ಕವಟಗಿಮಠ ಅಧ್ಯಕ್ಷ, ಭಾತೆ ಉಪಾಧ್ಯಕ್ಷ

| Published : Jan 15 2024, 01:49 AM IST

ಸಾರಾಂಶ

ಹಿರಣ್ಯಕೇಶಿ ಕೋ-ಆಫ್ ಟ್ರಾನ್ಸಪೋರ್ಟ್‌ ಸೊಸೈಟಿ ಸಂಕೇಶ್ವರ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಅವರು ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಶಶಿಕಲಾ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಹಿರಣ್ಯಕೇಶಿ ಕೋ-ಆಫ್ ಟ್ರಾನ್ಸಪೋರ್ಟ್‌ ಸೊಸೈಟಿ ಸಂಕೇಶ್ವರ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಅವರು ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಶಶಿಕಲಾ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

15 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ ಎಲ್ಲ ನಾಮಪತ್ರಗಳು ಕ್ರಮಬದ್ದವಾಗಿರುವುದರಿಂದ ಅವಿರೋಧ ಆಯ್ಕೆ ನಡೆದಿದೆ.

ಉಪಾಧ್ಯಕ್ಷರಾಗಿ ಮಹಾಂತೇಶ ಭಾತೆ, ನಿರ್ದೇಶಕರಾಗಿ ಉದಯಕುಮಾರ ದೇಸಾಯಿ, ಅಶೋಕ ಬೈರುಮಾಳಿ, ಬಸವರಾಜ ಭಾತೆ, ಶ್ರೀಕಾಂತ ಚೆನ್ನವರ, ರಾಜೀವ ಪಾಟೀಲ, ಕಲಗೌಡ ಪಾಟೀಲ, ಸಚಿನ ಹೆಬ್ಬಾಳಿ, ಅಕ್ರಮ ಅರಕಾಟೆ, ಶಾಂತಕ್ಕ ಕವಟಗಿಮಠ, ಸುಜಾತಾ ಖೋತ, ಗಣಪತಿ ಕಾಂಬಳೆ, ನಾಗರಾಜ ಮೇದಾರ, ನಿಖಿಲ ಕತ್ತಿ ಅವಿರೋಧ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ಆಯ್ಕೆಯಾದ ಮಹಾಂತೇಶ ಕವಟಗಿಮಠ ಅವರನ್ನು ಆಡಳಿತ ಮಂಡಳಿ ಸದಸ್ಯರು ಸನ್ಮಾನಿಸಿ ಗೌರವಿಸಿದರು.

ಹಲವು ಸಹಕಾರಿ ಸಂಘಗಳ ಬೆಳವಣಿಗೆಗೆ ಬೆಳಗಾವಿ ಜಿಲ್ಲೆ ತನ್ನದೇ ಆದ ಸ್ಥಾನ, ಮಾನ ಹೊಂದಿದೆ. ಇಲ್ಲಿನ ಆರೋಗ್ಯ, ವಿದ್ಯುತ್, ಪೆಟ್ರೋಲ್ ಬಂಕ್ ಈ ರೀತಿಯಾದ ಸಂಘಗಳು ಸಹಕಾರ ಕ್ಷೇತ್ರದಲ್ಲಿ ಸೇವೆ ಮಾಡುತ್ತಿದ್ದು, ಇವು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ತಮ್ಮದೇ ಆದ ಸ್ಥಾನ, ಮಾನವನ್ನು ಹೊಂದಿದೆ.

-ಮಹಾಂತೇಶ ಕವಟಗಿಮಠಮ ವಿಧಾನ ಪರಿಷತ್ ಮಾಜಿ ಸದಸ್ಯರು.13ಸಿಕೆಡಿ4

ಚಿಕ್ಕೋಡಿಯಲ್ಲಿ ಸಂಕೇಶ್ವರ ಹಿರಣ್ಯಕೇಶಿ ಕೋ-ಆಫ್ ಟ್ರಾನ್ಸಪೋರ್ಟ್‌ ಸೊಸೈಟಿ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಅವರನ್ನು ಸನ್ಮಾನಿಸಲಾಯಿತು. ಬಸವರಾಜ ಭಾತೆ, ಉದಯಕುಮಾರ ದೇಸಾಯಿ,ಅಶೋಕ ಬೈರುಮಾಳಿ,ಬಸವರಾಜ ಭಾತೆ,ಶ್ರೀಕಾಂತ ಚೆನ್ನವರ ಉಪಸ್ಥಿತರಿದ್ದರು.