ಸಾರಾಂಶ
ಗುರುವಾರ ಇಲ್ಲಿನ ಶಿರ್ವ, ಬೆಳ್ಳೆ, ಕಟ್ಟಿಂಗೇರಿ ಗ್ರಾಮಗಳನ್ನು ಒಳಗೊಂಡ ಶಿರ್ವ ಮಂಡಲದ ವತಿಯಿಂದ ಮಟ್ಟಾರು ಶ್ರೀಗಣೇಶೋತ್ಸವ ಮೈದಾನದಲ್ಲಿ ಗುರುವಾರ ಜರುಗಿದ ‘ಸಂಘಕ್ಕೆ ನೂರು - ವಿಜಯದಶಮಿ ಉತ್ಸವ’ ನಡೆಯಿತು.
ಕಾಪು: ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ 100 ವರ್ಷಗಳು ತುಂಬಿದ ಸಂದರ್ಭದಲ್ಲಿ ಗುರುವಾರ ಇಲ್ಲಿನ ಶಿರ್ವ, ಬೆಳ್ಳೆ, ಕಟ್ಟಿಂಗೇರಿ ಗ್ರಾಮಗಳನ್ನು ಒಳಗೊಂಡ ಶಿರ್ವ ಮಂಡಲದ ವತಿಯಿಂದ ಮಟ್ಟಾರು ಶ್ರೀಗಣೇಶೋತ್ಸವ ಮೈದಾನದಲ್ಲಿ ಗುರುವಾರ ಜರುಗಿದ ‘ಸಂಘಕ್ಕೆ ನೂರು - ವಿಜಯದಶಮಿ ಉತ್ಸವ’ ನಡೆಯಿತು.
ಇದರಲ್ಲಿ ಕರ್ನಾಟಕ ದಕ್ಷಿಣ ಪ್ರಾಂತ ಶಾರೀರಿಕ್ ಪ್ರಮುಖ್ ಸತೀಶ್ ಕುತ್ಯಾರು ಬೌದ್ಧಿಕ್ ನಡೆಸಿಕೊಟ್ಟರು. ಶಾಖಾ ಮುಖ್ಯ ಶಿಕ್ಷಕ್ ಶಿವಪ್ರಸಾದ್ ನಾಯಕ್ ಬೆಳ್ಳೆ, ಪ್ರಾರ್ಥನಾ ಪ್ರಮುಖ್ ಸುಬ್ರಹ್ಯಣ್ಯ ವಾಗ್ಲೆ ಬಂಟಕಲ್ಲು, ಕರ್ತವ್ಯ ನಿರ್ವಹಿಸಿದರು. ಮಂಡಲ ವ್ಯಾಪ್ತಿಯ ವಿಶ್ವಹಿಂದು ಪರಿಷದ್, ಭಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ, ಸಂಘದ ಸ್ವಯಂಸೇವಕರು, ಹಿರಿಯರು ಪಾಲ್ಗೊಂಡಿದ್ದರು.ಕುತ್ಯಾರು ಮಂಡಲ:
ಅಲ್ಲದೆ ಕುತ್ಯಾರು, ಕಳತ್ತೂರು, ಪಾದೂರು ಗ್ರಾಮಗಳನ್ನು ಒಳಗೊಂಡ ಕುತ್ಯಾರು ಮಂಡಲದ ವತಿಯಿಂದ ಕುತ್ಯಾರು ಸೂರ್ಯ ಚೈತನ್ಯ ಶಾಲಾ ಸಭಾಂಗಣದಲ್ಲಿ ‘ಸಂಘಕ್ಕೆ ನೂರು -ವಿಜಯದಶಮಿ ಉತ್ಸವ’ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಕುತ್ಯಾರು ಆನೆಗುಂದಿ ಮಠದ ಶ್ರೀಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಉಪಸ್ಥಿತರಿದ್ದರು.ಶ್ರೀಕಾಂತ್ ಶೆಟ್ಟಿ ಕಾರ್ಕಳ ಅವರು ಬೌದ್ಧಿಕ್ ನಡೆಸಿಕೊಟ್ಟರು. ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು ಸಹಿತ ೩೦೦ಕ್ಕೂ ಅಧಿಕ ಸಂಘದ ಸ್ವಯಂಸೇವಕರು, ಮಾತೆಯಂದಿರು, ಹಿರಿಯರು ಪಾಲ್ಗೊಂಡಿದ್ದರು.