ವೈಭವದ ದುರ್ಗಾದೇವಿ ಜಾತ್ರೆ

| Published : May 26 2024, 01:39 AM IST

ಸಾರಾಂಶ

ಕೆರೂರ ಪಟ್ಟಣದ ಹರಣಶಿಕಾರಿ ಜನಾಂಗದ ಆರಾಧ್ಯ ದೇವಿ ದುರ್ಗಾ ಮಾತೆಯ ಜಾತ್ರೆ ಶುಕ್ರವಾರ ವೈಭವದಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಕೆರೂರ

ಪಟ್ಟಣದ ಹರಣಶಿಕಾರಿ ಜನಾಂಗದ ಆರಾಧ್ಯ ದೇವಿ ದುರ್ಗಾ ಮಾತೆಯ ಜಾತ್ರೆ ಶುಕ್ರವಾರ ವೈಭವದಿಂದ ಜರುಗಿತು. ಬೆಳಗ್ಗೆ ಅಭಿಷೇಕ ವಿವಿಧ ಪೂಜಾ ವಿಧಿವಿಧಾನಗಳು ಜರುಗಿದವು. ಸಂಜೆ 6 ಗಂಟೆಗೆ ಹರಿಣಶಿಕಾರಿ ಸಮಾಜದ ಅಧ್ಯಕ್ಷ ಬಿ.ಬಿ. ಸೂಳಿಕೇರಿ ನೇತೃತ್ವದಲ್ಲಿ ಭಕ್ತರು ದೇವಿಗೆ ಉಡಿ ತುಂಬಿ ಹರಕೆ ತೀರಿಸಿದರು. ನಂತರ ದೇವಿಯ ಅರ್ಚಕ ಬಾಬು ಪೂಜಾರ ದೇವಿಯ ನಾಮಸ್ಮರಣೆ ಪಠಣ ಮಾಡುತ್ತ ತೆಂಗಿನ ಕಾಯಿಗಳನ್ನು ತಲೆಗೆ ಹೊಡೆದುಕೊಂಡು ಹೋಳು ಮಾಡುವ ದೃಶ್ಯ ರೋಮಾಂಚನಕಾರಿಯಾಗಿತ್ತು. 9 ಕಾಯಿಗಳನ್ನು ಪುಡಿ ಪುಡಿ ಮಾಡಿದ ಬಾಬು ಪೂಜಾರ ನಂತರ ಜನರ ಆಶೋತ್ತರಗಳಿಗೆ ಸ್ಪಂದಿಸಿ ದೇವರು ಹೇಳಿ ಸಮಾಧಾನ ಪಡಿಸುವುದರ ಜೊತೆಗೆ ಮಳೆ ಬೆಳೆ ಭವಿಷ್ಯ ಸಾರಿದ. ಜನರು ಜೈಕಾರ ಹಾಕುತ್ತ ಸಂಭ್ರಮಿಸಿದರು. ಪಪಂ ಸದಸ್ಯ ಬಸವರಾಜ ಹರಣಶಿಕಾರಿ ಅಧ್ಯಕ್ಷತೆ ವಹಿಸಿದ್ದರು. ಪಪಂ ಮಾಜಿ ಸದಸ್ಯ ಬಸಪ್ಪ ಹರಣಶಿಕಾರಿ, ದಾದಾಫೀರ್‌ ಅತ್ತಾರ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.