ನಾಡು ಕಟ್ಟಲು ಕೆಂಪೇಗೌಡರು ಮಾದರಿ: ಅಂಜಿನಪ್ಪ

| Published : Jun 28 2024, 12:58 AM IST

ಸಾರಾಂಶ

ಬೆಂಗಳೂರು ಪೂರ್ವಕ್ಕೆ ಹೊಸೂರು, ಪಶ್ವಿಮಕ್ಕೆ, ಸೊಂಡಿಕೊಪ್ಪ, ಉತ್ತರಕ್ಕೆ ಯಲಹಂಕ ದಕ್ಷಿಣಕ್ಕೆ ಅಣೆಕಲ್ಲು ಈ ನಾಲ್ಕು ದಿಕ್ಕುಗಳನ್ನು ಗುರುತಿಸಿ ಬೃಹತ್ ಹೆಬ್ಬಾಗಿಲನ್ನು ನಿರ್ಮಿಸಿ ಬೆಂಗಳೂರು ಕೋಟೆ ನಿರ್ಮಿಸಿದರು.

ಕೊಟ್ಟೂರು: ರಾಜ್ಯವನ್ನು ಯಾವ ರೀತಿಯಲ್ಲಿ ಸಮೃದ್ಧವಾಗಿ ನಿರ್ಮಿಸಬಹುದು ಎನ್ನುವುದನ್ನು ಬೆಂಗಳೂರು ನಿರ್ಮಾತೃ ಕೆಂಪೇಗೌಡರು ನಾಡಿಗೆ ತೋರಿಸಿಕೊಟ್ಟು ಮಾದರಿಯಾಗಿದ್ದಾರೆ ಎಂದು ಕನ್ನಡ ಉಪನ್ಯಾಸಕ ಅಂಜಿನಪ್ಪ ಡಿ. ಹೇಳಿದರು.

ಇಲ್ಲಿನ ತಾಲೂಕು ಕಾರ್ಯಲಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಗುರುವಾರ ಹಮ್ಮಿಕೊಂಡಿದ ನಾಡ ಪ್ರಭು ಕೆಂಪೇಗೌಡರ 515ನೇ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಅವರು ಮಾತನಾಡಿದರು.

ಬೆಂಗಳೂರು ಪೂರ್ವಕ್ಕೆ ಹೊಸೂರು, ಪಶ್ವಿಮಕ್ಕೆ, ಸೊಂಡಿಕೊಪ್ಪ, ಉತ್ತರಕ್ಕೆ ಯಲಹಂಕ ದಕ್ಷಿಣಕ್ಕೆ ಅಣೆಕಲ್ಲು ಈ ನಾಲ್ಕು ದಿಕ್ಕುಗಳನ್ನು ಗುರುತಿಸಿ ಬೃಹತ್ ಹೆಬ್ಬಾಗಿಲನ್ನು ನಿರ್ಮಿಸಿ ಬೆಂಗಳೂರು ಕೋಟೆ ನಿರ್ಮಿಸಿದರು. ಇವರ ಪೂರ್ವಾಪರ ಆಲೋಚನೆಯ ಕಾರ್ಯಸಿದ್ಧಿಯಿಂದಾಗಿ ಬೆಂಗಳೂರು ಇದೀಗ ಜಗದಗಲ ಹೊಂದಿ ಪ್ರಖ್ಯಾತಿ ಹೊಂದಿದೆ ಎಂದರು.

ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ಗೌರವ ಸಲ್ಲಿಸಿ ಮಾತನಾಡಿದ ತಹಶೀಲ್ದಾರ್ ಜಿ.ಕೆ. ಅಮರೇಶ್, ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯವನ್ನು ಮಾದರಿಯನ್ನಾಗಿಸಿಕೊಂಡು ಬೆಂಗಳೂರು ನಿರ್ಮಾಣದತ್ತ ಹೊಸ ಯೋಜನೆ ನಿರ್ಮಿಸಿದರು. ಇದು ಕೆಂಪೇಗೌಡರ ಸಾಧನೆಯ ದೊಡ್ಡ ಮೈಲುಗಲ್ಲಾಗಿದೆ ಎಂದರು.

ಪಶುಸಂಗೋಪನ ಇಲಾಖೆ ವೈದ್ಯಾಧಿಕಾರಿ ಡಾ.ಕೊಟ್ರೇಶ್, ಎಪಿಎಂಸಿ ಕಾರ್ಯದರ್ಶಿ ಎ.ಕೆ. ಈರಣ್ಣ, ಇಸಿಒ ಎಸ್.ನಿಂಗಪ್ಪ ಪಪಂ ಕಂದಾಯ ನಿರೀಕ್ಷಕ ಕೊಟ್ರೇಶ್ ಬಿ.ಆರ್.ಪಿಜಿ ರವೀಂದ್ರ ಉಪ ತಹಶೀಲ್ದಾರ್ ಅನ್ನದಾನೇಶ ಬಿ. ಪತ್ತಾರ್, ಕಂದಾಯ ಪರಿವೀಕ್ಷಕ ಹಾಲಸ್ವಾಮಿ, ಪುಟಾಣಿ ವಿಜಯಕುಮಾರ್ ದೇವರಾಜ ಅರಸು ಮತ್ತು ಇತರರು ಪಾಲ್ಗೊಂಡಿದ್ದರು.

ಕೆಂಪೇಗೌಡರ ಕುರಿತು ತಾಲೂಕಿನ ಪ್ರೌಢ ಶಾಲಾ ಮಕ್ಕಳಿಗೆ ತಾಲೂಕು ಆಡಳಿತ ಏರ್ಪಡಿಸಿದ ಪ್ರಬಂಧ ಮತ್ತು ಭಾಷಣ ಸ್ಪರ್ಧೆಯಲ್ಲಿ ವಿಜಿತರದ ಮಕ್ಕಳಿಗೆ ತಹಶೀಲ್ದಾರ್ ಅಮರೇಶ ಜಿ.ಕೆ. ಬಹುಮಾನವನ್ನು ವಿತರಿಸಿದರು.

ಗುರುಬಸವರಾಜ್ ಸ್ವಾಗತಿಸಿ, ನಿರೂಪಿಸಿದರು.