ಸಾರಾಂಶ
ರೈತ ಸಂಘಟನೆಗಳವರು ಆಳುವ ಸರ್ಕಾರಗಳು ನಮ್ಮ ಪರವಾದ ಯೋಜನೆ ಜಾರಿಗೆ ತರಲಿ ಎಂದು ಬಯಸುವುದು ಸಹಜ, ಆ ದಿಸೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಕೆಲಸ ನಿರ್ವಹಿಸುತ್ತಿದೆ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ರೈತ ದೇಶದ ಬೆನ್ನೆಲುಬಾಗಿದ್ದು, ಆತ ಉತ್ತಿ ಬಿತ್ತಿ ಬೆಳೆದರೆ ಮಾತ್ರ ಸಕಲ ಜೀವರಾಶಿಗಳು ಸಂತಸ ಮತ್ತು ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಹೇಳಿದರು.ತಾಲೂಕಿನ ಕೆಸ್ತೂರುಕೊಪ್ಪಲು ಗ್ರಾಮದಲ್ಲಿ ನಡೆದ ಕರ್ನಾಟಕ ರಾಜ್ಯ ರೈತ ಸಂಘ ರೈತ ಪರ್ವ ಗ್ರಾಮ ಘಟಕ ಉದ್ಘಾಟನೆ ಮತ್ತು ಸ್ಪರ್ಧಾ ಸಮ್ಮಿಲನ ಸಹ ಬಾಳ್ವೆಗೆ ವರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಸಂಘಟಿತರಾಗಿ ಇರಬೇಕೆಂದರು.
ರೈತ ಸಂಘಟನೆಗಳವರು ಆಳುವ ಸರ್ಕಾರಗಳು ನಮ್ಮ ಪರವಾದ ಯೋಜನೆ ಜಾರಿಗೆ ತರಲಿ ಎಂದು ಬಯಸುವುದು ಸಹಜ, ಆ ದಿಸೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಕೆಲಸ ನಿರ್ವಹಿಸುತ್ತಿದೆ ಎಂದರು.ಜನಪರ ಯೋಜನೆಗಳ ಮೂಲಕ ದೇಶದಲ್ಲಿಯೆ ಮಾದರಿಯಾಗಿರುವ ರಾಜ್ಯ ಸರ್ಕಾರ ಅನ್ನದಾತನ ನೆರವಿಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕ ಪ್ರಾಮಾಣಿಕವಾಗಿ ದುಡಿಯುತ್ತಿದೆ ಎಂದು ಮಾಹಿತಿ ನೀಡಿದರು.
ಗ್ರಾಮದ ವಕೀಲೆ ಕೆ. ಪ್ರಭಾವತಿ, ಸಾಧನೆ ಮಾಡಿದ ಮಹಿಳೆ ಪ್ರತಿಮಾ, ಗ್ರಾಪಂ ಅಧ್ಯಕ್ಷೆ ಮಂಜುಳಾ ಅವರನ್ನು ರೈತ ಸಂಘದಿಂದ ಸನ್ಮಾನಿಸಲಾಯಿತು,ಕರ್ನಾಟಕದ ರಾಜ್ಯ ರೈತ ಸಂಘ ರೈತ ಪರ್ವ ರಾಜ್ಯಾಧ್ಯಕ್ಷ ಅರುಣ್ ಕುಮಾರ್, ಗೌರವಾಧ್ಯಕ್ಷ ಜೆ.ಎಂ. ಕುಮಾರ್, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ತಾರಾಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಉಮಾಪತಿ, ರಾಜ್ಯ ಮಹಿಳಾ ಘಟಕದ ಮಹಿಳಾ ಘಟಕದ ಪ್ರ ಕಾರ್ಯದರ್ಶಿ ರೂಪ, ಗ್ರಾಮ ಘಟಕದ ಅಧ್ಯಕ್ಷ ಕೆ.ಎಚ್. ಜಯರಾಮೇಗೌಡ ಮಾತನಾಡಿದರು.
ಸಿಡಿಪಿಓ ಅಣ್ಣಯ್ಯ, ಕೆಸ್ತೂರು ಕೊಪ್ಪಲು ಗ್ರಾಪಂ ಅಧ್ಯಕ್ಷೆ ಮಂಜುಳಾ, ರಾಜ್ಯ ಕಾರ್ಯಾಧ್ಯಕ್ಷ ವೈ.ಎಲ್. ನವೀನ್ ಕುಮಾರ್, ಕೆ.ಆರ್. ನಗರ ತಾಲೂಕು ಅಧ್ಯಕ್ಷ ರಾಘವೇಂದ್ರ, ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಗೌರಮ್ಮ, ನಂಜನಗೂಡು ತಾಲೂಕು ರೈತ ಸಂಘದ ಅಧ್ಯಕ್ಷ ಕೃಷ್ಣಪ್ಪ, ಎಚ್.ಡಿ. ಕೋಟೆ ತಾಲಾಕು ರೈತ ಸಂಘದ ಕುಮಾರ್, ಯುವ ಅಧ್ಯಕ್ಷ ಸಿದ್ದಲಿಂಗೇಗೌಡ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಮ್ಮ, ರಾಜ್ಯ ಕಾರ್ಯದರ್ಶಿ ಚಾಮರಾಜ್ ಇದ್ದರು.