ಬೆಂಗ್ಳೂರನ್ನು ವಿಶ್ವಕ್ಕೆ ಪರಿಚಯಿಸಿಕೊಟ್ಟ ಕೆಂಪೇಗೌಡ

| Published : Jun 29 2024, 12:37 AM IST

ಸಾರಾಂಶ

ನೀರಾವರಿ ಪ್ರಗತಿಗೆ ಕರೆಕಟ್ಟೆ ಹಾಗೂ ಸಂತೆಪೇಟೆ ನಿರ್ಮಾಣ ಸೇರಿದಂತೆ ನಾಢಪ್ರಭು ಕೆಂಪೇಗೌಡರ ಚಿಂತನಶೀಲ ಹಾಗೂ ದೂರದೃಷ್ಟಿಯ ಯೋಜನೆಯ ಅನುಷ್ಠಾನದ ಹಿನ್ನೆಲೆಯಲ್ಲಿ ಇಂದು ವಿಶ್ವವೇ ನಿಬ್ಬೆರಗಾಗಿ ಬೆಂಗಳೂರಿನತ್ತ ನೋಡುವಂತಾಗಿದೆ ಎಂದು ತಾಲೂಕು ಜೆಡಿಎಸ್‌ ಅಧ್ಯಕ್ಷರಾದ ನ್ಯಾಯದಗುಂಟೆ ಎನ್‌.ಎ.ಈರಣ್ಣ ಸ್ಮರಿಸಿದರು.

ಕನ್ನಡಪ್ರಭವಾರ್ತೆ ಪಾವಗಡ

ನೀರಾವರಿ ಪ್ರಗತಿಗೆ ಕರೆಕಟ್ಟೆ ಹಾಗೂ ಸಂತೆಪೇಟೆ ನಿರ್ಮಾಣ ಸೇರಿದಂತೆ ನಾಢಪ್ರಭು ಕೆಂಪೇಗೌಡರ ಚಿಂತನಶೀಲ ಹಾಗೂ ದೂರದೃಷ್ಟಿಯ ಯೋಜನೆಯ ಅನುಷ್ಠಾನದ ಹಿನ್ನೆಲೆಯಲ್ಲಿ ಇಂದು ವಿಶ್ವವೇ ನಿಬ್ಬೆರಗಾಗಿ ಬೆಂಗಳೂರಿನತ್ತ ನೋಡುವಂತಾಗಿದೆ ಎಂದು ತಾಲೂಕು ಜೆಡಿಎಸ್‌ ಅಧ್ಯಕ್ಷರಾದ ನ್ಯಾಯದಗುಂಟೆ ಎನ್‌.ಎ.ಈರಣ್ಣ ಸ್ಮರಿಸಿದರು.

ತಾಲೂಕು ಆಡಳಿತ ಹಾಗೂ ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಗುರುವಾರ ಪಟ್ಟಣದ ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದರು.

ನಾಡಪ್ರಭು ಕೇಂಪೇಗೌಡರ ಅಳ್ವಕೆ ಕಾಲದ ದುರದೃಷ್ಟಿ ಇಂದು ಬೆಂಗಳೂರನ್ನು ಪ್ರಗತಿಯತ್ತ ಕೊಂಡ್ಯೊಯಲು ಸಾಧ್ಯವಾಗಿದೆ. ಜಾತಿ ಪಂಥ ಅನ್ನದೇ ನೂರಾರು ಕೆರೆಕಟ್ಟೆ ನಿರ್ಮಾಸುವ ಮೂಲಕ ಎಲ್ಲಾ ವರ್ಗದ ರೈತರ ಪ್ರಗತಿಗೆ ವಿಶೇಷ ಒತ್ತು ನೀಡಿದವರೆಂದರೆ ಕೆಂಪೇಗೌಡರು. ಬೆಂಗಳೂರು ನಿರ್ಮಾತೃ ಆದ ಕೆಂಪೇಗೌಡರು ಬೆಂಗಳೂರು ಸೇರಿ ಈ ರಾಜ್ಯಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಇಂದು ಅವರ ಜಯಂತ್ಯುತ್ಸವ ಆಚರಿಸುತ್ತಿದ್ದು ಅವರ ಮಾರ್ಗದರ್ಶನ,ವಿಚಾರ ಚಿಂತನೆ ಹಾಗೂ ಅವರು ನೆಡದ ಸಮಾಜಮುಖಿಯ ಹಾದಿಯ ಸೇವೆ ನಮಗೆಲ್ಲಾ ಸ್ಪೂರ್ತಿದಾಯಕವಾಗಿರುವುದಾಗಿ ತಿಳಿಸಿ,ತಾಲೂಕಿನ ಸಮಸ್ತ ಜನತೆಗೆ ನಾಡಪ್ರಭು ಕೇಂಪೇಗೌಡರ ಜಯಂತ್ಯುತ್ಸವದ ಶುಭಾಯಯ ಕೋರಿದರು. ತಹಸೀಲ್ದಾರ್‌ ವರದರಾಜ್‌ ಮಾತನಾಡಿ ಬೆಂಗಳೂರು ಪ್ರಗತಿಗೆ ನಾಡಪ್ರಭು ಕೆಂಪೇಗೌಡರ ಕೊಡುಗೆ ಅಪಾರವಾಗಿದೆ.ಅವರ ಪ್ರಗತಿ ಚಿಂತನೆ ಹಾಗೂ ಅವರ ಕಾಲದ ಪ್ರಗತಿ ಕಾರ್ಯಗಳು ಮಾದರಿ ಎಂದರು.

ತಾಪಂ ಇಒ ಜಾನಕಿರಾಮ್‌ , ಮಾಜಿ ಎಪಿಎಂಸಿ ಅಧ್ಯಕ್ಷ ಕರೆಕ್ಯಾತನಹಳ್ಳಿ ಮಂಜುನಾಥ್‌, ಸರ್ಕಾರಿ ಆಸ್ಪತ್ರೆಯ ನಿಕಟಪೂರ್ವ ಆಡಳಿತಾಧಿಕಾರಿಯಾದ ಡಾ.ಕಿರಣ್‌, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾದ ತಿಪ್ಪೇವೀರಣ್ಣ, ತಾಪಂ ಬಿಜೆಪಿ ಅಧ್ಯಕ್ಷ ಮಂಗಳವಾಡ ರಂಗಣ್ಣ, ರಂಗೇಗೌಡ, ಮಾಜಿ ತಾಪಂ ಅಧ್ಯಕ್ಷ ಜಗನ್ನಾಥ್‌, ಮೂಲೆ ಮನೆ ತಿಪ್ಪೇಸ್ವಾಮಿ, ಚಂದ್ರಪ್ಪ ಬಿಜೆಪಿಯ ಸಿಂಗರೆಡ್ಡಿಹಳ್ಳಿ ಪುರುತೋತಮ್‌, ಕನ್ನಮೇಡಿ ಕೃಷ್ಣಮೂರ್ತಿ, ಅಶೋಕ್‌ ಅನಸೂಯಮ್ಮ, ಮತ್ತಿತರರಿದ್ದರು.