ಆಧುನಿಕ ನಗರ ನಿರ್ಮಾತೃ ಕೆಂಪೇಗೌಡ

| Published : Jul 07 2025, 11:48 PM IST

ಸಾರಾಂಶ

ನಾಡಪ್ರಭು ಕೆಂಪೇಗೌಡ ಅವರು ಬೆಂಗಳೂರನ್ನು ಆಧುನಿಕ ನಗರ ನಿರ್ಮಾತೃಗಳು ನವ ನಗರಗಳನ್ನು ನಿರ್ಮಾಣ ಮಾಡುವ ರೀತಿಯಲ್ಲಿ ಮಾದರಿ ನಗರವನ್ನಾಗಿ ನಿರ್ಮಿಸಿದ್ದು ಇತಿಹಾಸ. ರಾಜ್ಯದ ಇತಿಹಾಸದಲ್ಲಿ ಜನಪ್ರಿಯ ರಾಜರುಗಳಲ್ಲಿ ಕೆಂಪೇಗೌಡರು ಒಬ್ಬರು. ಕೆಂಪೇಗೌಡರ ಜಯಂತಿ ಅಂಗವಾಗಿ ಬೆಳ್ಳಿರಥ, ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಚೇಳೂರುಪಟ್ಟಣದಲ್ಲಿ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಭಾನುವಾರ ಕೆಂಪೇಗೌಡರ 516ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ ಬೆಳ್ಳಿ ರಥದ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.ಪಟ್ಟಣದ ಈಶ್ವರ ದೇವಸ್ಥಾನ ಬಳಿ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ, ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಕೋನಪ್ಪರೆಡ್ಡಿ, ಸೇರಿದಂತೆ ಒಕ್ಕಲಿಗ ಸಮುದಾಯದ ಮುಖಂಡರು ಸ್ತಬ್ಧಚಿತ್ರಗಳ ಮೆರವಣಿಗೆಗೆ ಚಾಲನೆ ನೀಡಿದರು.

ಜನಪ್ರಿಯ ದೊರೆ ಕೆಂಪೇಗೌಡ

ಈ ವೇಳೆ ಶಾಸಕ ಸುಬ್ಬಾರೆಡ್ಡಿ ಮಾತನಾಡಿ, ಅಂದಿನ ದಿನಗಳಲ್ಲಿಯೇ ಕೆಂಪೇಗೌಡ ಅವರು ಬೆಂಗಳೂರನ್ನು ಆಧುನಿಕ ನಗರ ನಿರ್ಮಾತೃಗಳು ನವ ನಗರಗಳನ್ನು ನಿರ್ಮಾಣ ಮಾಡುವ ರೀತಿಯಲ್ಲಿ ಮಾದರಿ ನಗರವನ್ನಾಗಿ ನಿರ್ಮಿಸಿದ್ದು ಇತಿಹಾಸ. ರಾಜ್ಯದ ಇತಿಹಾಸದಲ್ಲಿ ಜನಪ್ರಿಯ ರಾಜರುಗಳಲ್ಲಿ ಕೆಂಪೇಗೌಡರು ಒಬ್ಬರು ಎಂದು ಸ್ಮರಿಸಿದರು.

ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಕೋನಪ್ಪರೆಡ್ಡಿ ಮಾತನಾಡಿ, ಸಂಘದಲ್ಲಿ 650 ಕೋಟಿ ರೂ. ಹಣ ಉಳಿಸಿ ಹಾಸ್ಟೆಲ್‌, ನರ್ಸಿಂಗ್ ಹಾಗೂ ಆಯುರ್ವೇದ ಕಾಲೇಜುಗಳನ್ನು ಹೊಸದಾಗಿ ಆರಂಭಿಸಲಾಗಿದೆ. ಸಂಘದಲ್ಲಿ ಒಂದು ರುಪಾಯಿ ಹಣವನ್ನು ದುರುಪಯೋಗ ಮಾಡದೆ ಸಮುದಾಯದ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತಿದೆ ಎಂದರು.

ಕಲಾತಂಡಗಳ ಮೆರವಣಿಗೆ

ಕೆಂಪೇಗೌಡರ ಭಾವಚಿತ್ರಗಳನ್ನು ಹೊತ್ತ ಬೆಳ್ಳಿ ಕುದುರೆ ಸಾರೋಟು, ಕುದುರೆ ಸವಾರಿ ಸೇರಿದಂತೆ ತಾಲೂಕಿನ ಪ್ರತಿಯೊಂದು ಗ್ರಾಮ ಪಂಚಾಯಿತಿಯಿಂದ ಒಂದೊಂದು ಪಲ್ಲಕ್ಕಿ ಭಾಗವಹಿಸಿದ್ದವು. ಡೋಲು ಕುಣಿತ, ಕೋಲಾಟ ತಮಟೆ ವಾದ್ಯಗಳ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರು ಆರ್. ಚಲಂ,ಸಾಹುಕಾರಿ ಶ್ರೀನಿವಾಸ ರೆಡ್ಡಿ,ಕರವೇ ಅಧ್ಯಕ್ಷ ಕೆ.ಜಿ.ವೆಂಕಟರವಣ,ಜೆಡಿಎಸ್ ಯುವ ಬ್ರಿಗೆಡ್ ರಾಜ್ಯ ಪ್ರದಾನ ಕಾರ್ಯದರ್ಶಿ ಡಾ|ಎಂ ಎನ್ ರಾಜಾ ರೆಡ್ಡಿ, ಏನಿಗದಲೆ ಸುಧಾಕರ್ ರೆಡ್ಡಿ, ಯಲವಲ್ಲಿ ಎನ್. ರಮೇಶ್, ಉಮಾಪತಿ ಶ್ರೀನಿವಾಸ ಗೌಡ, ಶೇಖರ್ ರೆಡ್ಡಿ, ಈಶ್ವರ ರೆಡ್ಡಿ,ಕೆ.ಸಹದೇವರೆಡ್ಡಿ ಮತ್ತಿತರರು ಭಾಗಿಯಾಗಿದ್ದರು.