ಸಾರಾಂಶ
ಡಿಸಿಸಿ ಬ್ಯಾಂಕ್‌ನ ಮಾಜಿ ಅಧ್ಯಕ್ಷರ ಮಗನ ಆಸ್ಪತ್ರೆಯ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡಲು ಎಂ.ಜಿ.ಮಾರುಕಟ್ಟೆಯಲ್ಲಿರುವ ೧೪೦ ಮಳಿಗೆಗಳನ್ನು ಕಾನೂನು ಬಾಹಿರವಾಗಿ ನೆಲಸಮ ಮಾಡಲಾಗಿದೆ. ನಗರಸಭೆ ಸಭೆಯ ಅನುಮತಿಯನ್ನು ಪಡೆಯದೆ ಏಕಾ ಏಕಿ ಮಳಿಗೆಗಳನ್ನು ಕೆಡವಿದ್ದಾರೆ, ಈ ಹಿನ್ನಲೆಯಲ್ಲಿ ೧೪೦ ಕುಟುಂಬಗಳು ಇಂದು ಬೀದಿಗೆ ಬಂದಿವೆ
ಕನ್ನಡಪ್ರಭ ವಾರ್ತೆ ಕೆಜಿಎಫ್ಸಾಲ ತರುವ ಅಗತ್ಯವಿಲ್ಲ.
ಗುರುವಾರ ಹಮ್ಮಿಕೊಂಡಿದ್ದ ಸಮಿತೆ ಸಭೆಯು ಶಾಸಕರೆ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ, ಶಾಸಕರ ತಂದೆ ಪ್ರಭಾವಿ ಸಚಿವರಾಗಿದ್ದಾರೆ. ಶಾಸಕರು ಸಹ ಮುಂದಿನ ಅವಧಿಗೆ ಸಚಿವ ಸ್ಥಾನದ ರೇಸ್‌ನಲ್ಲಿ ಇದ್ದು, ಮಾರುಕಟ್ಟೆಯ ಅಭಿವೃದ್ದಿಗೆ ಶಾಸಕರು ಸರಕಾರದಿಂದ ಅನುದಾನವನ್ನು ತಂದು ಅಭಿವೃದ್ದಿಪಡಿಸುವುದನ್ನು ಬಿಟ್ಟು ಸಾಲವನ್ನು ತಂದು ಅಭಿವೃದ್ದಿಪಡಿಸುವ ಅಗತ್ಯವೇನು ಎಂದು ಸಮಿತಿ ಅಧ್ಯಕ್ಷ ಜ್ಯೋತಿಬಸು ಶಾಸಕರನ್ನು ಪ್ರಶ್ನೆ ಮಾಡಿದ್ದಾರೆ.ಮಾಲೂರು ಶಾಸಕ ಎಸ್.ನಂಜೇಗೌಡ ೨ ಸಾವಿರ ಕೋಟಿ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ದಿಪಡಿಸುತ್ತಿದ್ದಾರೆ. ಶಾಸಕಿ ರೂಪಕಲಾ ಸಹ ಅನುದಾನವನ್ನು ತಂದು ಎಂ.ಜಿ.ಮಾರುಕಟ್ಟೆ ಅಭಿವೃದ್ದಿಪಡಿಸಲಿ ಎಂದು ಶಾಸಕರನ್ನು ಒತ್ತಾಯಿಸಿದರು. ಅಪ್ತನ ಆಸ್ಪತ್ರೆ ನಿರ್ಮಾಣಕ್ಕೆ ವೇದಿಕೆ ಡಿಸಿಸಿ ಬ್ಯಾಂಕ್‌ನ ಮಾಜಿ ಅಧ್ಯಕ್ಷರ ಮಗನ ಆಸ್ಪತ್ರೆಯ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡಲು ಎಂ.ಜಿ.ಮಾರುಕಟ್ಟೆಯಲ್ಲಿರುವ ೧೪೦ ಮಳಿಗೆಗಳನ್ನು ಕಾನೂನು ಬಾಹಿರವಾಗಿ ನೆಲಸಮ ಮಾಡಲಾಗಿದೆ. ನಗರಸಭೆ ಸಭೆಯ ಅನುಮತಿಯನ್ನು ಪಡೆಯದೆ ಏಕಾ ಏಕಿ ಮಳಿಗೆಗಳನ್ನು ಕೆಡವಿದ್ದಾರೆ, ಈ ಹಿನ್ನಲೆಯಲ್ಲಿ ೧೪೦ ಕುಟುಂಬಗಳು ಇಂದು ಬೀದಿಗೆ ಬಂದಿರುವುದಾಗಿ ಸಮಿತಿಯ ಅಧ್ಯಕ್ಷ ಜ್ಯೋತಿಬಸು ವಿವರಿಸಿದರು.