ಸಾರಾಂಶ
ಹಗರಿಬೊಮ್ಮನಹಳ್ಳಿ: ಕ್ರಾಂತಿಕಾರಿ ಬಸವಣ್ಣನವರು ಸಮಾಜವನ್ನು ವಿಭಜಿಸಿ ಶೋಷಣೆಗಾಗಿ ಬಳಸುತ್ತಿರುವ ಮೋಸ ಬಯಲುಗೊಳಿಸಿ ಸಮಸಮಾಜ ನಿರ್ಮಾಣಕ್ಕೆ ನಿರಂತರ ಶ್ರಮಿಸಿದ್ದಾರೆ ಎಂದು ಬಾಚಿಗೊಂಡನಹಳ್ಳಿಯ ತೋಂಟದಾರ್ಯ ಶಾಖಾಮಠದ ಶಿವಮಹಾಂತ ಸ್ವಾಮೀಜಿ ಹೇಳಿದರು.
ತಾಲೂಕಿನ ತಂಬ್ರಹಳ್ಳಿ ಮೈಲಾರಲಿಂಗೇಶ್ವರ ಶಿಬಾರಕಟ್ಟೆ, ಪಾದಗಟ್ಟೆ ನಾಗದೇವತಾ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಅವರು ಮಾತನಾಡಿದರು.ಜಾತಿ ಏಣಿಶ್ರೇಣಿಯ ಜಾಢ್ಯವನ್ನು ಕಿತ್ತುಹಾಕುವಲ್ಲಿ ಬಸವಣ್ಣನವರು 12ನೇ ಶತಮಾತನದಲ್ಲಿ ಪ್ರಯತ್ನಿಸಿ ಯಶಸ್ವಿಯಾಗಿದ್ದಾರೆ. ಅಂದೇ ಅನ್ಯಕೋಮಿನವರೊಂದಿಗೆ ವಿವಾಹ ಮಾಡಿಸಿ ಎಲ್ಲರೂ ಒಂದೇ ಎಂಬುವ ಭಾವನೆ ಬಿತ್ತಿದ್ದಾರೆ. ಧಾರ್ಮಿಕ ಕಾರ್ಯಕ್ರಮಗಳು ಮನುಷ್ಯನ ಮನಸ್ಥಿತಿಯನ್ನು ಸುಧಾರಿಸುವುದರ ಜೊತೆಗೆ ಏಕಾಗ್ರತೆ ಹೆಚ್ಚಿಸುತ್ತವೆ. ಪ್ರತಿಯೊಬ್ಬರು ತಮ್ಮ ಕಾಯಕವನ್ನು ಪ್ರೀತಿಸಬೇಕು. ಕಾಯಕ ಸಮಾಜಕ್ಕೆ ಮಾದರಿಯಾಗಿರಬೇಕು. ಮಕ್ಕಳಿಗೆ ಬಾಲ್ಯವಸ್ಥೆಯಲ್ಲಿಯೇ ಮಾದರಿ ಶಿಕ್ಷಣ ನೀಡಿ, ಸುಸಂಸ್ಕೃತರನ್ನಾಗಿಸಬೇಕು ಎಂದರು.
ನಂದಿಪುರದ ಡಾ.ಮಹೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ತಂಬ್ರಹಳ್ಳಿ ಧಾರ್ಮಿಕ ಕಾರ್ಯಕ್ರಮಗಳ ತವರೂರು. ಇಂತಹ ಕಾರ್ಯಕ್ರಮಗಳು ಇಲ್ಲಿ ಹೆಚ್ಚು ಆಗುತ್ತಿರುವುದರಿಂದ ಗ್ರಾಮದಲ್ಲಿ ಶಾಂತಿ ನೆಲೆಸಿದೆ. ಪರಸ್ಪರ ಸಾಮರಸ್ಯದಿಂದ ನಡೆದಾಗ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ ಎಂದು ತಿಳಿಸಿದರು. ಹಂಪಸಾಗರದ ಶಿವಲಿಂಗ ರುದ್ರಮನಿ ಶಿವಾಚಾರ್ಯ ಸ್ವಾಮೀಜಿ, ಹಬೊಹಳ್ಳಿಯ ಹಾಲಸಿದ್ದೇಶ್ವರ ಸ್ವಾಮೀಜಿ, ಬೆಣ್ಣಿಹಳ್ಳಿ ಪಂಚಾಕ್ಷರಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.ಧಾರ್ಮಿಕ ಮೆರಗು:ಮೈಲಾರಲಿಂಗೇಶ್ವರ ಸ್ವಾಮಿಯ ಶಿಬಾರಕಟ್ಟೆ ಪ್ರತಿಷ್ಠಾಪನೆಯ ಮುನ್ನ ನವಗ್ರಹ ಪೂಜೆ, ಹೋಮಹವನವನ್ನು ಮುತ್ಕೂರು ವೀರಭದ್ರಯ್ಯ ಶಾಸ್ತಿç, ತಂಬ್ರಹಳ್ಳಿಯ ಮಹಬಲೇಶ್ವರಯ್ಯ, ಡಿ.ಎಂ. ಶಿವಮೂರ್ತೆಯ್ಯ ಅತ್ಯಂತ ಶಾಸ್ತ್ರೋಕ್ತವಾಗಿ ನೆರವೇರಿಸಿದರು. ನಂತರ ಮೂರ್ತಿ ಪ್ರತಿಷ್ಠಾಪನೆ ಮಾಡಿ ಗಂಗೆಪೂಜೆ ಮಾಡಲಾಯಿತು. ಇದೇ ವೇಳೆ ಕಂಚಿವೀರರು ಒಡಪು ಮತ್ತು ಮೈಲಾರಲಿಂಗೇಶ್ವರರ ಪವಾಡಗಳನ್ನು ಹೇಳುವ ಮೂಲಕ ನೆರೆದವರ ಗಮನ ಸೆಳೆದರು.
