ನಾಳೆ, ನಾಡಿದ್ದು ದ್ವೀತಿಯ ಕಾಯಕ ಉತ್ಸವ: ಚೆನ್ನವೀರ ಶಿವಾಚಾರ್ಯರು

| Published : Feb 09 2024, 01:48 AM IST

ನಾಳೆ, ನಾಡಿದ್ದು ದ್ವೀತಿಯ ಕಾಯಕ ಉತ್ಸವ: ಚೆನ್ನವೀರ ಶಿವಾಚಾರ್ಯರು
Share this Article
  • FB
  • TW
  • Linkdin
  • Email

ಸಾರಾಂಶ

ಉತ್ಸವದಲ್ಲಿ ಸ್ಥಳೀಯ ಉತ್ಪನ್ನಗಳ ಪ್ರದರ್ಶನ ಹಾಗೂ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶ್ರೀಗಳು ತಿಳಿಸಿದರು. ಇದೆ ಸಂದರ್ಭದಲ್ಲಿ ಉತ್ಸವದ ಆಮಂತ್ರಣವನ್ನು ಪೂಜ್ಯರು ಬಿಡುಗಡೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

12ನೇ ಶತಮಾನದ ಶರಣರ ಕಾಯಕ ಭೂಮಿ ಬಸವಕಲ್ಯಾಣ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಅಂತಹ ಶರಣರ ಕರ್ಮ ಭೂಮಿಯಲ್ಲಿ ಫೆ.10 ಮತ್ತು 11ರಂದು ದ್ವಿತೀಯ ಕಾಯಕ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಹಾರಕೂಡ ಪೀಠಾಧಿಪತಿ ಡಾ. ಚೆನ್ನವೀರ ಶಿವಾಚಾರ್ಯರು ತಿಳಿಸಿದರು.

ಚೆನ್ನಬಸವೇಶ್ವರ ಸಂಸ್ಥಾನ ಹಿರೇಮಠ ಹಾರಕೂಡ ವತಿಯಿಂದ ಮತ್ತು ಬಸವಕಲ್ಯಾಣ ಕ್ಷೇತ್ರ ಸಮಿತಿ ಬಸವಕಲ್ಯಾಣ ಇವರ ಸಹಯೋಗದಲ್ಲಿ ಫೆಬ್ರವರಿ 10 ಮತ್ತು 11ರಂದು ನಗರದ ಥೇರ್‌ ಮೈದಾನದಲ್ಲಿರುವ ಸಭಾ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಫೆ.10 ರಂದು ಸ್ಥಳೀಯ ಉತ್ಪನ್ನಗಳ ಪ್ರದರ್ಶನ ಉದ್ಘಾಟನೆ, ಸಾನ್ನಿಧ್ಯವನ್ನು ನಾಡೋಜಾ ಡಾ.ಬಸವಲಿಂಗ ಪಟ್ಟದೇವರು ವಹಿಸಲಿದ್ದು ಬಸವಕಲ್ಯಾಣದ ಸಿದ್ಧರಾಮೇಶ್ವರ ಸ್ವಾಮೀಜಿ ಸಮ್ಮುಖ ವಹಿಸುವರು. ಆಶಯ ನುಡಿಗಳನ್ನು ಡಾ.ಬಸವರಾಜ ಪಾಟೀಲ ಸೇಡಂ, ಮುಖ್ಯ ಅತಿಥಿಯಾಗಿ ರಮೇಶ ಕೋಲಾರ, ಎಂಎಲ್ಸಿ ಚಂದ್ರಶೇಖರ ಪಾಟೀಲ ಉದ್ಘಾಟಿಸುವರು.

ಫೆ.11ರಂದು ಸಮಾರೋಪ ಸಮಾರಂಭ ಹಾಗೂ ಚೆನ್ನಬಸವ ಕಾಯಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ನೇತೃತ್ವ ಚೆನ್ನವೀರ ಶಿವಚಾರ್ಯರು ವಹಿಸಿದರೆ, ಸಾನ್ನಿಧ್ಯವನ್ನು ಡಾ.ಬಸವಲಿಂಗ ಪಟ್ಟದೇವರು ವಹಿಸುವರು ಶಾಸಕ ಶರಣು ಸಲಗರ ಪ್ರಶಸ್ತಿ ಪ್ರದಾನ ಮಾಡುವರು.

ಇದೇ ಸಂಧರ್ಭದಲ್ಲಿ ಚೆನ್ನಬಸವ ಕಾಯಕ ರತ್ನ ಪ್ರಶಸ್ತಿಯನ್ನು ಬಾಗಲಕೋಟೆಯ ಉಬ್ಬು ಚಿತ್ರ ಕಲಾವಿದರಾದ ಡಾ.ಬಸವರಾಜ ಎಸ್ ಅನಗವಾಡಿ ಅವರಿಗೆ 25 ಸಾವಿರ ರು. ನಗದು ಹಾಗೂ ಪ್ರಶಸ್ತಿ ಫಲಕ ನೀಡಿ ಸತ್ಕರಿಸಲಾಗುವದು.

ಇದೇ ಸಂದರ್ಭದಲ್ಲಿ ಮಠದಲ್ಲಿ ದ್ವಿತೀಯ ಕಾಯಕ ಉತ್ಸವದ ಆಮಂತ್ರಣವನ್ನು ಬಿಡುಗಡೆಗೊಳಿಸಲಾಯಿತು.

ಜಿಪಂ ನಿವೃತ್ತ ಉಪ ಕಾರ್ಯದರ್ಶಿ ಬಿ.ಕೆ ಹಿರೇಮಠ, ಮಲ್ಲಿನಾಥ ಹಿರೇಮಠ ಹಾರಕೂಡ, ಜಿಪಂ ಮಾಜಿ ಸದಸ್ಯ ಚಂದ್ರಶೇಖರ ಪಾಟೀಲ ಮುಡಬಿ, ಸೂರ್ಯಕಾಂತ ಮಠ, ರಮೇಶ ರಾಜೋಳೆ, ಅಪ್ಪಣ್ಣ ಜನವಾಡ, ರಾಜಕುಮಾರ ದೇಗಾಂವ, ಶಿವಶರಣಯ್ಯ ಕಂಬಳಿಮಠ ವೀರಣ್ಣ ಶೀಲವಂತ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.