ಶ್ರದ್ಧಾ ಭಕ್ತಿಯಿಂದ ಜರುಗಿದ ಕೆರೆಮಾರುತೇಶ್ವರ ಜಾತ್ರೆ

| Published : Dec 27 2023, 01:31 AM IST

ಶ್ರದ್ಧಾ ಭಕ್ತಿಯಿಂದ ಜರುಗಿದ ಕೆರೆಮಾರುತೇಶ್ವರ ಜಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ವಿಗ್ರಹ ಮೂರ್ತಿಗೆ ವಿಶೇಷ ರುದ್ರಾಭೀಷೇಕ ಪೂಜೆ ಹಾಗೂ ಇಷ್ಟಾರ್ಥ ಸಿದ್ಧಿಗೆ ಜನರು ಕುಟುಂಬ ಸಮೇತ ಬಂದು ದೀರ್ಘ ದಂಡ ನಮಸ್ಕಾರ ಹಾಕಿ ದೇವರ ದರ್ಶನ ಪಡೆದು ಪುನೀತರಾದರು.

ನವಲಿ: ಕನಕಗಿರಿ ತಾಲೂಕಿನ ಚಿಕ್ಕಡಂಕನಕಲ್ ಗ್ರಾಮದ ಹೊರ ಹೊಲದಲ್ಲಿರುವ ಉದ್ಭವ ಮೂರ್ತಿ ಶ್ರೀಕೆರೆಮಾರುತೇಶ್ವರ ದೇವರ ಜಾತ್ರೆ ಶನಿವಾರ ದೇವರಿಗೆ ವಿಶೇಷ ಪೂಜೆ ಮಾಡುವ ಮೂಲಕ ವಿಜೃಂಭಣೆಯಿಂದ ನಡೆಯಿತು.

ಪ್ರತಿ ವರ್ಷದಂತೆ ಈ ಬಾರಿಯು ಕಾರ್ತಿಕೋತ್ಸವದ ಅಂಗವಾಗಿ ಗ್ರಾಮದ ಕೆರೆಮಾರುತೇಶ್ವರ ದೇವರ ಜಾತ್ರೆಯು ವಿಶೇಷವಾಗಿ ಭಕ್ತಿ ಭಾವದಿಂದ ಶನಿವಾರ ಬೆಳಗ್ಗೆ ವಿಗ್ರಹ ಮೂರ್ತಿಗೆ ವಿಶೇಷ ರುದ್ರಾಭೀಷೇಕ ಪೂಜೆ ಹಾಗೂ ಇಷ್ಟಾರ್ಥ ಸಿದ್ಧಿಗೆ ಜನರು ಕುಟುಂಬ ಸಮೇತ ಬಂದು ದೀರ್ಘ ದಂಡ ನಮಸ್ಕಾರ ಹಾಕಿ ದೇವರ ದರ್ಶನ ಪಡೆದು ಪುನೀತರಾದರು.

ನೂತನ ಉಚ್ಛಾಯ ಮೆರವಣಿಗೆ:

ಪ್ರತಿ ವರ್ಷದಂತೆ ಕಾರ್ತಿಕೋತ್ಸವ ಅಂಗವಾಗಿ ನೆಡೆಯುವ ಶ್ರೀಕೆರೆಮಾರುತೇಶ್ವರ ದೇವರಿಗೆ ಭಕ್ತಾದಿಗಳಿಂದ ತಯಾರಿಸಿದ ನೂತನ ಉಚ್ಛಾಯ ಉತ್ಸವದ ಮೆರವಣಿಗೆ ಶನಿವಾರ ಸಂಜೆ ಅದ್ಧೂರಿಯಾಗಿ ಡೊಳ್ಳು ಬಾರಿಸುವುದರ ಜತೆಗೆ ಮೆರವಣಿಗೆಯು ದೇವಾಲಯದಿಂದ ಎದುರು ಬಸವಣ್ಣ ಪಾದುಗಟ್ಟೆಯವರೆಗೆ ನಡೆಯಿತು.ವಿಶೇಷವಾಗಿ ಪ್ರಪ್ರಥಮ ಬಾರಿಗೆ ಗ್ರಾಮದ ಮಹಿಳೆಯರು ಪುರುಷರೊಂದಿಗೆ ಜೊತೆಗೂಡಿ ತಾವೇ ಸ್ವತಃ ದೇವರ ಉಚ್ಛಾಯ ಎಳೆಯುವ ಮೂಲಕ ಗಮನ ಸೆಳೆದರು.

ಗ್ರಾಮದ ಕೆರೆ ಮಾರುತೇಶ್ವರ ಸೇವಾ ಟ್ರಸ್ಟ್ ವತಿಯಿಂದ ದೇವರ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಸುಗಮ ದರ್ಶನದ ವ್ಯವಸ್ಥೆ ಹಾಗೂ ಮಹಾ ಪ್ರಸಾದ ವ್ಯವಸ್ಥೆಯನ್ನು ಸಹ ಮಾಡಿ ದೇವರ ಕೃಪೆಗೆ ಪಾತ್ರರಾದರು.