ಮನೆಯಂತೆ ಶಾಲೆ ಸ್ವಚ್ಛವಾಗಿಡಿ

| Published : Apr 04 2024, 01:06 AM IST

ಸಾರಾಂಶ

ಪ್ರತಿ ಶಾಲಾ ಸಿಬ್ಬಂದಿ ಹಾಗೂ ಮಕ್ಕಳು ತಮ್ಮ ಮನೆ ನಿರ್ವಹಣೆ ಮಾಡಿದಂತೆಯೇ ತಾವು ಕಲಿಯುವ ಹಾಗೂ ಕಲಿಸುವ ಶಾಲೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.

ಧಾರವಾಡ:

ಪ್ರತಿ ಶಾಲಾ ಸಿಬ್ಬಂದಿ ಹಾಗೂ ಮಕ್ಕಳು ತಮ್ಮ ಮನೆ ನಿರ್ವಹಣೆ ಮಾಡಿದಂತೆಯೇ ತಾವು ಕಲಿಯುವ ಹಾಗೂ ಕಲಿಸುವ ಶಾಲೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ರೋಟರಿ ಗವರ್ನರ್‌ ಶರದ ಪೈ ಹೇಳಿದರು.

ನಗರ ಪೊಲೀಸ್‌ ಹೆಡ್ ಕ್ವಾಟರ್‌ನಲ್ಲಿರುವ ಶಾಸಕರ ಸರ್ಕಾರಿ ಮಾದರಿ ಕೇಂದ್ರ ಪ್ರಾಥಮಿಕ ಶಾಲೆಗೆ ರೋಟರಿ ಕ್ಲಬ್ ಧಾರವಾಡ ಹೆರಿಟೇಜ ವತಿಯಿಂದ ₹ 1,16 ಲಕ್ಷ ಬಣ್ಣ ಹಚ್ಚಿರುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ನಾವು ಚಿಕ್ಕವರಿದ್ದಾಗ ಇಷ್ಟು ಸುಸಜ್ಜಿತ ಶಾಲೆಗಳು ಇರಲಿಲ್ಲ. ಅಂಗನವಾಡಿ, ದೇವಸ್ಥಾನಗಳ ಪ್ರಾಂಗಣ, ನೈಸರ್ಗಿಕ ವಾತಾವರಣ ಇರುವ ಗಿಡದ ಕೆಳಗೆ ಕುಳಿತು ಕಲಿಯಬೇಕಾದ ಪರಸ್ಥಿತಿ ಇತ್ತು. ಈಗ ಸರ್ಕಾರ ಕಟ್ಟಡ ನಿರ್ಮಿಸಿ ಕೂಟ್ಟಿದ್ದು ಅದರ ಸದುಪಯೋಗ ಮಾಡಿಕೊಳ್ಳಿ, ಮಾನವೀಯ ಗುಣ, ಸಮಯ ಪಾಲನೆ, ಶಿಸ್ತು ಹಾಗೂ ವಿದ್ಯಾಜ೯ನೆ ನೀಡಿದ ಗುರುಗಳಿಗೆ ಗೌರವ ನೀಡಿ ಯಶಸ್ವಿಯಾಗಿರಿ ಎಂದರು.

ರೋಟರಿ ಕ್ಲಬ್ ಧಾರವಾಡ ಹೇರಿಟೇಜ ಅಧ್ಯಕ್ಷ ಡಾ. ಭುವನೇಶ ಆರಾಧ್ಯ ಮಾತನಾಡಿ, ಶಾಲೆಗೆ ಸರ್ಕಾರದಿಂದ ಬಣ್ಣದ ಡಬ್ಬಿಗಳು ಬಂದಿದ್ದು ಅದನ್ನು ಹಚ್ಚುವ ಕಾರ್ಯ ನಮಗೆ ಸಿಕ್ಕಿದೆ. ಶಾಲೆ ಅಂದವಾಗಿದ್ದರೆ ಮಕ್ಕಳು ಉತ್ಸಾಹದಿಂದ ಕಲಿಯಲು ಸಾಧ್ಯ, ಶಿಕ್ಷಣದಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ. ಅದರಿಂದ ಅತ್ಯುತ್ತಮ ರಾಷ್ಟ್ರ ನಿಮಿ೯ಸಲು ಸಾಧ್ಯ. ಒಳ್ಳೆಯ ಶಿಕ್ಷಣದಿಂದ ಉದ್ಯೋಗ ಪಡೆಯಬಹುದು. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿ, ಯಾವುದೆ ಫಲಾಪೇಕ್ಷೆ ಇಲ್ಲದೇ ಸಮಾಜದ ಸೇವೆ ಮಾಡುವುದನ್ನು ರೂಢಿಸಿಕೊಳ್ಳಿ, ಪಾಲಕರನ್ನು ಗೌರವಿಸಿ, ಹಣ ಮುಖ್ಯವಲ್ಲ, ಮಾನವೀಯ ಮೌಲ್ಯ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಕರೆ ನೀಡಿದರು.

ಸತ್ಯಜೀತ ಮೋರೆ, ಶಿಕ್ಷಕ ಪ್ರಕಾಶ ಠಾಕೂರ, ಡಾ. ವಿಶ್ವನಾಥ ಪಾಟೀಲ, ವಾಣಿ ಇರಕಲ್, ಪುಂಡಲೀಕ ಜಗದಾಳೆ, ಶಿವಾಜಿ ಸೂಯ೯ವಂಶಿ, ಪ್ರಾಂಶುಪಾಲರಾದ ವೈ.ಆರ್‌. ಕುರೇರ, ಬಿ.ಎಸ್‌. ಕುದರಿ, ಆನಂದ ಯಾವಗಲ್ ಇದ್ದರು.