ಕೆಂಪೇಗೌಡರು ಮಾನವಕುಲಕ್ಕೆ ಆದರ್ಶ

| Published : Jun 29 2024, 12:30 AM IST

ಸಾರಾಂಶ

ನಾಡಪ್ರಭು ಕೆಂಪೇಗೌಡರ ಕೊಡುಗೆ ಮಾನವಕುಲಕ್ಕೆ ಆದರ್ಶ. ಅಂತಹ ಮಹಾನ್‌ ವ್ಯಕ್ತಿಗಳ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಗಿರೀಶ ಸ್ವಾದಿ ಹೇಳಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ನಾಡಪ್ರಭು ಕೆಂಪೇಗೌಡರ ಕೊಡುಗೆ ಮಾನವಕುಲಕ್ಕೆ ಆದರ್ಶ. ಅಂತಹ ಮಹಾನ್‌ ವ್ಯಕ್ತಿಗಳ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಗಿರೀಶ ಸ್ವಾದಿ ಹೇಳಿದರು.

ಗುರುವಾರ ನಗರದ ರಬಕವಿ-ಬನಹಟ್ಟಿ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಕೆಂಪೇಗೌಡರ ೫೧೫ನೇ ಜಯಂತಿ ಆಚರಣೆ ಸಂದರ್ಭದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತಾನಾಡಿದರು. ಅವರ ಹೋರಾಟದ ಫಲವಾಗಿ ಬೆಂಗಳೂರು ಸುಂದರ ನಗರವಾಗಿ ಮಾರ್ಪಟ್ಟಿದೆ ಎಂದರು.

ಶೀರಸ್ತೆದಾರ ಎಸ್. ಎಲ್. ಕಾಗಿಯವರ, ವೃತ್ತ ಕಂದಾಯ ನಿರೀಕ್ಷಕರಾದ ಪ್ರಕಾಶ ಮಠಪತಿ, ಸದಾಶಿವ ಕುಂಬಾರ, ಪ್ರಕಾಶ ವಂದಾಲ, ಚೇತನ ಭಜಂತ್ರಿ, ಸಂಗಮೇಶ ಸಜ್ಜನ, ರವಿ ಈಟಿ, ಮಂಜುನಾಥ ನೀಲನ್ನವರ, ಅಮಸಿದ್ದ ಬಿರಾದಾರ, ಸೌರಭ ಮೇತ್ರಿ, ಹಿರಿಯ ಆರೋಗ್ಯ ನಿರೀಕ್ಷಕರು ಮಹಾಲಿಂಗ ಗೋಣಿ, ಮಹಾಂತೇಶ ಬದಾಮಿ ಸೇರಿದಂತೆ ಅನೇಕರು ಇದ್ದರು.