ಸಾರಾಂಶ
ತಾಲೂಕಿನ ಮುನಿಯೂರು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಶ್ರೀರಾಮಪುರದ ಸದಸ್ಯೆ ಕಾವ್ಯಾ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ, ತುರುವೇಕೆರೆ
ತಾಲೂಕಿನ ಮುನಿಯೂರು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಶ್ರೀರಾಮಪುರದ ಸದಸ್ಯೆ ಕಾವ್ಯಾ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಹಿಂದಿನ ಅಧ್ಯಕ್ಷೆ ಟಿ.ಲಕ್ಷ್ಮೀವೆಂಕಟೇಶ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು. 16 ಸದಸ್ಯರ ಬಲ ಹೊಂದಿರುವ ಗ್ರಾಮ ಪಂಚಾಯತ್ ಅಧಕ್ಷ ಚುನಾವಣೆಗೆ 11 ಸದಸ್ಯರು ಭಾಗವಹಿಸಿದ್ದರು. 5 ಸದಸ್ಯರು ಗೈರು ಹಾಜರಾಗಿದ್ದರು. ಅಧ್ಯಕ್ಷ ಸ್ಥಾನಕ್ಕೆ ಕಾವ್ಯಮಂಜುನಾಥ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಇ.ಓ.ಶಿವರಾಜಯ್ಯ ನೂತನ ಅಧ್ಯಕ್ಷರಾಗಿ ಕಾವ್ಯ ಮಂಜುನಾಥ್ ಆಯ್ಕೆಯಾಗಿದ್ದಾರೆಂದು ಘೋಷಿಸಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆಯಾಗಿ ಪುಷ್ಪಲತಾ ಮುಂದುವರೆದಿದ್ದಾರೆ. ನೂತನ ಅಧ್ಯಕ್ಷರ ಬೆಂಬಲಿಗರು, ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಎಂ.ಡಿ.ಮೂರ್ತಿ, ಗ್ರಾಮ ಪಂಚಾಯಿತಿ ಸದಸ್ಯರಾದ ವರಮಹಾಲಕ್ಷಮ್ಮ, ರಾಜೇಶ್ವರಿ, ಪುಷ್ಪಲತಾ, ಜಿ.ಕಾಂತರಾಜು, ಜಿ.ಗಂಗಾಧರಸ್ವಾಮಿ, ಲಕ್ಷ್ಮೀ, ಬಿ.ಆರ್.ರವೀಶ್, ಕಮಲ, ವೀಣಾ, ವೈ.ಗಂಗಣ್ಣ, ಪಂಚಾಯತಿ ಪಿಡಿಓ ಚಂದ್ರಶೇಖರ್, ಕೊಡಗಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕಿರಣ್, ಮುಖಂಡರಾದ ಎಂ.ಡಿ.ಮೂರ್ತಿ, ರುದ್ರೇಶ್, ರಂಗಸ್ವಾಮಿ, ಪ್ರಕಾಶ್, ಲಿಂಗರಾಜು, ಶಿವರಾಜು, ಶ್ರೀರಾಮಪುರ ಗುಡಿಗೌಡರಾದ ರಾಜಣ್ಣ, ಗ್ರಾಮದ ಮುಖಂಡರಾದ ಕಾಯಿ ಸುರೇಶ್, ಕಾವೇಟಿ ಮಂಜುನಾಥ್, ಭೀಮಣ್ಣ ಹಾಗೂ ಶ್ರೀರಾಮಪುರ ಗ್ರಾಮಸ್ಥರು ಸೇರಿ ಅಪಾರ ಅಭಿಮಾನಿಗಳು ಅಭಿನಂದಿಸಿದರು.