ನಿವೃತ್ತರು ಸದಸ್ಯತ್ವ ಪಡೆದುಕೊಳ್ಳಲು ಕೆ.ಬಿ.ಶಿವಲಿಂಗಯ್ಯ ಮನವಿ

| Published : Jul 03 2024, 12:15 AM IST

ನಿವೃತ್ತರು ಸದಸ್ಯತ್ವ ಪಡೆದುಕೊಳ್ಳಲು ಕೆ.ಬಿ.ಶಿವಲಿಂಗಯ್ಯ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೇ ಕಾರ್ಯಕ್ರಮಗಳು ಯಶಸ್ಸು ಕಾಣಬೇಕಾದರೆ ಕೇವಲ ಸಂಘದ ಪದಾಧಿಕಾರಿಗಳಿಂದ ಮಾತ್ರ ಸಾಧ್ಯವಾಗುವುದಿಲ್ಲ. ಪ್ರತಿಯೊಬ್ಬರೂ ಕೈ ಜೋಡಿಸಬೇಕು. ಈ ಹಿನ್ನೆಲೆಯಲ್ಲಿ ನನಗೆ ಯಾವ ರೀತಿ ಸಹಕಾರ ಸಿಗುತ್ತದೋ ಆ ರೀತಿ ಅಭಿವೃದ್ಧಿಗೆ ವೇಗ ನೀಡಬಹುದು.

ಕನ್ನಡಪ್ರಭ ವಾರ್ತೆ ಮಂಡ್ಯ

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ಬಹಳಷ್ಟು ಮಂದಿ ನಿವೃತ್ತರಾಗಿದ್ದಾರೆ. ಸಂಘದ ಅಭಿವೃದ್ಧಿಯ ದೃಷ್ಟಿಯಿಂದ ಎಲ್ಲರೂ ಸದಸ್ಯತ್ವ ಪಡೆದುಕೊಳ್ಳಬೇಕು ಎಂದು ನೂತನ ಅಧ್ಯಕ್ಷ ಕೆ.ಬಿ.ಶಿವಲಿಂಗಯ್ಯ ತಿಳಿಸಿದರು.

ರಾಜ್ಯ ಸರ್ಕಾರಿ ನಿವತ್ತ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿ, ಯಾವುದೇ ಸಂಘ-ಸಂಸ್ಥೆಗಳು ಅಭಿವೃದ್ಧಿಯತ್ತ ಸಾಗಬೇಕಾದರೆ ಸದಸ್ಯರ ಸಹಕಾರ ಅವಶ್ಯಕ. ಈ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಸಂಘದ ಕಟ್ಟಡ ಮೇಲ್ಬಾಗದಲ್ಲಿ ಮೊದಲನೇ ಮಹಡಿ ಕಟ್ಟಡ ನಿರ್ಮಾಣಕ್ಕೆ ಈ ಹಿಂದೆ ಚಿಂತನೆ ನಡೆಸಲಾಗಿತ್ತು. ಕಾರಣಾಂತರಗಳಿಂದ ಅದು ಸ್ಥಗಿತಗೊಂಡಿತ್ತು. ಈಗಲಾದರೂ ಮೇಲಂತಸ್ತಿನ ಕಟ್ಟಡ ನಿರ್ಮಾಣ ಮಾಡಬೇಕಿದೆ. ಎಲ್ಲರೂ ಅದಕ್ಕೆ ಸಹಕಾರ, ಪ್ರೋತ್ಸಾಹ ನೀಡಬೇಕು ಎಂದು ಕೋರಿದರು.

ಯಾವುದೇ ಕಾರ್ಯಕ್ರಮಗಳು ಯಶಸ್ಸು ಕಾಣಬೇಕಾದರೆ ಕೇವಲ ಸಂಘದ ಪದಾಧಿಕಾರಿಗಳಿಂದ ಮಾತ್ರ ಸಾಧ್ಯವಾಗುವುದಿಲ್ಲ. ಪ್ರತಿಯೊಬ್ಬರೂ ಕೈ ಜೋಡಿಸಬೇಕು. ಈ ಹಿನ್ನೆಲೆಯಲ್ಲಿ ನನಗೆ ಯಾವ ರೀತಿ ಸಹಕಾರ ಸಿಗುತ್ತದೋ ಆ ರೀತಿ ಅಭಿವೃದ್ಧಿಗೆ ವೇಗ ನೀಡಬಹುದು ಎಂದರು.

