಾಗ ಅವರಿಗೆ ಭಕ್ತರು ಭವ್ಯ ಸ್ವಾಗತ ಕೋರಿ, ಬರಮಾಡಿಕೊಂಡರು.

ಕಾಲೇಜು ಬಳಿಯಿಂದ ಶ್ರೀಗಳು ಅಲಂಕೃತ ಸಾರೋಟಿನಲ್ಲಿ ಆಸೀನರಾದ ಬಳಿಕ ಪೂರ್ಣಕುಂಭ ಹೊತ್ತ ಮುತ್ತೈದೆಯರು ಮೆರವಣಿಗೆಯಲ್ಲಿ ಸಾಗಿದರು. ವೀರಗಾಸೆ, ನಾಸಿಕ್ ಡೋಲ್, ತಮಟೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರುಗು ತಂದವು. ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಕಾರ್ಯಕ್ರಮ ನಡೆಯುವ ಶ್ರೀ ಹಾಲಸ್ವಾಮಿ ಸಮುದಾಯ ಭವನಕ್ಕೆ ಜಗದ್ಗುರು ಅವರನ್ನು ಕರೆತರಲಾಯಿತು.

ಮೆರವಣಿಗೆ ಮಾರ್ಗದುದ್ದಕ್ಕೂ ತಳಿರು ತೋರಣಗಳಿಂದ ಪಟ್ಟಣವನ್ನು ಸಿಂಗರಿಸಲಾಗಿತ್ತು. ತಾವರೆಕೆರೆ ಶಿಲಾಮಠದ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಚನ್ನಗಿರಿ ಹಾಲಸ್ವಾಮಿ ವಿರಕ್ತ ಮಠದ ಶ್ರೀ ಬಸವ ಜಯಚಂದ್ರ ಮಹಾಸ್ವಾಮೀಜಿ, ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು, ನುಗ್ಗೇಹಳ್ಳಿಯ ಶ್ರೀ.ಡಾ.ಮಹೇಶ್ವರ ಶಿವಶಾಂತವೀರ ಮಹಾಸ್ವಾಮಿಗಳು, ವೀರ ಶೈವ ಸಮಾಜದ ಪ್ರಮುಖರಾದ ಸಾಗರದ ಶಿವಲಿಂಗಪ್ಪ, ರಾಜಶೇಖರಯ್ಯ, ಎಲ್.ಎಂ.ರೇಣುಕಪ್ಪ, ವಿದ್ವಾನ್ ಭೂದಿಸ್ವಾಮಿ ಹಿರೇಮಠ್, ಜವಳಿ ಮಹೇಶ್, ನಾಗೇಂದ್ರಯ್ಯ, ಮುರುಡಪ್ಪ, ಹೆಚ್,ಬಿ.ರುದ್ರಯ್ಯ, ಸಂಗಯ್ಯ, ಚಂದ್ರಯ್ಯ, ರಜತಾದ್ರಿ ರವಿಕುಮಾರ್ ಸೇರಿದಂತೆ ಅಪಾರ ಸಂಖ್ಯೆಯ ಸಮಾಜ ಬಾಂಧವರು ಭಾಗವಹಿಸಿದ್ದರು.

ವಿ.ಸೂ

(ಈ ವರದಿಗೆ ಪೋಟೋ ಇದೆ ಪೈಲ್ ನಂ.19ಕೆಸಿಎನ್ಜಿ2,3)(ವಾರಣಾಸಿಯ ಕಾಶೀಪೀಠದ ಶ್ರೀಗಳು ಚನ್ನಗಿರಿ ಪಟ್ಟಣವನ್ನು ಪ್ರವೇಶಿಸುತ್ತಿದ್ದಂತೆಯೇ ಸ್ವಾಗತ ಕೋರಿ ಭವ್ಯ ಮೆರವಣಿಗೆಯನ್ನು ನಡೆಸುತ್ತೀರುವುದು)