ಟೇಕಲ್‌ನಲ್ಲಿ ಅದ್ಧೂರಿ ಕೆಂಪೇಗೌಡ ಜಯಂತಿ ಹಿನ್ನೆಲೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕೆ.ವೈ.ನಂಜೇಗೌಡ ಅಭಿಮತ
ಕನ್ನಡಪ್ರಭ ವಾರ್ತೆ ಟೇಕಲ್ನಾಡಪ್ರಭು ಕೆಂಪೇಗೌಡರು ಒಂದು ಜಾತಿಗೆ ಸೀಮಿತವಾಗದೆ ಎಲ್ಲ ಜನಾಂಗದವರನ್ನು ಸಮಾನ ರೀತಿಯಲ್ಲಿ ಜೊತೆಗೂಡಿಸಿಕೊಂಡು ಅವರ ಅಭಿವೃದ್ಧಿಗೆ ಶ್ರಮಿಸಿದ್ದರು. ಇಂದಿನ ಯುವ ಪೀಳಿಗೆ ಕೆಂಪೇಗೌಡರ ಆದರ್ಶ ಪಾಲಿಸಬೇಕು ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.
ಟೇಕಲ್‌ನ ಕೆಜಿಹಳ್ಳಿಯಲ್ಲಿ ಒಕ್ಕಲಿಗರ ಜಾಗೃತಿ ಸಂಘದಿಂದ ೫೧೭ನೇ ಕೆಂಪೇಗೌಡರ ಜಯಂತಿ ಹಿನ್ನೆಲೆಯಲ್ಲಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕೆಂಪೇಗೌಡರ ಬೆಳ್ಳಿರಥಕ್ಕೆ ಮಾಲಾರ್ಪಣೆ ಮಾಡಿ ಚಾಲನೆ ನೀಡಿ ಮಾತನಾಡಿದರು.ಒಕ್ಕಲಿಗರ ಸಮುದಾಯಕ್ಕೆ ನಿವೇಶನ ಇಲ್ಲದೆ ಇರುವುದರಿಂದ ಈ ಸಂಘದವರು ನಿವೇಶನ ಕೊಡಿ ಎಂದು ಬೇಡಿಕೆ ಇಟ್ಟಿದ್ದರು ಇದಕ್ಕೆ ಸ್ಪಂದಿಸಿದ ಶಾಸಕರು ಮುಂದಿನ ಕೆಂಪೇಗೌಡ ಜಯಂತಿ ಆಚರಿಸಲು ಶೀಘ್ರದಲ್ಲಿಯೇ ಸರ್ಕಾರದಿಂದ ನಿಮಗೆ ಒಂದು ಎಕರೆ ಜಾಗ ನೀಡಲಾಗುವುದು ಇದಕ್ಕೆ ಸಂಬಂಧಪಟ್ಟ ರೂಪುರೇಷೆ ಒಂದು ವಾರದಲ್ಲಿ ಪೂರ್ಣಗೊಳಿಸಿ ಸಂಘದ ಹೆಸರಿಗೆ ನೋಂದಣಿ ಮಾಡಿಸಿ ಕೊಡುತ್ತೇನೆಂದು ಸಭೆಯಲ್ಲಿ ಘೋಷಿಸಿದರು.
ಒಕ್ಕಲಿಗ ಜಾಗೃತಿ ಸಂಘದ ಸಂಸ್ಥಾಪಕ ಅಧ್ಯಕ್ಷ ಎಂ.ನಾರಾಯಣಸ್ವಾಮಿ ಮಾತನಾಡಿ, ಶಾಸಕರ ಬಳಿ ನಿವೇಶನಕ್ಕೆ ಪ್ರಸ್ತಾವನೆ ನೀಡಲಾಗಿತ್ತು, ಶಾಸಕರು ಸಂಘಕ್ಕೆ ನಿವೇಶನ ನೀಡುವುದಾಗಿ ಘೋಷಿಸಿದ್ದಾರೆ. ಇದರಿಂದ ನಮ್ಮ ಜನಾಂಗಕ್ಕೆ ಸಂತಸ ತಂದಿದೆ ಕಟ್ಟಡ ನಿರ್ಮಿಸಿಕೊಳ್ಳಲು ನಾವು ಸಿದ್ಧರಿದ್ದೇವೆ ಎಂದರು.
ಇದೇ ವೇಳೆ ನಾಡಪ್ರಭು ಕೆಂಪೇಗೌಡರ ಬೆಳ್ಳಿ ರಥ ಟೇಕಲ್‌ನ ರಾಜ ಬೀದಿಗಳಲ್ಲಿ ಮೆರವಣಿಗೆ ನಡೆಸಿ ವಿಜೃಂಭಣೆಯಿಂದ ನೆರವೇರಿಸಲಾಯಿತು.
ಮುಖಂಡರಾದ ಕೆ.ಎನ್.ನಂಜುಂಡಪ್ಪ, ವೈ.ಸಿ.ರಾಮಕೃಷ್ಣ, ಡಿ.ಆರ್.ರವೀಂದ್ರ, ಎಚ್.ಎಂ.ರಮೇಶ್ ಗೌಡ, ಕೆ.ಎಸ್.ವೆಂಕಟೇಶ್ ಗೌಡ, ಬಿ.ಜಿ.ಮುನಿಶಾಮ ಗೌಡ, ಕೆ.ಎಂ.ರಾಮಕೃಷ್ಣಪ್ಪ, ಕೆ.ಇ.ಶ್ರೀನಿವಾಸ್, ಬಿ.ಜಿ.ಸತೀಶ್ ಬಾಬು, ಅಪ್ಪಾಜಿಗೌಡ, ಎಚ್.ಎಂ.ಸೊಣ್ಣಪ್ಪ, ಶ್ರೀನಿವಾಸ್, ವಕೀಲ ನಾಗರಾಜ್, ಮಂಜುನಾಥ್ ಗೌಡ, ಕೆ.ಎಂ.ನಾರಾಯಣಸ್ವಾಮಿ, ಲಕ್ಷ್ಮಿಕಾಂತ್, ಅಜಯ್, ಸಂದೀಪ್, ಎಂ.ಆರ್.ಶ್ರೀನಿವಾಸ್, ಎಚ್.ವಿ.ಚಂದ್ರಶೇಖರ ಗೌಡ, ವೆಂಕಟಾಚಲಪತಿ ಗೌಡ, ತಮ್ಮಣ್ಣ ಗೌಡ, ಬ್ಲಾಕ್ ಕಾಂಗ್ರೆಸ್ ಎಸ್.ಜಿ.ರಾಮಮೂರ್ತಿ ಇದ್ದರು.