ಕನ್ನಡ ನಾಡು-ನುಡಿ ಬಗ್ಗೆ ದೂರದೃಷ್ಟಿ ಹೊಂದಿದ್ದ ಕೆಂಪೇಗೌಡ

| Published : Jul 01 2024, 01:49 AM IST / Updated: Jul 01 2024, 01:50 AM IST

ಕನ್ನಡ ನಾಡು-ನುಡಿ ಬಗ್ಗೆ ದೂರದೃಷ್ಟಿ ಹೊಂದಿದ್ದ ಕೆಂಪೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಶಹಾಪುರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಆಡಳಿತ ಹಾಗೂ ನಗರಸಭೆಯ ವತಿಯಿಂದ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಿಸಲಾಯಿತು.

ಇಒ ಸೋಮಶೇಖರ್‌ ಅಭಿಮತ । ನಗರಸಭೆಯಿಂದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವಕನ್ನಡಪ್ರಭ ವಾರ್ತೆ ಶಹಾಪುರ

ನಾಡಪ್ರಭು ಕೆಂಪೇಗೌಡರು ಕನ್ನಡ ನಾಡು-ನುಡಿಯ ಬಗ್ಗೆ ದೂರದೃಷ್ಟಿ ಹಾಗೂ ಸಂಸ್ಕೃತಿ ಬಗ್ಗೆ ಅಪಾರ ಹೆಮ್ಮೆಯುಳ್ಳವರಾಗಿದ್ದರು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್‌ ಬಿರಾದಾರ್ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಆಡಳಿತ ಹಾಗೂ ನಗರಸಭೆಯ ವತಿಯಿಂದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿರಿಯ ಸಂಶೋಧಕ ಡಾ.ಎಂ.ಎಸ್. ಶಿರವಾಳ ಮಾತನಾಡಿ, ಕೆಂಪೇಗೌಡರು ನಾಡಪ್ರಭುಗಳೆಂದು ಪ್ರಸಿದ್ಧಿ ಪಡೆದಿದ್ದು, ಬೆಂಗಳೂರು ಸುತ್ತಲೂ ನಾಲ್ಕು ಪ್ರಮುಖ ಕೋಟೆಗಳನ್ನು ಮತ್ತು ನಾಲ್ಕು ಉಪಕೋಟೆಗಳನ್ನು ಕಟ್ಟಿ, ಬೆಂಗಳೂರನ್ನು ಸುಭದ್ರವಾಗಿ ಮಾಡಿದರು. ಬೆಂಗಳೂರು ಇಂದಿಗೂ ಕೂಡ ಜಗತ್ಪ್ರಸಿದ್ಧವಾಗಿ ಬೆಳೆದಿದೆ ಎಂದರು.

ಕೆಂಪೇಗೌಡರ ಕಾರ್ಯವನ್ನು ನಾವೆಲ್ಲರೂ ಮುಂದುವರೆಸಬೇಕಾಗಿದೆ. ಅದಕ್ಕಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಎಂದು ನಾಮಕರಣ ಮಾಡಿ, 108 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣಗೊಳಿಸಲಾಗಿದೆ ಎಂದರು.

ಈ ವೇಳೆ ತಹಸೀಲ್ದಾರ ಉಮಾಕಾಂತ್ ಹಳ್ಳೆ ಮಾತನಾಡಿದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಶರಣಪ್ಪ ಪಾಟೀಲ್, ಪ್ರಾಚಾರ್ಯ ಸಂಗಪ್ಪ ರಾಂಪೊರೆ, ಬಿಸಿಎಂ ಇಲಾಖೆ ತಾಲೂಕು ಅಧಿಕಾರಿ ಚನ್ನಪ್ಪಗೌಡ ಚೌದ್ರಿ, ಅಬಕಾರಿ ಉಪನಿರೀಕ್ಷಕ ಸಾಧಿಕ್ ಹುಸೇನ್, ಪಿಎಸ್‌ಐ ಶ್ಯಾಮ ಸುಂದರ, ಅಗ್ನಿಶಾಮಕದಳ ಠಾಣಾಧಿಕಾರಿ ಮಚ್ಚೇಂದ್ರ ನಾಥ್, ಅರ್ಚನಾ ಆರ್‌ಎಫ್‌ಒ, ಸಮಾಜ ಕಲ್ಯಾಣ ಇಲಾಖೆಯ ರಾವುತಪ್ಪ, ಕಾಡಯ್ಯ, ಈರಯ್ಯ ಇಸಿಒ, ಇದ್ದರು.

ಜಯಂತಿಯ ಅಂಗವಾಗಿ ಪ್ರಬಂಧ ಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದ್ದು, ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸನ್ಮಾನಿಸಲಾಯಿತು. ಕೆಂಪೇಗೌಡರ ಪೋಷಾಕು ಧರಿಸಿದ ಅಜೇಯ ಸಾಗರ ಸುರಪುರಕರ್ ಎಲ್ಲರ ಗಮನ ಸೆಳೆದನು.