ತೋಕೂರು ಊರ ಪರವೂರ ಹತ್ತು ಸಮಸ್ತರ ಮತ್ತು ಯಕ್ಷ ಕಲಾರಂಗ ತೋಕೂರು ವತಿಯಿಂದ 16ನೇ ವರ್ಷದ ಕಿರು ಷಷ್ಠಿ ಪ್ರಯುಕ್ತ ಕಟೀಲು ಮೇಳದವರಿಂದ ಪ್ರದರ್ಶನಗೊಂಡ ಯಕ್ಷಗಾನ ಬಯಲಾಟ ಸಂದರ್ಭ ಕಟೀಲು ಮೇಳದ ಹಿರಿಯ ಕಲಾವಿದರಾದರನ್ನು ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ತೋಕೂರು ಊರ ಪರವೂರ ಹತ್ತು ಸಮಸ್ತರ ಮತ್ತು ಯಕ್ಷ ಕಲಾರಂಗ ತೋಕೂರು ವತಿಯಿಂದ 16ನೇ ವರ್ಷದ ಕಿರು ಷಷ್ಠಿ ಪ್ರಯುಕ್ತ ಕಟೀಲು ಮೇಳದವರಿಂದ ಪ್ರದರ್ಶನಗೊಂಡ ಯಕ್ಷಗಾನ ಬಯಲಾಟ ಸಂದರ್ಭ ಕಟೀಲು ಮೇಳದ ಹಿರಿಯ ಕಲಾವಿದರಾದ ಪ್ರಶಾಂತ್ ಶೆಟ್ಟಿ ನೆಲ್ಯಾಡಿ, ದಿನಕರ ರಂಗನಾಥ ಗೋಖಲೆ, ರಾಮ ಭಂಡಾರಿ ಚಾರ್ಮಾಡಿ, ಪ್ರಧಾನ ಭಾಗವತ ಬಲಿಪ ಶಿವಶಂಕರ್ ಭಟ್, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜೈಕೃಷ್ಣ ಬಿ. ಕೋಟ್ಯಾನ್, ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ತೋಕೂರು ಮತ್ತು ಸುಮಾರು 45 ವರ್ಷಗಳಿಂದ ಶ್ರೀ ದೇವರ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಮೀನಾಕ್ಷಿ ಕೃಷ್ಣಪ್ಪ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಟೀಲು ದೇವಳದ ಅನುವಂಶಿಕ ಅರ್ಚಕರಾದ ಅನಂತಪದ್ಮನಾಭ ಅಸ್ರಣ್ಣ, ಕಮಲಾದೇವಿ ಪ್ರಸಾದ ಅಸ್ರಣ್ಣ, ಸದಾನಂದ ವೆಂಕಟೇಶ ಅಸ್ರಣ್ಣ , ಹರಿನಾರಾಯಣ ಅಸ್ರಣ್ಣ, ಬಪ್ಪನಾಡು ದೇವಳದ ಅರ್ಚಕ ಪ್ರಸಾದ್ ಭಟ್, ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುರಾಜ್ ಎಸ್. ಪೂಜಾರಿ, ಸದಸ್ಯರಾದ ಪುರುಷೋತ್ತಮ ಕೋಟ್ಯಾನ್, ಸವಿತಾ ಶರತ್ ಬೆಳ್ಳಯೂರು, ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ತೋಕೂರಿನ ಅಧ್ಯಕ್ಷ ಸುರೇಶ್ ಶೆಟ್ಟಿ, ಯುವಕ ಸಂಘ ತೋಕೂರಿನ ಅಧ್ಯಕ್ಷ ವಾಮನ ದೇವಾಡಿಗ, ಗಜಾನನ ಸ್ಪೋರ್ಟ್ಸ್ ಕ್ಲಬ್ ತೋಕೂರಿನ ಅಧ್ಯಕ್ಷ ನಾಗೇಶ್, ಯಕ್ಷ ಕಲಾರಂಗ ತೋಕೂರಿನ ಪ್ರಮುಖರಾದ ಭಾಸ್ಕರ್ ದೇವಾಡಿಗ, ಹಿಮಕರ್ ಕೋಟ್ಯಾನ್, ಗಣೇಶ್ ಪೂಜಾರಿ, ರಮೇಶ್ ಅಮೀನ್ ಮುಂಬೈ, ಗಣೇಶ್ ದೇವಾಡಿಗ ಪಂಜ ಮತ್ತಿತರರು ಉಪಸ್ಥಿತರಿದ್ದರು. ಸಂತೋಷ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.(ಚಿತ್ರ-29ತೋಕೂರು ಯಕ್ಷಗಾನ ಸನ್ಮಾನ)