ಕೆಂಪೇಗೌಡರು ಬೆಂಗಳೂರು ನಿರ್ಮಾತೃ

| Published : Jun 30 2024, 12:46 AM IST

ಸಾರಾಂಶ

ಕನಕಪುರ: ಕೆಂಪೇಗೌಡರ ಜಯಂತಿ ಒಂದು ದಿನಕ್ಕೆ ಸೀಮಿತಗೊಳಿಸದೆ, ಜೀವನದಲ್ಲಿ ಅವರ ಆದರ್ಶ, ನಾಯಕತ್ವ ಗುಣ, ದೂರದೃಷ್ಟಿ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಪ್ರಾಧ್ಯಾಪಕ ಡಾ. ಪಾರ್ಥಸಾರಥಿ ಹೇಳಿದರು.

ಕನಕಪುರ: ಕೆಂಪೇಗೌಡರ ಜಯಂತಿ ಒಂದು ದಿನಕ್ಕೆ ಸೀಮಿತಗೊಳಿಸದೆ, ಜೀವನದಲ್ಲಿ ಅವರ ಆದರ್ಶ, ನಾಯಕತ್ವ ಗುಣ, ದೂರದೃಷ್ಟಿ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಪ್ರಾಧ್ಯಾಪಕ ಡಾ. ಪಾರ್ಥಸಾರಥಿ ಹೇಳಿದರು. ನಗರದ ರೂರಲ್ ಪದವಿ ಕಾಲೇಜಿನಲ್ಲಿ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಇತ್ತೀಚಿನ ದಿನಗಳಲ್ಲಿ ಯುವಜನತೆ ಮೊಬೈಲ್ ದಾಸರಾಗಿ ಹಾದಿ ತಪ್ಪುತ್ತಿದ್ದಾರೆ. ಇಂತಹ ಆಚರಣೆಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿ ಉತ್ತಮ ಸಮಾಜ ಕಟ್ಟಬೇಕಿದೆ. ಕರ್ನಾಟಕದಲ್ಲಿ ಸಾಕಷ್ಟು ಪಾಳೆಗಾರರು ಆಳ್ವಿಕೆ ಮಾಡಿದ್ದರೂ ಇತಿಹಾಸದ ಪುಟಗಳಲ್ಲಿ ಕೆಂಪೇಗೌಡರು ಅಜರಾಮರರಾಗಿ ಉಳಿದಿದ್ದಾರೆ ಎಂದು ಹೇಳಿದರು.

ಬೆಂಗಳೂರು ನಗರ ನಿರ್ಮಾಣದಲ್ಲಿ ಕೆಂಪೇಗೌಡರ ಪಾತ್ರ ಅತಿ ಮಹತ್ವದ್ದು. ಕೆರೆ-ಕಟ್ಟೆ, ಅರಣ್ಯ, ಸಮತಟ್ಟು ಭೂಮಿ, ರಸ್ತೆಗಳ ಅಭಿವೃದ್ದಿಯನ್ನು ಆ ಕಾಲಘಟ್ಟದಲ್ಲೆ ಬೆಂಗಳೂರಿಗೆ ತಲುಪುವಂತೆ ಮಾಡಿದ ಮಹಾಭಾವರು. ಎಲ್ಲಾ ವೃತ್ತಿಯ ಜನರನ್ನು ಒಗ್ಗೂಡಿಸಿ ಇಲ್ಲಿ ನೆಲೆಸುವಂತೆ ಮಾಡುವ ಮೂಲಕ ಬೆಂಗಳೂರಿನ ಹೆಗ್ಗಳಿಕೆಗೆ ಪಾತ್ರರಾದರು ಎಂದು ತಿಳಿಸಿದರು.

ಪ್ರಾಂಶುಪಾಲ ಎಂ ಟಿ ಬಾಲಕೃಷ್ಣ ಮಾತನಾಡಿ, ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ಅಂದಿನ ಕಾಲದಲ್ಲೇ ನಿರ್ದಿಷ್ಟ ಗುರಿ ಮತ್ತು ಉದ್ದೇಶದೊಂದಿಗೆ ಬೆಂಗಳೂರನ್ನು ಕಟ್ಟಿದರು. ಇಂದು ಅವರು ಕಟ್ಟಿದ ಬೆಂಗಳೂರು ದೇಶದ ಪ್ರಸಿದ್ಧ ನಗರಗಳಿಗೆ ಪೈಪೋಟಿಯೊಡ್ಡಿ ಬೆಳೆದು ನಿಂತಿದೆ. ಯಾವುದೇ ಧರ್ಮ, ಜಾತಿ, ಮತದ ಹಂಗಿಲ್ಲದೆ ಎಲ್ಲರೂ ಕೆಂಪೇಗೌಡರ ನೆನೆಯಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರೊ.ಮೋಹನ್ ಕುಮಾರ್, ಪ್ರೊ.ವಿಜಯೇಂದ್ರ, ಪ್ರೊ.ನಂಜುಂಡ ಸ್ವಾಮಿ, ಪ್ರೊ.ರೀನಾ, ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಕೆ ಕೆ ಪಿ ಸುದ್ದಿ 02:

ಕನಕಪುರದ ರೂರಲ್ ಪದವಿ ಕಾಲೇಜಿನಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಿಸಲಾಯಿತು.