ಸಾರಾಂಶ
ದೇವಳದ ಆನುವಂಶಿಕ ಮೊಕ್ತೇಸರ, ಪ್ರಧಾನ ಅರ್ಚಕ ವಾಸುದೇವ ಆಸ್ರಣ್ಣರು ಕಲಾವಿದರಿಗೆ ಗೆಜ್ಜೆ ಹಸ್ತಾಂತರಿಸುವ ಮೂಲಕವಾಗಿ ತಿರುಗಾಟಕ್ಕೆ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳ ತಿರುಗಾಟ ಸೋಮವಾರ ಸೇವೆಯಾಟದೊಂದಿಗೆ ಆರಂಭವಾಯಿತು.ದೇವಳದ ಆನುವಂಶಿಕ ಮೊಕ್ತೇಸರ, ಪ್ರಧಾನ ಅರ್ಚಕ ವಾಸುದೇವ ಆಸ್ರಣ್ಣರು ಕಲಾವಿದರಿಗೆ ಗೆಜ್ಜೆ ಹಸ್ತಾಂತರಿಸುವ ಮೂಲಕವಾಗಿ ತಿರುಗಾಟಕ್ಕೆ ಚಾಲನೆ ನೀಡಿದರು.
ದೇವಳದ ಆಡಳಿತ ಮೊಕ್ತೇಸರ ಹಾಗೂ ಆಡಳಿತ ಮಂಡಳಿ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಆರೂ ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಕಮಲಾದೇವಿ ಪ್ರಸಾದ್ ಆಸ್ರಣ್ಣ, ಶ್ರೀ ಹರಿನಾರಾಯಣ ದಾಸ ಆಸ್ರಣ್ಣ, ದೇವಸ್ಥಾನದ ತಂತ್ರಿ ವೇದವ್ಯಾಸ ತಂತ್ರಿ, ಹರಿ ಉಡುಪ ಮೂಡುಮನೆ, ಶಾಸಕ ಉಮನಾಥ ಕೋಟ್ಯಾನ್, ಮಾಜಿ ಸಚಿವ ರಮನಾಥ ರೈ, ಕಟೀಲು ಶ್ರೀದುರ್ಗಾಪರಮೇಶ್ವರಿ ಯಕ್ಷಧರ್ಮ ಬೋಧಿನಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾಘವೇಂದ್ರ ಆಚಾರ್ ಬಜ್ಪೆ, ಬಿಪಿನ್ ಪ್ರಸಾದ್ ಶೆಟ್ಟಿ, ಭುವನಾಭಿರಾಮ ಉಡುಪ, ಅತ್ತೂರು ಮತ್ತು ಕೊಡೆತ್ತೂರು ಮಾಗಣೆಯ ಗ್ರಾಮಸ್ಥರು ಹಾಗೂ ಗಣ್ಯರು ಮತ್ತಿತರರಿದ್ದರು.ಗೆಜ್ಜೆ ಮುಹೂರ್ತಕ್ಕೆ ಪೂರ್ವಾಭಾವಿಯಾಗಿ ದೇವಸ್ಥಾನದ ಒಳಗಿನ ಗೋಪುರದಲ್ಲಿ ಎಲ್ಲ ಆರು ಮೇಳಗಳ ಪ್ರಧಾನ ಭಾಗವತರು, ಹಿಮ್ಮೇಳ ಸಹಿತ ಭಾಗವತಿಕೆಯ ಮೂಲಕ ತಾಳಮದ್ದಳೆ ನಡೆಯಿತು.ನಂತರ ರಥಬೀದಿಯಲ್ಲಿ ಆರು ಮೇಳಗಳ ದೇವರಿಗ ಚೌಕಿ ಪೂಜೆ ನಡೆದ ಬಳಿಕ ಆರು ಮೇಳಗಳ ಬಯಲಾಟ ನಡೆಯಿತು. ಈ ವರ್ಷದ ತಿರುಗಾಟದಲ್ಲಿ ಆರು ಮೇಳಗಳು ಕಾಲಮಿತಿಯಲ್ಲಿ ಪ್ರದರ್ಶನಗೊಳ್ಳಲಿದೆ.