ಸಾರಾಂಶ
ಹೊಸಕೋಟೆ: ಬೆಂಗಳೂರು ಮಹಾನಗರ ಕಟ್ಟಿದ ನಾಡಪ್ರಭು ಕೆಂಪೇಗೌಡರ ಸಾಧನೆ ಅವಿಸ್ಮರಣೀಯ ಎಂದು ತಾವರೆಕೆರೆ ಗ್ರಾಪಂ ಅಧ್ಯಕ್ಷ ರಮೇಶ್ ತಿಳಿಸಿದರು.
ಹೊಸಕೋಟೆ: ಬೆಂಗಳೂರು ಮಹಾನಗರ ಕಟ್ಟಿದ ನಾಡಪ್ರಭು ಕೆಂಪೇಗೌಡರ ಸಾಧನೆ ಅವಿಸ್ಮರಣೀಯ ಎಂದು ತಾವರೆಕೆರೆ ಗ್ರಾಪಂ ಅಧ್ಯಕ್ಷ ರಮೇಶ್ ತಿಳಿಸಿದರು.
ತಾಲೂಕಿನ ತಾವರೆಕೆರೆ ಗ್ರಾಪಂ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಸುದೀರ್ಘ ಆಳ್ವಿಕೆಯಲ್ಲಿ ಕೆಂಪೇಗೌಡರು ದೂರದರ್ಶಿತ್ವ, ರಾಜಕೀಯ ನೈಪುಣ್ಯತೆ, ಅಭಿವೃದ್ಧಿಯ ಮುನ್ನೋಟ ಮುಂತಾದ ಅಂಶಗಳಿಂದ ಚರಿತ್ರೆಯ ಪುಟಗಳಲ್ಲಿ ಅಮರರಾಗಿದ್ದಾರೆ. ನಾಡಪ್ರಭು ಕೆಂಪೇಗೌಡರು ಕಟ್ಟಿ ಬೆಳೆಸಿದ ಬೆಂಗಳೂರು ಜಗತ್ತಿನಾದ್ಯಂತ ಹೆಸರು ಮಾಡಿದೆ. ಕೆಂಪೇಗೌಡರು ಕೇವಲ ಒಂದು ಜಾತಿಗೆ ಸೀಮಿತರಲ್ಲ. ಬೆಂಗಳೂರಲ್ಲಿ ಪೇಟೆಗಳನ್ನು ನಿರ್ಮಿಸಿ ಎಲ್ಲಾ ಜನಾಂಗಕ್ಕೂ ಬದುಕುವ ಅವಕಾಶ ಕಲ್ಪಿಸಿಕೊಟ್ಟವರು ಕೆಂಪೇಗೌಡರ ತತ್ವಾದರ್ಶಗಳನ್ನು ಎಲ್ಲರೂ ಅಳವಡಿಸಿಕೊಂಡು ಉತ್ತಮ ಜೀವನ ನಡೆಸಬೇಕು ಎಂದು ಹೇಳಿದರು.ಪಿಡಿಒ ಮುನಿಗಂಗಯ್ಯ ಮಾತನಾಡಿ, ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜ್ಯವಾಗಿದ್ದ ಯಲಹಂಕ ನಾಡಿನ ಪಾಳೇಗಾರರಾಗಿದ್ದು, ಹಂಪಿ ವೈಭವ ಕಂಡು ಬೆರಗಾಗಿದ್ದ ಕೆಂಪೇಗೌಡರ ದೂರದೃಷ್ಠಿಯೇ ಇಂದಿನ ಬೆಂಗಳೂರು ಮಹಾನಗರ ಎಂದರು.
ಇದೇ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ದೇವರಾಜ್, ಗ್ರಾಪಂ ಮಾಜಿ ಅಧ್ಯಕ್ಷ ಬಸವಪ್ರಕಾಶ್, ಆರ್.ರವಿಕುಮಾರ್, ಎಸ್‌ಎಚ್‌ಟಿ ಮಂಜುನಾಥ್, ಉಪಾಧ್ಯಕ್ಷೆ ಅಸ್ಮಾತಾಜ್ ಜಿಯಾಉಲ್ಲಾ, ಮಾಜಿ ಉಪಾಧ್ಯಕ್ಷ ಎಸ್.ಸುಧಾಕರ್, ಪಿಡಿಒ ಮುನಿಗಂಗಯ್ಯ, ಸದಸ್ಯರಾದ ಪ್ರಿಯಾಂಕ ಡಿ.ರಮೇಶ್, ರೂಪ ನಾಗೇಶ್, ಮಂಜುಳಾ ದೇವರಾಜ, ಎಂಪಿಸಿಎಸ್ ಅಧ್ಯಕ್ಷ ಎಂ.ದೇವರಾಜ್, ಕಾರ್ಯದರ್ಶಿ ನರೇಶ್, ಕರ ವಸೂಲಿಗಾರ ರಾಜಣ್ಣ ಭಾಗವಹಿಸಿದ್ದರು.ಫೋಟೋ: 27 ಹೆಚ್‌ಎಸ್‌ಕೆ 1
ಹೊಸಕೋಟೆ ತಾಲೂಕಿನ ತಾವರೆಕೆರೆ ಗ್ರಾಪಂನಲ್ಲಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಗ್ರಾಪಂ ಅಧ್ಯಕ್ಷ ರಮೇಶ್ ಪುಷ್ಪನಮನ ಸಲ್ಲಿಸಿದರು.