ಕೆಂಪೇಗೌಡರ ಆದರ್ಶ ಮಕ್ಕಳಿಗೂ ಸ್ಫೂರ್ತಿ

| Published : Jun 28 2024, 12:45 AM IST / Updated: Jun 28 2024, 12:46 AM IST

ಸಾರಾಂಶ

ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪೌಢಶಾಲೆಯಲ್ಲಿ ನಾಡಪ್ರಭು ಕೆಂಪೇಗೌಡರ ೫೧೫ ನೇ ಜಯಂತಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪೌಢಶಾಲೆಯಲ್ಲಿ ನಾಡಪ್ರಭು ಕೆಂಪೇಗೌಡರ ೫೧೫ ನೇ ಜಯಂತಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷ ಸಿದ್ದನಗೌಡ ಮಂಗಳೂರ ಅವರು ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಸಾಮಾನ್ಯವಾಗಿ ನಾಡಪ್ರಭು ಕೆಂಪೇಗೌಡ ಎಂದು ಕರೆಯುವ ಜನರು ಆರಂಭಿಕವಾಗಿ ಆಧುನಿಕ ಭಾರತದಲ್ಲಿ ವಿಜಯನಗರ ಸಾಮ್ರಾಜ್ಯದ ಅಡಿಯಲ್ಲಿ ರಾಜ್ಯಪಾಲರಾಗಿದ್ದರು. ಕೆಂಪೇಗೌಡರು ಈ ಪ್ರದೇಶದಾದ್ಯಂತ ಅನೇಕ ಕನ್ನಡ ಶಾಸನಗಳನ್ನು ಸ್ಥಾಪಿಸಿದರು. ಅವರ ಆದರ್ಶ ಮಕ್ಕಳಿಗೆ ಸ್ಫೂರ್ತಿದಾಯಕವಾಗಿವೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯಗುರು ಸಂತೋಷ ಪವಾರ, ಶಿಕ್ಷಕರಾದ ರಾಜು ಜವಳಗೇರಿ, ಬಸವರಾಜ ಚಳ್ಳಗಿ, ಶಾಂತಗೌಡ ಬಿರಾದಾರ, ವಿಜಯಕುಮಾರ ಹಳಿಯಾಳ, ಬಸವರಾಜ ಮನಗೂಳಿ, ರೂಪಾ ಪಾಟೀಲ, ಶಿವಲೀಲಾ ಚುಂಚೂರ, ಲಕ್ಷ್ಮೀ ಚುಂಚೂರ, ಜ್ಯೋತಿ ನಾಯ್ಕ, ಅಂಬುಜಾ ಹಜೇರಿ, ಭೀಮನಗೌಡ ಸಾಸನೂರ, ಬಸವರಾಜ ತಳವಾರ, ರಸೂಲಸಾ ತುರಕಣಗೇರಿ, ರಮೇಶ ಪಾಸೋಡಿ, ಪುಷ್ಪಾ ನಾಡಗೌಡ, ಹೇಮಾ ಕೊಡೆಕಲ್ಲ, ಅನಿತಾ ಕೋಳೂರ, ನಾಗರತ್ನ ಮೈಲೇಶ್ವರ, ಮುಬಿನ ಮುರಾಳ, ಕಲ್ಪನಾ ಹಜೇರಿ, ದೇವಿಂದ್ರ ಗುಳೇದ ಸರ್ವ ಗುರುಬಳಗದವರು ಉಪಸ್ಥಿತರಿದ್ದರು.