ಕಾರ್ಯಕ್ರಮದ ನಂತರ ತಂಬ್ರಹಳ್ಳಿ ದಾನಿಗಳ ಕುಟುಂಬದ ಅಕ್ಕಿ ಕೊಟ್ರಮ್ಮ, ಮೂರ್ತಿದಾನಿ ಬಾಚಿನಳ್ಳಿ ದೇವಿಪ್ರಸಾದ, ಹಂದರದ ದಾನಿ ಬಸಲಿಂಗನಗೌಡ, ಶಿಬಾರಕಟ್ಟೆಗೆ ಸ್ಟೀಲ್, ಸಿಮೆಂಟ್ ದಾನಮಾಡಿದ ಗುಡ್ಲನೂರು ರಮೇಶ, ಉಂಕಿ ಸಿದ್ದಪ್ಪ, ಬಡಿಗೇರ್ ವೀರಣ್ಣ, ಪಟ್ಟಣಶೆಟ್ಟಿ ಮೈಲಾರಿ, ಗೌಡ್ರು ರತ್ನಮ್ಮ, ಕಾಕುಬಾಳ ತಿಪ್ಪಣ್ಣ, ಶಿಕ್ಷಕ ಎಂ.ಎಸ್.ಕಲ್ಗುಡಿ ಸೇರಿ ಇತರರನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಎಚ್.ಬಿ. ಗಂಗಾಧರಗೌಡ, ರೆಡ್ಡಿ ಮಂಜುನಾಥ ಪಾಟೀಲ್, ಪಟ್ಟಣಶೆಟ್ಟಿ ಮೂಕಪ್ಪ, ಮ್ಯಾಳ ಶಶಿಧರ, ವಸಂತ ಗುಡ್ಲಾನೂರು, ಪಟ್ಟಣಶೆಟ್ಟಿ ಫಕ್ಕೀರಪ್ಪ, ಜಿ.ವಿರುಪಾಕ್ಷಪ್ಪ, ಪ್ರಕಾಶ್ ಗೌಡ, ಬಟಗೇರಿ ನಿಂಗಪ್ಪ, ಹಿರೇಮನಿ ಮರಿಯಪ್ಪ, ಎಚ್.ದೊಡ್ಡಬಸಪ್ಪ, ಜಂಗಸನಳ್ಳಿ ಮುದಿಯಪ್ಪ, ಕರಿಬಸಪ್ಪ, ಪಟ್ಟಣಶೆಟ್ಟಿ ವೀರೇಶ್, ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್, ಮುಖಂಡರಾದ ಗೌರಜ್ಜನವರ ಬಸವರಾಜಪ್ಪ, ಡಂಬ್ರಹಳ್ಳಿ ಮಹೇಶ್, ಪಿ.ಕೊಟ್ರೇಶ, ಕಡ್ಡಿ ಕೊಟ್ರೇಶ ಇದ್ದರು. ಕಾರ್ಯಕ್ರಮವನ್ನು ದೇವಸ್ಥಾನ ಸಮಿತಿಯ ಅಧ್ಯಕ್ಷ ಪಟ್ಟಣಶೆಟ್ಟಿ ಸುರೇಶ ನಿರ್ವಹಿಸಿದರು.