ಸಾರಾಂಶ
ಕನ್ನಡಪ್ರಭ ವಾರ್ತೆ ಕೆಜಿಎಫ್
ಬಂಗಾರಪೇಟೆ ತಾಲೂಕು ಮತ್ತು ಕೆಜಿಎಫ್ ತಾಲೂಕಿಗೆ ಪ್ರತ್ಯೇಕ ನಗರಾಭಿವೃದ್ಧಿ ಪ್ರಾಧಿಕಾರ ಮಾಡಲು ಪ್ರಾಧಿಕಾರದ ಅಧ್ಯಕ್ಷ ಗೋಪಾಲರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆ ತೀರ್ಮಾನ ಕೈಗೊಂಡಿತು.ಈ ಸಂದರ್ಭದಲ್ಲಿ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿ, ಕೆಜಿಎಫ್ ನಗರಾಭಿವೃದ್ದಿ ಪ್ರಾಧಿಕಾರವು ಕೆಜಿಎಫ್‌ನಲ್ಲೇ ಕಾರ್‍ಯನಿರ್ವಹಿಸಲಿದೆ. ಪ್ರಾಧಿಕಾರ ಪ್ರತ್ಯೇಕ ಮಾಡುವುದರಿಂದ ಬಂಗಾರಪೇಟೆ ಮತ್ತು ಕೆಜಿಎಫ್ ಎರಡು ತಾಲೂಕುಗಳ ಸಮಗ್ರ ಅಭಿವೃದ್ದಿಗೆ ಪೂರಕವಾಗಲಿದೆ. ಇದರಿಂದ ನಗರಗಳ ಸರ್ವತೋಮುಖ ಅಭಿವೃದ್ದಿಗೆ ಅಧಿಕಾರಿಗಳು ಕೆಲಸ ಮಾಡಲು ಸಲಭವಾಗಲಿದೆ ಎಂದರು.
ತಾಲೂಕು ಅಭಿವೃದ್ಧಿಗೆ ಪೂರಕಕೆಜಿಎಫ್ ತಾಲೂಕಿನ ಬೇತಮಂಗಲ, ಕ್ಯಾಸಂಬಳ್ಳಿ, ಸುದಂರಪಾಳ್ಯ ಹಾಗೂ ಆಂದ್ರ ಗಡಿಭಾಗದ ಎಪಿಎಂಸಿ ಮಾರುಕಟ್ಟೆ ಕೆಜಿಎಫ್ ನಗರಾಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಗೆ ಬರಲಿದ್ದು ಮುಂದಿನ ದಿನಗಳಲ್ಲಿ ಕೆಜಿಎಫ್ ತಾಲೂಕು ಸಮಗ್ರ ಅಭಿವೃದ್ದಿಗೆ ಪೂರಕವಾಗಲಿದೆ ಎಂದರು.
ಬಂಗಾರಪೇಟೆ ತಾಲೂಕಿನ ಬೂದಿಕೊಟೆ, ಕಾಮಸಮುದ್ರಂ ಎರಡು ಹೋಬಳಿಗಳ ೫ ಕಿಮೀ ವ್ಯಾಪ್ತಿಯಲ್ಲಿ ಬರುವ ಬಂಗಾರಪೇಟೆ ನಗರಾಭಿವೃದ್ದಿ ಪ್ರಾಧಿಕಾರವು ಕಾರ್‍ಯನಿರ್ವಹಿಸಲಿದೆ ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದ್ದು, ಪ್ರಾಧಿಕಾರವು ಪ್ರತ್ಯೇಕವಾಗುವುದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದರು.ಸ್ಥಳಾಂತರ ಇಲ್ಲ: ಶಾಸಕಿ ಶಾಸಕಿ ರೂಪಕಲಾಶಶಿಧರ್ ಮಾತನಾಡಿ, ಕೆಜಿಎಫ್ ತಾಲೂಕಿನ ಜನರು ಯಾವುದೇ ಗೊಂದಲಕ್ಕೆ ಒಳಗಾಬಾರದು, ಕೆಜಿಎಫ್ ತಾಲೂಕಿಗೆ ಬೇತಮಂಗಲ, ಕ್ಯಾಸಂಬಳ್ಳಿ, ಸುಂದರಪಾಳ್ಯ ಹೋಬಳಿಗಳು ನಗರಾಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಗೆ ಸೇರ್ಪಡೆ ಆಗುವುದರಿಂದ ನಗರವು ಇನ್ನಷ್ಟು ಅಭಿವೃದ್ದಿ ಕಾಣಲಿದೆ, ಇದರ ಜೊತೆಗೆ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಕಾರ್ಖಾನೆಗಳು ಬರಲಿದ್ದು ಪ್ರಾಧಿಕಾರವು ಉತ್ತಮ ಕೆಲಸ ಮಾಡಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಡಿ.