ಕೆಮ್ರಾಲ್‌: ಆರೋಗ್ಯ ಉಚಿತ ತಪಾಸಣಾ ಶಿಬಿರ

| Published : Feb 28 2025, 12:45 AM IST

ಸಾರಾಂಶ

ಪಕ್ಷಿಕೆರೆಯ ಶ್ರೀ ವಿನಾಯಕ ಮಿತ್ರ ಮಂಡಳಿ ನೇತೃತ್ವದಲ್ಲಿ ನ್ಯಾಷನಲ್ ಮೆಡಿಕೋಸ್ ಆರ್ಗನೇಸೇಷನ್, ಕೇಶವ ಕೃತಿ ಸಂವರ್ಧನ ಸಮಿತಿ ಮತ್ತು ಸೇವಾ ಭಾರತಿ ಕರ್ನಾಟಕದ ಆಶ್ರಯದಲ್ಲಿ ಪಕ್ಷಿಕೆರೆಯ ಅಂಬೇಡ್ಕರ್ ಭವನದಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಕ್ಷಿಕೆರೆಯ ಶ್ರೀ ವಿನಾಯಕ ಮಿತ್ರ ಮಂಡಳಿ ನೇತೃತ್ವದಲ್ಲಿ ನ್ಯಾಷನಲ್ ಮೆಡಿಕೋಸ್ ಆರ್ಗನೇಸೇಷನ್, ಕೇಶವ ಕೃತಿ ಸಂವರ್ಧನ ಸಮಿತಿ ಮತ್ತು ಸೇವಾ ಭಾರತಿ ಕರ್ನಾಟಕದ ಆಶ್ರಯದಲ್ಲಿ ಪಕ್ಷಿಕೆರೆಯ ಅಂಬೇಡ್ಕರ್ ಭವನದಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರ ನಡೆಯಿತು.

ಶಿಬಿರವನ್ನು ಪಕ್ಷಿಕೆರೆ ಶ್ರೀ ಕೊರ್ದಬ್ಬು ದೈವಸ್ಥಾನ ಸೇವಾ ಸಮಿತಿ ಗುರಿಕಾರ ಸತೀಶ್ ಅಮೀನ್ ಉದ್ಘಾಟಿಸಿದರು.

ಶ್ರೀ ವಿನಾಯಕ ಮಹಿಳಾ ಮಂಡಳಿ ಪಕ್ಷಿಕೆರೆ, ರೋಟರಿ ಕ್ಲಬ್ ಕಿನ್ನಿಗೋಳಿ, ಕೊರ್ದಬ್ಬು ದೈವಸ್ಥಾನ ಸೇವಾ ಸಮಿತಿ ಪಕ್ಷಿಕೆರೆ, ಕೆಮ್ರಾಲ್ ಗ್ರಾಮ ಪಂಚಾಯಿತಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕೆಮ್ರಾಲ್‌ ಸಹಯೋಗದಲ್ಲಿ ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಮ್ರಾಲ್‌ ಪಂಚಾಯಿತಿ ಅಧ್ಯಕ್ಷ ಮಯ್ಯದ್ದಿ ವಹಿಸಿದ್ದರು.

ಡಾ.ಮುರಳಿ ಕೇಶವ, ಮಕ್ಕಳ ತಜ್ಞ ಮೆಡಿಕೋಸ್ ಆರ್ಗನೇಸೇಷನ್, ಡಾ. ಚಿನ್ಮಯಿ ಹೆಬ್ಬಾರ್, ಕಿವಿ ಮೂಗು ಗಂಟಲು ತಜ್ಞೆ, ಗಣೇಶ್ ಸಮುದಾಯ ಆರೋಗ್ಯ ಅಧಿಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಕೆಮ್ರಾಲ್, ಗಣಪತಿ ಆಚಾರ್ಯ ಅಧ್ಯಕ್ಷ ಶ್ರೀ ಗಣೇಶೋತ್ಸವ ಸಮಿತಿ ಪಕ್ಷಿಕೆರೆ, ಧನಲಕ್ಷ್ಮೀ ಉಪಾಧ್ಯಕ್ಷೆ ವಿನಾಯಕ ಮಹಿಳಾ ಮಂಡಳಿ ಪಕ್ಷಿಕೆರೆ ಮತ್ತು ಮಂಡಳಿ ಅಧ್ಯಕ್ಷ ರಾಜೇಶ್ ಉಪಸ್ಥಿತರಿದ್ದರು.

ಮಿತ್ರ ಮಂಡಳಿ ಗೌರವಾಧ್ಯಕ್ಷ ಹಾಗೂ ರೋಟರಿ ಕ್ಲಬ್ ಕಿನ್ನಿಗೋಳಿ ಅಧ್ಯಕ್ಷ ಧನಂಜಯ ಶೆಟ್ಟಿಗಾರ್ ಸ್ವಾಗತಿಸಿದರು. ಮಹಿಳಾ ಮಂಡಳಿಯ ಪ್ರಧಾನ ಕಾರ್ಯದರ್ಶಿ ಸ್ನೇಹಿತ ವಂದಿಸಿದರು. ನರೇಶ್ ಕಾರ್ಯಕ್ರಮ ನಿರೂಪಿಸಿದರು.