ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಅಯೋಧ್ಯೆಯಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆಯುತ್ತಿರುವ 48 ದಿನಗಳ ಮಂಡಲೋತ್ಸವದಲ್ಲಿ ಮಂಗಳವಾರ ರಾಜ್ಯ ಬಿಜೆಪಿಯ ನಿಕಟಪೂರ್ವ ಅಧ್ಯಕ್ಷ, ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಕಾಂಗ್ರೆಸ್ ನಾಯಕ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಸಕುಟುಂಬಿಕರಾಗಿ ಭಾಗವಹಿಸಿ ಬಾಲರಾಮನಿಗೆ ರಜತ ಕಲಶಾಭಿಷೇಕ ಸೇವೆಯನ್ನು ನೀಡಿದರು.ಈ ಸಂದರ್ಭ ಪೇಜಾವರ ಶ್ರೀಗಳು ಅವರಿಗೆ ರಜತ ಕಲಶವನ್ನು ಹಸ್ತಾಂತರಿಸಿ, ಅನುಗ್ರಹ ಮಂತ್ರಾಕ್ಷತೆ ನೀಡಿ ಗೌರವಿಸಿದರು.ಬೆಂಗಳೂರಿನ ತೇಜಸ್ವಿನಿಯವರಿಗೆ ಗೌರವ ಅಲ್ಲದೇ ತಮ್ಮ ‘ಅದಮ್ಯ ಚೇತನ’ ಟ್ರಸ್ಟ್ ಮೂಲಕ ನಿರಂತರವಾಗಿ ಸಮಾಜ ಸೇವೆ, ಸಾಮಾಜಿಕ ಚಟುವಟಿಕೆಗಳನ್ನು ಕೈಗೊಳ್ಳುತ್ತಿರುವ, ಅಯೋಧ್ಯೆಯಲ್ಲಿ ಯಾತ್ರಾರ್ಥಿಗಳಿಗೆ ಉಚಿತ ಊಟೋಪಚಾರದ ವ್ಯವಸ್ಥೆಯನ್ನು ಮಾಡುತ್ತಿರುವ ತೇಜಸ್ವಿನಿ ಅನಂತಕುಮಾರ್ ಅವರು ಮತ್ತು ಅವರ ತಾಯಿಗೆ ಪೇಜಾವರ ಶ್ರೀಗಳು ರಜತಕಲಶ ನೀಡಿ ಗೌರವಿಸಿದರು.ಕನ್ನಡ ಖ್ಯಾತ ನಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ಕೂಡ ಸಹೋದರ, ಸ್ನೇಹಿತರೊಂದಿಗೆ ಮಂಗಳವಾರ ಆಯೋಧ್ಯೆಗೆ ಭೇಟಿ ನೀಡಿ ಪೂಜೆಯಲ್ಲಿ ಭಾಗವಹಿಸಿದರು.