ಕಾಪು ತಾಲೂಕು ವ್ಯಾಪ್ತಿಯ ಫಲಾನುಭವಿಗಳಿಗೆ 94/ಸಿ ಹಾಗೂ 94/ಸಿಸಿ ಅಡಿಯಲ್ಲಿ ಮಂಜೂರಾದ ಖಾಯಂ ನಿವೇಶನ ಹಕ್ಕುಪತ್ರವನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಮಂಗಳವಾರ ತಮ್ಮ ಶಾಸಕರ ಕಚೇರಿ
ಕಾಪು: ಕಾಪು ತಾಲೂಕು ವ್ಯಾಪ್ತಿಯ ಫಲಾನುಭವಿಗಳಿಗೆ 94/ಸಿ ಹಾಗೂ 94/ಸಿಸಿ ಅಡಿಯಲ್ಲಿ ಮಂಜೂರಾದ ಖಾಯಂ ನಿವೇಶನ ಹಕ್ಕುಪತ್ರವನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಮಂಗಳವಾರ ತಮ್ಮ ಶಾಸಕರ ಕಚೇರಿಯಲ್ಲಿ ವಿತರಿಸಿದರು. ಸುಮಾರು 20ಕ್ಕೂ ಅಧಿಕ ವರ್ಷಗಳಿಂದ ವಾಸವಾಗಿರುವ ಕಟಪಾಡಿ ಗ್ರಾಪಂ ವ್ಯಾಪ್ತಿಯ ಏಣಗುಡ್ಡೆ ನಿವಾಸಿ ಮಂಜುಳಾ ರಾಣಿ, ವಿಮಲಾ ಅಮೀನ್, ಮೂಡಬೆಟ್ಟು ಗ್ರಾಮದ ಇಂದಿರಾ ಆಚಾರ್ಯ, ಕುರ್ಕಾಲು ಗ್ರಾಪಂ ವ್ಯಾಪ್ತಿಯ ಭವಿತಾ, ಪಾದೆಬೆಟ್ಟು ಗ್ರಾಪಂ ವ್ಯಾಪ್ತಿಯ ವಾರಿಜ ಸೇರಿದಂತೆ ಒಟ್ಟು 5 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು.
ಇದೇ ಸಂದರ್ಭ ಜಿಲ್ಲಾ ಗ್ರಾಮಾಂತರ ಕೈಗಾರಿಕಾ ಇಲಾಖೆ ವತಿಯಿಂದ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣ ವಿತರಣೆ ಯೋಜನೆಯಡಿ ಗ್ರಾಮೀಣ ಪ್ರದೇಶದ ವೃತ್ತಿನಿರತ ಕುಶಲಕರ್ಮಿಗಳಾದ ಟೈಲರಿಂಗ್, ಮರಗೆಲಸ, ಗಾರೆ ಕೆಲಸ, ಎಲೆಕ್ಟ್ರೀಶಿಯನ್, ಬ್ಯೂಟಿ ಪಾರ್ಲರ್, ಕ್ಷೌರಿಕ ವೃತ್ತಿ ಸೇರಿದಂತೆ ಒಟ್ಟು 81 ಫಲಾನುಭವಿಗಳಿಗೆ ಗರಿಷ್ಠ 8000 ರು.ವರೆಗಿನ ಸುಧಾರಿತ ಉಪಕರಣಗಳ ಕಿಟ್‌ಗಳನ್ನು ಉಚಿತವಾಗಿ ವಿತರಿಸಲಾಯಿತು.