ನಗರಸಭೆಯ ೨೩೧ ಕಾಯ್ದೆ ಉಲ್ಲಂಘನೆ:ನಗರಸಭೆ ಅಂಗಡಿಗಳನ್ನು ತೆರವುಗೊಳಿಸುವ ಮುನ್ನ ೨೩೧ ಕಾಯ್ದೆ ಉಲ್ಲಂಘಸಿ ಶಾಸಕರು ಪ್ರಭಾವಿ ಮುಖಂಡನು ಆಶ್ಪತ್ರೆ ನಿರ್ಮಿಸಲು ಬಡವರ ಅಂಗಡಿಗಳನ್ನು ನೆಲಸಮ ಮಾಡಿದ್ದಾರೆ, ಇದರಿಂದ ಬಡವರ ಅಹಾರವನ್ನು ಕಿತ್ತುಕೊಂಡಿದ್ದಾರೆ, ನಗರಸಭೆ ವಿಚಾರದಲ್ಲಿ ಶಾಸಕರಿಗೆ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಅವಕಾಶವಿಲ್ಲ, ನಗರಸಭೆ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ನಗರಸಭೆಯ ಆಡಳಿತವನ್ನು ಜಿಲ್ಲಾಧಿಕಾರಿಗಳು ವ್ಯಾಪ್ತಿಗೆ ಬರಲಿದೆ ಎಂದರು. ಅಧಿಕಾರ ದುರುಪಯೋಗನರಸಭೆ ಸ್ಥಳೀಯ ಸಂಸ್ಥೆಯಾಗಿದ್ದು, ಶಾಸಕರು ಸಲಹೆ ಮತ್ತು ಸೂಚನೆಗಳನ್ನು ನೀಡಲು ಸಾಧ್ಯ, ಶಾಸಕರು ನಗರಸಭೆ ವಿಚಾರದಲ್ಲಿ ಮೂಗುತೂರಿಸುವಂತಿಲ್ಲ, ನಗರಸಭೆ ಅಧಿಕಾರಿಗಳನ್ನು ಶಾಸಕರು ಮನೆಗೆ ಕರೆಸಿಕೊಂಡು ಕಾನೂನು ಬಾಹಿರ ಕೆಲಸಗಳಿಗೆ ಬಳಸಿಕೊಳ್ಳುತ್ತಿರುವುದು ಸರಿಯಲ್ಲ ಎಂದರು, ನಗರಸಭೆ ಅವಧಿ ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ನಗರಸಭೆ ಆಡಳಿತಾಧಿಕಾರಿಯಾಗಿದ್ದು, ಎಂ.ಜಿ. ಮಾರುಕಟ್ಟೆಯ ಅಭಿವೃದ್ದಿಗೆ ಹಾಗೂ ನೆಲಸಮಗೊಳಿಸಲು ಜಿಲ್ಲಾಧಿಕಾರಿಗಳ ಅದೇಶವಿದೆಯೇ ಎಂದು ಶಾಸಕರನ್ನು ಪ್ರಶ್ನೆ ಮಾಡಿದ್ದಾರೆ.
ಶಾಸಕರು ಎಂ.ಜಿ. ಮಾರುಕಟ್ಟೆ ಅಭಿವೃದ್ದಿಪಡಿಸುವ ಮುನ್ನ ಅಂಗಡಿಗಳಿಂದ ಜೀವನ ನಡೆಸುತ್ತಿದ್ದವರಿಗೆ ರ‍್ಯಾಯ ವ್ಯವಸ್ಥೆ ಕಲ್ಲಿಸಬೇಕೆಂದು ಸಭೆಯಲ್ಲಿ ಒತ್ತಾಯಿಸಿದರು..
;Resize=(128,128))
;Resize=(128,128))
;Resize=(128,128))
;Resize=(128,128))