ಕೆ.ಹಳ್ಳಿ ಗ್ರಾಪಂ ವ್ಯಾಪ್ತಿಯ ದಾಸರ ಹೊಸಹಳ್ಳಿ ಸರ್ವೇ ನಂ. ೬೬ ರ. ೧೬ ಎಕರೆ ಕೆರೆ ಪ್ರದೇಶವನ್ನು ೧.೨೦ ಕೋಟಿ ಅಭಿವೃದ್ದಿ ಮಾಡಲು ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು. ರಾಬರ್ಟ್‌ಸನ್‌ಪೇಟೆ ಹೋಬಳಿಯ ಮಾರಿಕುಪ್ಪಂ ವಸತಿ ನಿವೇಶನ ವಿನ್ಯಾಸಕ್ಕೆ ತಾಂತ್ರಿಕ ಒಪ್ಪಿಗೆ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.ಇಂಟಿಗ್ರೇಟೆಡ್ ಟೌನ್‌ಶಿಪ್
ಇಂಟಿಗ್ರೇಟೆಡ್ ಟೌನ್ ಶೀಫ್‌ಗಾಗಿ ಕಾಯ್ದಿರಿಸಿರುವ ೨೯೪ ಎಕರೆ ಪ್ರದೇಸದಲ್ಲಿ ಬೆಳೆದಿರುವ ಮರಗಿಡಗಳನ್ನು ಕಟಾವು ಮಾಡುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಪ್ರಾಧಿಕಾರದ ಒಡೆತನದಲ್ಲಿರುವ ಒಟ್ಟು ೪೧ ನಾಗರೀಕ ಸೌಲಭ್ಯ ನಿವೇಶಗಳನ್ನು ಮಾರಾಟ ಮಾಡಲು ಸರಕಾರದಿಂದ ಅನುಮತಿ ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು.ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರವು ರಚನೆ ಮಾಡಿರುವ ರಾಜೀವ್ ಗಾಂಧಿ ವಸತಿ ಬಡಾವಣೆಯ ಪ್ರಾಧಿಕಾರದ ಎರಡು ನಿವೇಶನಗಳನ್ನು ಒಟ್ಟುಗೂಡಿಸಲು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. ವಲಯ ನಿಯಮಾವಳಿ ಅವಕಾಶದಂತೆ ನರ್ಸಿಂಗ್ ಹೋಂ, ಕಂ, ಹಾಸ್ಪಿಟೆಲ್ ನಿರ್ಮಾಣ ಮಾಡಲು ೨ ಕಟ್ಟಡಗಳ ನಕ್ಷೆಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಅನಧಿಕೃತ ಕಟ್ಟಡಗಳ ತೆರವುನಗರಾಭಿವೃದ್ದಿ ಪ್ರಾಧಿಕಾರದ ಅನುಮತಿ ಇಲ್ಲದೆ ಕಟ್ಟಗಳನ್ನು ನಿರ್ಮಿಸುತ್ತಿವವರ ವಿರುದ್ದ ಆಯುಕ್ತರು ಕಠಿಣ ಕ್ರಮ ಕೈಗೊಂಡು ಕಟ್ಟವನ್ನು ನೆಲಸಮ ಮಾಡಲು ಸಭೆಯಲ್ಲಿ ಸೂಚನೆ ನೀಡಲಾಯಿತು. ಅಗತ್ಯವಿದ್ದಲ್ಲಿ ಪೊಲೀಸ್ ಸಹಕಾರ ಪಡೆದುಕೊಂಡು ಅನಧಿಕೃತ ಕಟ್ಟಡಗಳಿಗೆ ಕಡಿವಾಣ ಹಾಕಬೇಕೆಂದು ಬಂಗಾರಪೇಟೆ ಮತ್ತು ಕೆಜಿಎಫ್ ಕ್ಷೇತ್ರದ ಶಾಸಕರು ಆಯುಕ್ತರಿಗೆ ಸೂಚನೆ ನೀಡಿದರು.ಪ್ರಾಧಿಕಾರದ ಅಧ್ಯಕ್ಷ ಗೋಪಾಲರೆಡ್ಡಿ, ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ, ಪ್ರಾಧಿಕಾರದ ಆಯುಕ್ತ ಧರ್ಮೇಂದ್ರ, ನಗರಸಭೆ ಪೌರಾಯುಕ್ತ ಪವನ್‌ಕುಮಾರ್, ಎಇಇ ಮಂಜುನಾಥ್ ಇದ್ದರು.