ಕೆಆರ್‌ಎಸ್ ಬೃಂದಾವನದಲ್ಲಿ 11 ದಿನಗಳ ಕಾಲ ಕಾವೇರಿ ಆರತಿ

| Published : Sep 13 2025, 02:04 AM IST

ಸಾರಾಂಶ

ಅಣೆಕಟ್ಟೆಗೆ ಲೇಶರ್ ಲೈಟ್ ಶೋ, ವಿಶೇಷ ದೀಪಾಲಂಕರ ಕೂಡ ಮಾಡಲಾಗುತ್ತದೆ. ಜೊತೆಗೆ ಆಹಾರ ಮೇಳ, ವಸ್ತು ಪ್ರದರ್ಶನ, ವಿವಿಧ ರೀತಿ ಮನೋರಂಜಾನ ಪಾರ್ಕ್‌ಗಳನ್ನು ಹಾಕುವ ಬಗ್ಗೆ ಚರ್ಚಿಸಿಲಾಗಿದೆ. ಸಾವಿರಾರು ಪ್ರವಾಸಿಗರನ್ನು ಆಕರ್ಷಣೆ ಕೇಂದ್ರ ಬಿಂದುವಾಗಲಿದೆ ಬೃಂದಾವನ ಉದ್ಯಾನವನ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ವಿಶ್ವ ವಿಖ್ಯಾತ ಕೆಆರ್‌ಎಸ್‌ ಬೃಂದಾವನದಲ್ಲಿ ದಸರಾ ಹಬ್ಬದ ಹಿನ್ನೆಲೆಯಲ್ಲಿ 11 ದಿನಗಳ ಕಾಲ ನಡೆಯುವ ಕಾವೇರಿ ಆರತಿ ಹಿನ್ನೆಲೆಯಲ್ಲಿ ಸಮಿತಿ ಅಧ್ಯಕ್ಷ ರಾಮ್ ಪ್ರಸಾದ್ ಮನೋಹರ್ ಮತ್ತು ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಸ್ಥಳವನ್ನು ವೀಕ್ಷಣೆ ಮಾಡಿದರು.

ತಾಲೂಕಿನ ಕೆಆರ್‌ಎಸ್ ಬೃಂದಾವನದಲ್ಲಿರುವ ದೋಣಿ ವಿಹಾರ ಕೇಂದ್ರದಲ್ಲಿರುವ ಚಿಕ್ಕ ಕಾವೇರಿ ಪ್ರತಿಮ ಮುಂಭಾಗದಲ್ಲಿ ಸ್ಥಳ ಪರೀಶೀಲನೆ ಮಾಡಿದ ಕಾವೇರಿ ಆರತಿ ಸಮಿತಿ ಅಧ್ಯಕ್ಷರು ಮತ್ತು ಶಾಸಕರು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಜೊತೆ ಚರ್ಚಿಸಿ ಈ ಭಾಗದಲ್ಲಿ ತೆಲುವ ವೇದಿಕೆ ನಿರ್ಮಿಸಿ ಕಾವೇರಿ ಆರತಿ ಮಾಡಲು ತೀರ್ಮಾನಿಸಲಾಯಿತು.

ನಂತರ ಬೃಂದಾವನದ ವಿವಿಧ ಭಾಗಗಳು ಮತ್ತು ಪ್ರವಾಸಿಗ ಪ್ರವೇಶ ದ್ವಾರದ ಮುಂಭಾಗದಲ್ಲಿ ಸ್ಥಳ ಪರಿಶೀಲನೆ ಮಾಡಿದ ತಂಡ ವಿವಿಧ ರೀತಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವ ಬಗ್ಗೆ ಚರ್ಚಿಸಿದರು.

ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಮಾತನಾಡಿ, ಬೃಂದಾವನದಲ್ಲಿ ವಿಶೇಷವಾಗಿ ಕಾವೇರಿ ಆರತಿ ಮಾಡುವ ಹಿನ್ನೆಲೆಯಲ್ಲಿ ವಿಶೇಷವಾಗಿ ವೇದಿಕೆ ನಿರ್ಮಿಸಿ ಮನೋರಂಜನಾ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

ಅಣೆಕಟ್ಟೆಗೆ ಲೇಶರ್ ಲೈಟ್ ಶೋ, ವಿಶೇಷ ದೀಪಾಲಂಕರ ಕೂಡ ಮಾಡಲಾಗುತ್ತದೆ. ಜೊತೆಗೆ ಆಹಾರ ಮೇಳ, ವಸ್ತು ಪ್ರದರ್ಶನ, ವಿವಿಧ ರೀತಿ ಮನೋರಂಜಾನ ಪಾರ್ಕ್‌ಗಳನ್ನು ಹಾಕುವ ಬಗ್ಗೆ ಚರ್ಚಿಸಿಲಾಗಿದೆ. ಸಾವಿರಾರು ಪ್ರವಾಸಿಗರನ್ನು ಆಕರ್ಷಣೆ ಕೇಂದ್ರ ಬಿಂದುವಾಗಲಿದೆ ಬೃಂದಾವನ ಉದ್ಯಾನವನ ಎಂದು ಪತ್ರಿಕೆಗೆ ತಿಳಿಸಿದರು.

ಈ ವೇಳೆ ಕಾವೇರಿ ನೀರಾವರಿ ನಿಗಮ ಅಧೀಕ್ಷಕ ಅಭಿಯಂತರ ರಘುರಾಮ್, ಕಾರ್ಯಪಾಲಕ ಅಭಿಯಂತರ ಜಯಂತ್, ಸಹಾಯಕ ಕಾರ್ಯಪಾಲಕ ಅಭಿಯಂತರ ಫಾರೂಕ್ ಅಭು, ಕಿಶೋರ್ ಕುಮಾರ್, ಸಹಾಯಕ ಅಭಿಂತರರು ಸೇರಿದಂತೆ ಇತರರು ಇದ್ದರು.

ಶ್ರೀರಂಗಪಟ್ಟಣ ದಸರಾ ಸಚಿವರಿಂದ ಲೋಗೋ ಬಿಡುಗಡೆ

ಕನ್ನಡಪ್ರಭ ವಾರ್ತೆ ಮಂಡ್ಯ

ಶ್ರೀರಂಗಪಟ್ಟಣದಲ್ಲಿ ಸೆಪ್ಟೆಂಬರ್ 25ರಿಂದ 28 ರವರೆಗೆ ನಡೆಯುವ ದಸರಾ ಹಿನ್ನೆಲೆಯಲ್ಲಿ ಲೋಗೋವನ್ನು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಶುಕ್ರವಾರ ಬಿಡುಗಡೆಗೊಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಲೋಗೋ ಬಿಡುಗಡೆ ಮಾಡಿದ ಸಚಿವರು, ಈ ಬಾರಿ ಶ್ರೀರಂಗಪಟ್ಟಣ ದಸರಾವನ್ನು ಖ್ಯಾತ ಚಲನಚಿತ್ರ ನಿರ್ದೇಶಕ ಹಾಗೂ ನಟ ಟಿ.ಎಸ್.ನಾಗಾಭರಣ ನೆರವೇರಿಸಲಿದ್ದಾರೆ ಎಂದರು.

ದಸರಾವನ್ನು ವ್ಯವಸ್ಥಿತ ಅರ್ಥಪೂರ್ಣವಾಗಿ ಆಯೋಜಿಸಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸೆ.25ರಂದು ಉದ್ಘಾಟನೆ ಹಾಗೂ ಸೆ.28ರಂದು ಸಮಾರೋಪ ಸಮಾರಂಭ ನಡೆಯಲಿದೆ ಎಂದರು.

ಈ ವೇಳೆ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರಮೇಶ ಬಂಡಿಸಿದ್ದೇಗೌಡ, ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.