ಕುಂಕುವ ಗ್ರಾಪಂ: ಕವಿತ ಅಧ್ಯಕ್ಷೆ, ಚಂದ್ರಮ್ಮ ಉಪಾಧ್ಯಕ್ಷೆ

| Published : Dec 19 2024, 12:31 AM IST

ಕುಂಕುವ ಗ್ರಾಪಂ: ಕವಿತ ಅಧ್ಯಕ್ಷೆ, ಚಂದ್ರಮ್ಮ ಉಪಾಧ್ಯಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ನ್ಯಾಮತಿ ತಾಲೂಕಿನ ಕುಂಕುವ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಿತು. ನೂತನ ಅಧ್ಯಕ್ಷರಾಗಿ ಕವಿತ ಜಗದೀಶ, ಉಪಾಧ್ಯಕ್ಷರಾಗಿ ಚಂದ್ರಮ್ಮ ಬಸವಣ್ಯಪ್ಪ ಅವಿರೋಧ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ನ್ಯಾಮತಿ

ತಾಲೂಕಿನ ಕುಂಕುವ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಿತು. ನೂತನ ಅಧ್ಯಕ್ಷರಾಗಿ ಕವಿತ ಜಗದೀಶ, ಉಪಾಧ್ಯಕ್ಷರಾಗಿ ಚಂದ್ರಮ್ಮ ಬಸವಣ್ಯಪ್ಪ ಅವಿರೋಧ ಆಯ್ಕೆಯಾಗಿದ್ದಾರೆ.

ಕುಂಕುವ ಗ್ರಾಪಂ 10 ಸದಸ್ಯರ ಬಲ ಹೊಂದಿದೆ. ಹಿಂದಿನ ಅಧ್ಯಕ್ಷರು ರಾಜೀನಾಮೆ ಸಲ್ಲಿಸಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಕವಿತ ಜಗದೀಶ್‌ ಮತ್ತು ಚಂದ್ರಮ್ಮ ಮಂಜಪ್ಪ ನಾಮಪತ್ರ ಸಲ್ಲಿಸಿದ್ದರು. ಚಂದ್ರಮ್ಮ ನಾಮಪತ್ರ ಹಿಂತೆಗೆದುಕೊಂಡಿದ್ದರಿಂದ ಆಧ್ಯಕ್ಷರಾಗಿ ಕವಿತ ಆಯ್ಕೆಯಾದರು.

ಉಪಾಧ್ಯಕ್ಷ ಸ್ಥಾನಕ್ಕೆ ಚಂದ್ರಮ್ಮ ಬಸವಣ್ಯಪ್ಪ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಆದಕಾರಣ ಅವಿರೋಧವಾಗಿ ಚಂದ್ರಮ್ಮ ಬಸವಣ್ಯಪ್ಪ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಕಣ್ಣಮಾಪ್ಪ ಘೋಷಣೆ ಮಾಡಿದರು.

ಗ್ರಾಪಂ ಸದಸ್ಯರಾದ ಚಂದ್ರಮ್ಮ ಜೀವೇಶಪ್ಪ, ತಿಮ್ಮಪ್ಪ, ಶಿವು, ಶೃತಿ, ಬಸವರಾಜ, ಮಂಜೇಶ್‌, ಚಂದನ್‌, ಚಂದ್ರಮ್ಮ, ಪಿಡಿಒ ಎಂ.ಜಯಪ್ಪ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.

- - - (-ಫೋಟೋ)