ಸಾರಾಂಶ
ಮುಖ್ಯಮಂತ್ರಿಗಳು ಈ ವಿಷಯದ ಕುರಿತು ಅಂದರೆ ಸೆ.೨೨ರ ತೆಗೆದುಕೊಂಡ ನಿರ್ಣಯವನ್ನು ವಾಪಸ್ ತೆಗೆದುಕೊಂಡು ರೈತರಿಗೆ ವಿದ್ಯುತ್ ಸಂಪರ್ಕ ನೀಡುವ ಸಲುವಾಗಿ ಅನುಕೂಲ ಮಾಡಿಕೊಡಬೇಕು.
ವಿಜಯಪುರ: ಹೆಸ್ಕಾಂ ವ್ಯಾಪ್ತಿಯಲ್ಲಿ ಬರುವ ವಿಜಯಪುರ-ಗಲಕೋಟ ಜಿಲ್ಲೆಗಳಲ್ಲಿ ಬರುವ ರೈತರಿಗೆ ಮೊದಲು ಬೇಕಾಗಿದ್ದು ವಿದ್ಯುತ್ ಇತ್ತೀಚಿನ ದಿನಗಳಲ್ಲಿ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದಿಂದ ರೈತರಿಗೆ ನೀಡಿದಂಥ ಯೋಜನೆಗಳಾದ ಅಕ್ರಮ ಸಕ್ರಮ, ಶೀಘ್ರ ಸಂಪರ್ಕ ಯೋಜನೆ ಹಾಗೂ ಇನ್ನೂ ಹಲವಾರು ಯೋಜನೆಗಳನ್ನು ಅಂದಿನ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದಿಂದ ರೈತರು ಸಂಪರ್ಕ ಪಡೆಯಲು ಅನುಕೂಲವಾಗಿರುವುದಿಲ್ಲ ಮತ್ತು ಇದರಿಂದ ರೈತರಿಗೆ ಅನಾನುಕೂಲವಾಗುತ್ತದೆ ಎಂದು ಜನಪರ ಸಾಮಾಜಿಕ ಹೋರಾಟಗಾರ ಮಲ್ಲಿಕಾರ್ಜುನ ಕೆಂಗನಾಳ ಹೇಳಿದ್ದಾರೆ.
ಈ ಕುರಿತು ಹೇಳಿಕೆ ನೀಡಿದ ಅವರು, ಮುಖ್ಯಮಂತ್ರಿಗಳು ಈ ವಿಷಯದ ಕುರಿತು ಅಂದರೆ ಸೆ.೨೨ರ ತೆಗೆದುಕೊಂಡ ನಿರ್ಣಯವನ್ನು ವಾಪಸ್ ತೆಗೆದುಕೊಂಡು ರೈತರಿಗೆ ವಿದ್ಯುತ್ ಸಂಪರ್ಕ ನೀಡುವ ಸಲುವಾಗಿ ಅನುಕೂಲ ಮಾಡಿಕೊಡಬೇಕು. ಹೆಸ್ಕಾಂ ಕಂಪನಿಯ ಆರ್ಥಿಕ ವ್ಯವಸ್ಥೆಯನ್ನು ಹಾಳಾಗಲು ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಮತ್ತು ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸರ್ವರ್ ಇಲ್ಲದ ಕಾರಣ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ಖಾಲಿ ಕುಳಿತು ಹೋಗುತ್ತಿರುವುದು ಇದರಿಂದ ಲಕ್ಷಗಟ್ಟಲೆ ವೇತನ ಪಡೆಯುತ್ತಿರುವ ಸಿಬ್ಬಂದಿಗಳು ಖಾಲಿ ಕುಳಿತು ಹೋದರೆ ಇಲಾಖೆಯ ಆರ್ಥಿಕ ವ್ಯವಸ್ಥೆಯು ಹದಗೆಡುವದು ಮತ್ತು ಇಲಾಖೆ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದರೆ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನಿಗಮ ಕಚೇರಿಯ ಅಧಿಕಾರಿಗಳು ವಿಫಲರಾಗಿದ್ದಾರೆ ಮತ್ತು ಕಾಟಾಚಾರಕ್ಕೆ ವಿಜಯಪುರಕ್ಕೆ ಬಂದು ಜವಾರಿ ಊಟವನ್ನು ಸವಿದು ಇಲಾಖೆ ಸಿಬ್ಬಂದಿಯ ಜೊತೆ ಮೀಟಿಂಗ್ ಮಾಡಿ ಯಾವುದೇ ರೈತರಿಗೆ ಹಾಗೂ ಸಾರ್ವಜನಿಕರಿಗೆ ಸಿಗದೇ ಪಲಾಯನ ಮಾಡುತ್ತಾರೆ.ಮಾನ್ಯ ಮುಖ್ಯಮಂತ್ರಿಗಳು ಈ ಇಲಾಖೆಯ ಬಗ್ಗೆ ಗಮನಹರಿಸಿ ಇಲಾಖೆಯನ್ನು ನ?ದಲ್ಲಿರುವ ಕಂಪನಿಯನ್ನು ಮೇಲೆ ತರುವ ಪ್ರಯತ್ನ ಮಾಡಬೇಕು ಎಂದರು.