ಮಾಜಿ ಅಧ್ಯಕ್ಷ ಬಿ.ಸಿದ್ದಯ್ಯ, ಕಾರ್ಯದರ್ಶಿ ತಿಮ್ಮಯ್ಯ, ಖಜಾಂಚಿ ರಾಮೇಗೌಡ, ಮಾಜಿ ಅಧ್ಯಕ್ಷ ನಾರಾಯಣಗೌಡ, ನಿರ್ದೇಶಕರಾದ ಹುಚ್ಚೇಗೌಡ ಸೇರಿದಂತೆ ಹಲವರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಶಿಕ್ಷಕ ವೃತ್ತಿ ಪೂರ್ವಜನ್ಮದ ಪುಣ್ಯ: ಎಚ್.ಎಂ. ಬಸವರಾಜಪ್ಪಕಿಕ್ಕೇರಿ:ನೂರಾರು ಶಿಷ್ಯರನ್ನು ಪಡೆದು ಉತ್ತಮ ಭವಿಷ್ಯ ರೂಪಿಸಿ, ಸುಭದ್ರ ನಾಡು ಕಟ್ಟುವ ವೃತ್ತಿ ಶಿಕ್ಷಕ ವೃತ್ತಿ ಎಂದು ನಿವೃತ್ತ ಉಪಪ್ರಾಂಶುಪಾಲ ಎಚ್.ಎಂ.ಬಸವರಾಜಪ್ಪ ಹೇಳಿದರು.

ಪಟ್ಟಣದ ಕೆಪಿಎಸ್ ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಹಿನ್ನೆಲೆಯಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಆಯೋಜಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.ನೌಕರಿಯಲ್ಲಿ ವರ್ಗಾವಣೆ, ನಿವೃತ್ತಿ ಸಹಜ. ಈ ವೇಳೆಯಲ್ಲಿ ನಾವು ಮಾಡಿದ ಉತ್ತಮ ಕೆಲಸಗಳು ಮಾತ್ರ ಉಳಿಯಲಿವೆ. ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ಓದು ಬರಹ ಕಲಿಸುವುದು ಪರಮಾತ್ಮನ ಸೇವೆ ಮಾಡಿದಷ್ಟು ಪುಣ್ಯ ಎಂದರು.

ಕಡು ಬಡತನ, ರೈತ ಕುಟುಂಬಗಳಿರುವ ಗ್ರಾಮೀಣ ಪ್ರದೇಶದ ಮಕ್ಕಳು ಸರ್ಕಾರಿ ಶಾಲೆಯಲ್ಲಿದ್ದು, ಇವರ ಉತ್ತಮ ಭವಿಷ್ಯಕ್ಕಾಗಿ ಪ್ರಾಮಾಣಿಕವಾಗಿ ಸೇವೆ ಮಾಡಿದ್ದೇನೆ ಎಂದರು.ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ವೆಂಕಟೇಶ್‌ ಸನ್ಮಾನ ಸ್ವೀಕರಿಸಿ ಮಾತನಾಡಿ, ದೈಹಿಕ ಶಿಕ್ಷಣ ಮಕ್ಕಳಿಗೆ ಓದಿನಷ್ಟೆ ಮುಖ್ಯ. ಉತ್ತಮ ಕ್ರೀಡಾಪಟುಗಳಿಗೆ ಉನ್ನತ ವ್ಯಾಸಂಗ, ಉದ್ಯೋಗದಲ್ಲಿ ಮೀಸಲಾತಿ ಇದೆ ಎಂದರು.

ಇದೇ ವೇಳೆ ಮಕ್ಕಳು ಗುರುಗಳನ್ನು ಗೌರವಿಸಿ ಫಲತಾಂಬೂಲ, ಕಿರು ನೆನಪಿನ ಕಾಣಿಕೆ ನೀಡಿ ಬೀಳ್ಕೊಟ್ಟರು. ಈ ವೇಳೆ ಶಿಕ್ಷಕರಾದ ಎಸ್.ಎಂ.ಬಸವರಾಜು, ಬಿ.ಎನ್.ಪರಶಿವಮೂರ್ತಿ, ಸುರೇಶ್, ಕೃಷ್ಣಪ್ಪ, ಪ್ರಸನ್ನ, ಪಿ.ಗಿರೀಶ್‌ಕುಮಾರ್, ದೀಪಕ್, ವೆಂಕಟರಮಣ ಹೆಗಡೆ, ಶ್ರೀಕಾಂತ್ ಚಿಮ್ಮಲ್, ಚಂದ್ರೇಗೌಡ, ಲೀಲಾವತಿ, ಸೌಮ್ಯ, ನಂದಿನಿ, ರಾಗಿಣಿ ಉಪಸ್ಥಿತರಿದ್ದರು.