ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ (ಕೆ.ಎಂ.ಎಸ್.ಎ.) ವತಿಯಿಂದ ಭಾನುವಾರ ವಿರಾಜಪೇಟೆ- ಅಮ್ಮತಿ ಮುಖ್ಯರಸ್ತೆಯಲ್ಲಿರುವ ಕೊಮ್ಮೆತೋಡು ಸೇತುವೆ ಬಳಿಯ ಭತ್ತದ ಗದ್ದೆಯಲ್ಲಿ ಮೊದಲನೇ ವರ್ಷದ ಜಿಲ್ಲಾ ಮಟ್ಟದ ಮುಕ್ತ ಕೆಸರುಗದ್ದೆ ಕ್ರೀಡಾ ಸಂಗಮ-2026

ಮಡಿಕೇರಿ: ಈ ತಂತ್ರಜ್ಞಾನ ಯುಗದಲ್ಲಿ ಆಧುನಿಕ ರೂಪದಲ್ಲಾದರೂ ಕೆಸರುಗದ್ದೆ ಕ್ರೀಡಾಕೂಟ ನಡೆಯುತ್ತಿರುವುದು ಉತ್ತಮ ಬೆಳವಣಿಗೆ. ಈ ಮೂಲಕ ನಮ್ಮ ಮೂಲ ಸಂಸ್ಕೃತಿ ರಕ್ಷಣೆಯಾಗುತ್ತಿದೆ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ)ಅಧ್ಯಕ್ಷ ದುದ್ದಿಯಂಡ ಎಚ್. ಸೂಫಿ ಹಾಜಿ ಹೇಳಿದರು.

ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ (ಕೆ.ಎಂ.ಎಸ್.ಎ.) ವತಿಯಿಂದ ಭಾನುವಾರ ವಿರಾಜಪೇಟೆ- ಅಮ್ಮತಿ ಮುಖ್ಯರಸ್ತೆಯಲ್ಲಿರುವ ಕೊಮ್ಮೆತೋಡು ಸೇತುವೆ ಬಳಿಯ ಭತ್ತದ ಗದ್ದೆಯಲ್ಲಿ ಮೊದಲನೇ ವರ್ಷದ ಜಿಲ್ಲಾ ಮಟ್ಟದ ಮುಕ್ತ ಕೆಸರುಗದ್ದೆ ಕ್ರೀಡಾ ಸಂಗಮ-2026 ಅನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಬಿಜೆಪಿ ಮುಖಂಡ ಗುಮ್ಮಟ್ಟೀರ ಕಿಲನ್ ಗಣಪತಿ ಮಾತನಾಡಿ, ಪ್ರಸ್ತುತ ಸಾಮಾಜಿಕ ಪರಿಸ್ಥಿತಿಯಲ್ಲಿ ಜಾತಿ, ಮತ, ಜನಾಂಗಗಳ ನಡುವೆ ವಿವಿಧತೆಯಲ್ಲಿ ಏಕತೆಯನ್ನು ತರಲು ಕ್ರೀಡಾಕೂಟ ಪ್ರಬಲವಾದ ಸಾಧನವಾಗಿದೆ ಎಂದರು.

ಕೆ.ಎಂ.ಎಸ್.ಎ. ಗೌರವಾಧ್ಯಕ್ಷರಾದ ಅಕ್ಕಳತಂಡ ಎಸ್. ಮೊಯ್ದು ಅಧ್ಯಕ್ಷತೆ ವಹಿಸಿದ್ದರು. ಕೊಮ್ಮೆತೊಡು (ಐಮಂಗಲ) ಜಮಾಅತ್ ಅಧ್ಯಕ್ಷರಾದ ಪೊಯಕೆರ ಎಸ್. ರಫೀಕ್, ಬೆಮ್ಮತಿ ಜಮಾಅತ್ ಅಧ್ಯಕ್ಷರಾದ ಕೆ. ಎಂ. ಅಬ್ದುಲ್ ರೆಹಮಾನ್ (ಬಾಪು), ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಕೋಳುಮಂಡ ರಫೀಕ್, ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್, ಪೊನ್ನಂಪೇಟೆಯ ಕೂರ್ಗ್ ರೈಸ್ ಟ್ರೇಡರ್ಸ್ ನ ಮಾಲೀಕರಾದ ಕೆ. ಎಂ. ಇಬ್ರಾಹಿಂ, ಅಮ್ಮತ್ತಿಯ ಸಮಾಜ ಸೇವಕರಾದ ಅನಿಲ್, ಗೋಣಿಕೊಪ್ಪಲಿನ ಉಮ್ಮರ್ ಮುಖ್ಯ ಅತಿಥಿಗಳಾಗಿದ್ದರು.

ಕೆ.ಎಂ.ಎಸ್.ಎ. ಉಪಾಧ್ಯಕ್ಷ ಕೆಂಗೋಟಂಡ ಎಸ್. ಸೂಫಿ, ಕುಂಡಂಡ ಎ. ರಜ್ಹಾಕ್, ಕೋಶಾಧಿಕಾರಿ ಆಲೀರ ಎ. ಅಬ್ದುಲ್ ಅಜೀಜ್ ಸೇರಿದಂತೆ ಆಡಳಿತ ಮಂಡಳಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕೆ.ಎಂ.ಎಸ್.ಎ.ಅಧ್ಯಕ್ಷರಾದ ಆಲೀರ ಎಂ. ರಶೀದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಎಂ.ಎಸ್.ಎ. ಪ್ರಧಾನ ಕಾರ್ಯದರ್ಶಿ ಮೀತಲ್ ತಂಡ ಎಂ. ಇಸ್ಮಾಯಿಲ್ ಸ್ವಾಗತಿಸಿದರು. ಕ್ರೀಡಾ ಸಂಚಾಲಕರಾದ ಕತ್ತಣಿರ ಎ. ಅಂದಾಯಿ ವಂದಿಸಿದರು. ಕಾರ್ಯದರ್ಶಿ ಬಲ್ಯತ್ಕಾರಂಡ ಯು. ಅಶ್ರಫ್ ನಿರ್ವಹಿಸಿದರು.